ಕರ್ನಾಟಕ ಲೋಕಸಭಾ ಚುನಾವಣೆ 2024, ದಕ್ಷಿಣ ಕನ್ನಡದಲ್ಲಿ ಗರಿಷ್ಠ, ಎಲ್ಲಿ ಕನಿಷ್ಠ ಮತದಾನ?

By Suvarna NewsFirst Published Apr 26, 2024, 4:08 PM IST
Highlights

ಕರ್ನಾಟಕ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಜನರು ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ. ಮತದಾನ ಅಂತ್ಯಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ. ಇದುವರೆಗೆ ಕರ್ನಾಟಕ 14 ಕ್ಷೇತ್ರಗಳ ಪೈಕಿ ಸರಾಸರಿ ಮತದಾನ ಪ್ರಮಾಣವೆಷ್ಟು? ಇಲ್ಲಿದೆ ವಿವರ.
 

ಬೆಂಗಳೂರು(ಏ.26) ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ದೇಶಾದ್ಯಂತ ನಡೆಯುತ್ತಿದೆ. ಕರ್ನಾಟಕದಲ್ಲಿನ 2 ಹಂತದ ಮತದಾನ ಪೈಕಿ ಇಂದು ಮೊದಲ ಹಂತದ ಮತದಾನ. ಮತದಾರರು ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಚುನಾವಣಾ ಆಯೋಗ ನೀಡಿರುವ ಇದುವರೆಗಿನ(ಮಧಾಹ್ಯ 3 ಗಂಟೆವರೆಗೆ) ಅಂಕಿ ಅಂಶದ ಪ್ರಕಾರ, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿರುವ 14 ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡದಲ್ಲಿ ಗರಿಷ್ಠ ಮತದಾನವಾಗಿದೆ. ಇನ್ನು ಬೆಂಗಳೂರು ಸೆಂಟ್ರಲ್‌ನಲ್ಲಿ ಕನಿಷ್ಠ ಮತದಾನ ದಾಖಲಾಗಿದೆ.

ದಕ್ಷಿಣ ಕನ್ನಡದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಶೇಕಡ 58.76ರಷ್ಟು ಮತದಾನವಾಗಿದೆ. ಇನ್ನು ಕನಿಷ್ಠ ಮತದಾನ ದಾಖಲಾಗಿರುವ ಬೆಂಗಳೂರು ಸೆಂಟ್ರಲ್‌ನಲ್ಲಿ ಶೇಕಡಾ 40.10 ರಷ್ಟು ಮತದಾನವಾಗಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ದಾಖಲಾಗಿಲ್ಲ. ಈ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 49.62ರಷ್ಟು ಮತದಾನ ದಾಖಲಾಗಿದೆ.

ಕುಮಾರಸ್ವಾಮಿ, ಪಜ್ವಲ್ ಸೋಲಿಸಲು ಕಾಂಗ್ರೆಸ್‌ ಕಾರ್ಡ್ ಹಂಚಿದೆ : ದೇವೇಗೌಡ ಗಂಭೀರ ಆರೋಪ

ಉಡುಪಿ ಚಿಕ್ಕಮಗಳೂ ಕ್ಷೇತ್ರದಲ್ಲಿ 57.49ರಷ್ಟು ಮತದಾನವಾಗಿದೆ. ಇನ್ನು ಹಾಸನದಲ್ಲಿ ಶೇಕಡಾ 55.92, ಚಿತ್ರದುರ್ಗದಲ್ಲಿ ಶೇಕಡಾ 52.14 ರಷ್ಟು ಮತದಾನವಾಗಿದೆ. ಇನ್ನು ತುಮಕೂರಿನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 3ಗಂಟೆ ವರೆಗೆ ಶೇಕಡಾ 56.62ರಷ್ಟು ಮತದಾನವಾಗಿದೆ. ಮಂಡ್ಯದಲ್ಲಿ ಶೇಕಡಾ 57.44, ಮೈಸೂರಿನಲ್ಲಿ ಶೇಕಡಾ 53.55, ಚಾಮರಾಜನಗರದಲ್ಲಿ ಶೇಕಡಾ 53.55ರಷ್ಟು, ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 49.62 ರಷ್ಟು, ಬೆಂಗಳೂರು ಉತ್ತರದಲ್ಲಿ ಶೇಕಡಾ 41.12ರಷ್ಟು, ಬೆಂಗಳೂರು ಸೆಂಟ್ರಲ್‌ನಲ್ಲಿ ಶೇಕಡಾ 40.10, ಬೆಂಗಳೂರು ದಕ್ಷಿಣದಲ್ಲಿ ಶೇಕಡಾ 40.77ರಷ್ಟು, ಚಿಕ್ಕಬಳ್ಳಾಪುರದಲ್ಲಿ ಶೇಕಡಾ 55.90 ಹಾಗೂ ಕೋಲಾರದಲ್ಲಿ ಶೇಕಡಾ 54.66 ರಷ್ಟು ಮತದಾನವಾಗಿದೆ.

ರಾಜ್ಯದಲ್ಲಿ ಇಂದು ನಡೆಯುತ್ತಿರುವ ಮೊದಲ ಹಂತದ ಮತಾನದಲ್ಲಿ 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 14 ಲೋಕಸಭಾ ಕ್ಷೇತ್ರಗಳ 30,577 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

ಲೋಕಸಭಾ ಚುನಾವಣೆ 2024: ಉತ್ತರ ಕನ್ನಡ ಅಖಾಡಲ್ಲಿ ಹೊಸ ಮುಖಗಳ ತೀವ್ರ ಹಣಾಹಣಿ..!

click me!