
ಚಿಕ್ಕಮಗಳೂರು (ಜೂ.10): ಶೋಭಾ ಕರಂದ್ಲಾಜೆ ಅವರಿಗೂ ಬಸ್ ಪ್ರಯಾಣ ಉಚಿತ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ದುರಹಂಕಾರವನ್ನು ತೋರ್ಪಡಿಸಿದೆ. ಇದಕ್ಕೆ ಜನರೇ ಉತ್ತರ ನೀಡಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಬಸ್ಸಿನಲ್ಲಿ ಶೋಭಾ ಕರಂದ್ಲಾಜೆಗೂ ಫ್ರೀ, ಕಾಂಗ್ರೆಸ್ ಹೇಳಿಕೆಗೆ ಶೋಭಾ ಗರಂಯಾಗಿ ಹೆಣ್ಮಕ್ಕಳಿಗೆ ಕೊಟ್ಟಿರುವುದು ಖುಷಿಯಾಗಿದೆ, ಒಳ್ಳೆಯದಾಗಲಿ ಎಂದರು. ಪ್ರವಾಸ ಮಾಡಬಹುದು, ಬೇರೆ ಕಡೆ ಹೋಗಬಹುದು ಅದ್ರೆ, ಶೋಭನಿಗೂ ಫ್ರೀ ಎಂಬ ದುರಾಂಕಾರದ ಮಾತನ್ನ ಕಾಂಗ್ರೆಸ್ ಹೇಳುತ್ತೆ ಇದಕ್ಕೆ ಜನನೇ ಉತ್ತರ ಕೊಡ್ತಾರೆ ನಾನೇನೂ ಹೇಳಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾಣ ಮಾಡಿ, ಉಳಿದಂತೆ ಆಭಿವೃದ್ಧಿ ವಿಚಾರದಲ್ಲಿ ಸಹಕಾರ ಇರಲಿ ಎಂದು ಹೇಳಿದರು.
ಗೃಹಜ್ಯೋತಿ ಜಾರಿಗೂ ಮುನ್ನ ವಿದ್ಯುತ್ ಬೆಲೆ ಏರಿಕೆ ಶಾಕ್! ಬಿಲ್ ದುಪ್ಪಟ್ಟು ಬರಲು ಇಲ್ಲಿದೆ ಕಾರಣ
ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಗೌರವ ತರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕಳೆದ 9 ವರ್ಷಗಳಿಂದ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿದ್ದಾರೆ. ಅವರು ಎಂದಿಗೂ ಸಚಿವರು, ಅಧಿಕಾರಿಗಳ ಮುಂದೆ ಚುನಾವಣೆ ವಿಚಾರಗಳನ್ನು ಮಾತನಾಡುವುದಿಲ್ಲ. ಮುಂದಿನ 25 ವರ್ಷದಲ್ಲಿ ಭಾರತ ದೇಶ ಆರ್ಥಿಕವಾಗಿ ಜಗತ್ತಿನ ಮುಂಚೂಣಿ ದೇಶಗಳ ಸಾಲಿಗೆ ತರೇಕು ಎಂದು ಶ್ರಮಿಸುತ್ತಿದ್ದಾರೆ. ದೇಶದ ಕೃಷಿ ಕ್ಷೇತ್ರವನ್ನು ಸಬಲೀಕರಣಗೊಳಿಸು ನಿಟ್ಟಿನಲ್ಲಿ, ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ : ಮುಂದಿನ ಆರೇಳು ತಿಂಗಳಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಇದೇ ವೇಳೆ ಕೇವಲ 9ವರ್ಷದಲ್ಲಿ 74 ನೂತನ ವಿಮಾನ ನಿಲ್ದಾಣಗಳನ್ನು ಮೋದಿ ಸರ್ಕಾರ ನಿರ್ಮಿಸಿದೆ. ಆದರೆ ಅದಕ್ಕೂ ಮುನ್ನ 69 ವರ್ಷದಲ್ಲಿ ನಿರ್ಮಾಣವಾಗಿದ್ದು ಕೇವಲ 74 ವಿಮಾನ ನಿಲ್ದಾಣಗಳಷ್ಟೇ ಎಂದರು.ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಕಾಂಗ್ರೆಸ್ ಸರ್ಕಾರ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಸಂಕಲ್ಪ ಹಾಗೂ ಯೋಜನೆ ಜೊತೆ ಜೊತೆಗೆ ಹೆಜ್ಜೆ ಹಾಕಬೇಕು ಎಂದು ಮನವಿ ಮಾಡಿದರು.
ರಾಜ್ಯದ ಉನ್ನತ ಶಿಕ್ಷಣದಲ್ಲಿ ವೃತ್ತಿಯಾಧಾರಿತ ಪಠ್ಯಕ್ರಮ ಅಳವಡಿಸ್ತೇವೆ: ಸಚಿವ ಸುಧಾಕರ್
ಜಾತಿ ಧರ್ಮದ ಆಧಾರದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು ಪಠ್ಯಪುಸ್ತಕ ಜಾತಿ, ಧರ್ಮ ಅಥವಾ ಪಕ್ಷದ ಅಧಾರದಲ್ಲಿ ರಚನೆ ಆಗುವುದಲ್ಲ. ಅದು ಸಂವಿಧಾನಾತ್ಮಕವಾಗಿ ಒಪ್ಪಿದ ವಿಚಾರವನ್ನು ಕಲಿಸುವಂತಾಗಬೇಕು. ಕಾಂಗ್ರೆಸ್ ಪರ, ಬಿಜೆಪಿ ಪರ ಎನ್ನುವುದಕ್ಕಿಂತ ನಮ್ಮ ಮಕ್ಕಳು ಏನನ್ನು ಕಲಿಯಬೇಕು ಎನ್ನುವುದು ಮುಖ್ಯವಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗಿದೆ. ಒತ್ತುವರಿ ಸಮಸ್ಯೆಯನ್ನು ಬಹುತೇಕ ಬಗೆಹರಿಸಲಾಗಿದೆ. ಬೇಲೂರು-ಚಿಕ್ಕಮಗಳೂರು ರೈಲ್ವೇ ಯೋಜನೆ ಕಾಮಗಾರಿ ಆರಂಭಿಸುವ ಹಂತಕ್ಕೆ ಬಂದಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ