ಬೇಡವೆಂದ್ರೂ ಜೀರೋ ಟ್ರಾಫಿಕ್‌ ಯಾಕ್‌ ಕೊಟ್ರಿ: ಪೊಲೀಸರ ವಿರುದ್ಧ ಸಿಎಂ ಸಿದ್ದು ಕೆಂಡಾಮಂಡಲ

By Sathish Kumar KHFirst Published Jun 10, 2023, 7:58 PM IST
Highlights

ಜೀರೊ ಟ್ರಾಫಿಕ್‌ ಬೇಡವೆಂದರೂ ಕೂಡ ಯಾಕೆ ನನಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಕೋಪಗೊಂಡರು.

ಮೈಸೂರು (ಜೂ.10):  ಈಗಾಗಲೇ ನಾನು ರಾಜ್ಯದಲ್ಲಿ ಸಂಚಾರ ಮಾಡುವಾಗ ಜೀರೊ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಬೇಡಿ ಎಂದು ಹೇಳಿದ್ದರೂ ಕೂಡ ಯಾಕೆ ನನಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಪೊಲೀಸ್‌ ಆಯುಕ್ತರ ವಿರುದ್ಧ ಸಿಡಿಮಿಡಿಕೊಂಡರು.

ಬೆಂಗಳೂರಿನಿಂದ ಮೈಸೂರಿಗೆ ವಿಮಾನದ ಮೂಲಕ ತೆರಳಿದ ಸಿಎಂ ಸಿದ್ದರಾಮಯ್ಯ ಅವರು, ನಂತರ ಮೈಸೂರು ವಿಮಾನ ನಿಲ್ದಾಣದಿಂದ ಜಿಲ್ಲಾ ಪಂಚಾಯಿತಿ ಕಚೇರಿಗೆ ಆಗಮಿಸಬೇಕಿತ್ತು. ಈ ವೇಳೆ ಮೈಸೂರಿನ ನಗರದಲ್ಲಿ ಪೊಲೀಸ್‌ ಆಯುಕ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಿ ಜೀರೋ ಟ್ರಾಫಿಕ್‌ (Zero Traffic) ವ್ಯವಸ್ಥೆ ಮಾಡಿದ್ದರು. ಇನ್ನು ವಿಮಾನ ನಿಲ್ದಾಣದಿಂದ ಮೈಸೂರು ನಗರಕ್ಕೆ ಆಗಮಿಸಿದ ನಂತರ ಕಾರನ್ನು ಇಳಿದು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈಗಾಗಲೇ ನನಗೆ ಜೀರೊ ಟ್ರಾಫಿಕ್‌ ಬೇಡವೆಂದು ಹೇಳಿದ್ದೇನೆ. ಬೇಡವೆಂದರೂ ಯಾಕೆ ಜೀರೋಟ ಟ್ರಾಫಿಕ್‌ ಮಾಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಐತಿಹಾಸಿಕ ಜಯ ನನ್ನದಲ್ಲ, ಈ ರಾಜ್ಯದ ಜನರದ್ದು: ಕೃತಜ್ಞತಾ ಸಮಾವೇಶದಲ್ಲಿ ಸಿದ್ದು ಭಾವುಕ

ಮೈಸೂರು ನಗರದ ಪೊಲೀಸ್‌ ಆಯುಕ್ತರಿಗೆ 'ಜೀರೊ ಟ್ರಾಫಿಕ್‌ ಏಕೆ ಮಾಡಿದ್ದೀರಾ? ನನಗೆ ಜೀರೊ ಟ್ರಾಫಿಕ್‌ ಸೌಲಭ್ಯ ಬೇಡ ಅಂತ ಹೇಳಿರೋದು ನಮಗೆ ಗೊತ್ತಿದೆಯಾ ಎಂದು ಸಿಎಂ ಪ್ರಶ್ನಿಸಿದರು. ಆಗ ಸಿಎಂ ಸಿದ್ದರಾಮಯ್ಯ ಪ್ರಶ್ನೆಗೆ ಪೊಲೀಸ್‌ ಆಯುಕ್ತರು ಉತ್ತರಿಸದೇ ಸುಮ್ನನೆ ನಿಂತಿದ್ದರು. ಆಗ ಡೋಂಟ್‌ ಡೂ ದಟ್‌ (DON'T DO THAT-ಹೀಗೆಲ್ಲ ಮಾಡಬೇಡಿ) ಎಂದು ಸಿದ್ದರಾಮಯ್ಯ ಅವರು ಪೊಲೀಸ್ ಆಯುಕ್ತರಿಗೆ ಖಡಕ್ ವಾರ್ನಿಂಗ್ ಮಾಡಿದರು.

ಸಿಎಂ ಆಗಿ ಎರಡೇ ದಿನಕ್ಕೆ ಜಿರೋ ಟ್ರಾಫಿಕ್‌ ನಿಷೇಧ:
ರಾಜ್ಯದಲ್ಲಿ ಬಹುಮತ ಗಳಿಸಿದ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರು ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಎರಡೇ ದಿನಗಳಲ್ಲಿ ಜಿರೋ ಟ್ರಾಫಿಕ್‌ ಅನ್ನು ವಾಪಸ್‌ ಪಡೆದಿದ್ದರು. ನಗರ ಪ್ರದೇಶಗಳಲ್ಲಿ ಮುಖ್ಯಮಂತ್ರಿಗಳ ಸಂಚಾರದ ವೇಳೆ ಜಿರೋ ಟ್ರಾಫಿಕ್‌ ಮಾಡಿಕೊಳ್ಳುವುದರಿಂದ ಎಷ್ಟು ಸಮಸ್ಯೆಯಾಗುತ್ತದೆ ಎಂದು ಸ್ವತಃ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡನೇ ದಿನವೇ ಜಿರೋ ಟ್ರಾಫಿಕ್‌ ತ್ಯಜಿಸಿದ್ದರು. ಇನ್ನು ಇದಾದ ನಂತರ ಮರುದಿನವೇ ನನಗೆ ಹಾರ, ತುರಾಯಿ ಹಾಗೂ ಶಾಲುಗಳನ್ನು ತಂದು ಗೌರವಿಸುದನ್ನು ನಿಷೇಧಿಸುತ್ತೇನೆ ಎಂದು ಹೇಳಿದ್ದರು.

ಇನ್ಮೇಲೆ ಶಾಲೇಲಿ ಎಣ್ಣೆ ಹಾಕೊಲ್ಲ ಬಿಟ್ಟುಬಿಡ್ರಪ್ಪಾ ಎಂದು ಬೇಡಿಕೊಂಡ ಸರ್ಕಾರಿ ಶಿಕ್ಷಕ

ಪೇಟಾ ಹಾಕಲು ಬಂದವರಿಗೆ ಗದರಿಸಿದ ಸಿಎಂ:  ಮತ್ತೊಂದೆಡೆ ಹಾರ, ತುರಾಯಿ, ಶಾಲು, ಪೇಟಾ ಎಲ್ಲವನ್ನೂ ನಿಷೇಧ ಮಾಡಿದ್ದರೂ ಮೈಸೂರಿನಲ್ಲಿ ನಡೆದ ಕೃತಜ್ಞತಾ ಕಾರ್ಯಕ್ರದಮ ಚೇಲೆ ಪೇಟ ಮತ್ತು ಹಾರ ಹಾಕಲು ಬಂದ ಅಭಿಮಾನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದರಿಸಿದ್ದಾರೆ. ಕಡವೇ ಕಟ್ಟೆ ಹುಂಡಿ ಗ್ರಾಮದ ಸಿದ್ದು ಅಭಿಮಾನಿ ಚಂದ್ರುವನ್ನ ಗದರಿಸಿದ್ದಾರೆ. ವೇದಿಕೆಯ ಮೇಲೆ ಎರೆಡು ಟಗರು ಉಡುಗೊರೆ ನೀಡಿ ಶಾಲು ಹಾಕಲು ಮುಂದಾದ ಚಂದ್ರುವನ್ನು ಪೇಟ, ಹಾರ ಹಾಕದಂತೆ ತಡೆದರು. ಈ ವೇಳೆ ಕಾಲಿಗೆ ನಮಸ್ಕಾರ ಮಾಡಲು ಚಂದ್ರು ಬಗ್ಗಿದಾಗ ಪಕ್ಕದಲ್ಲಿದ್ದ ಟೇಬಲ್‌ ಉರುಳಿ ಸಚಿವ ಮಹದೇವಪ್ಪ ಅವರ ಕಾಲಿನ ಮೇಲೆ ಬಿತ್ತು. ಇದರಿಂದ ಕೋಪಗೊಂಡ ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರು ಟಗರು ಉಡುಗೊರೆ ಕೊಟ್ಟ ಚಂದ್ರುಗೆ ಹೊಡೆದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಅಭಿಮಾನಿ ಚಂದ್ರು ಜೊತೆ ಫೋಟೊಗೆ ಫೋಸ್ ನೀಡಿ ಅಭಿಮಾನಿಯನ್ನು ತಣಿಸಿದರು.

click me!