ಜನತಾ ಕರ್ಫ್ಯೂ ಸಡಿಲಿಕೆ: ಇಂದಿನಿಂದಲೇ ಜಾರಿ!

By Suvarna NewsFirst Published May 2, 2021, 7:59 AM IST
Highlights

ಮಧ್ಯಾಹ್ನ 12ವರೆಗೆ ದಿನಸಿ, ಸಂಜೆ 6ರವರೆಗೂ ತರಕಾರಿ| ಜನತಾ ಕರ್ಫ್ಯೂ ನಿಯಮ ಸಡಿಲಿಸಿದ ರಾಜ್ಯ ಸರ್ಕಾರ| ತಳ್ಳುವ ಗಾಡಿಗಳಲ್ಲೂ ಸಂಜೆವರೆಗೆ ತರಕಾರಿ ಮಾರಲು ಓಕೆ| ಹಾಪ್‌ಕಾಫ್ಸ್‌ಗಳೂ ಸಂಜೆ 6ವರೆಗೆ ಓಪನ್‌

ಬೆಂಗಳೂರು(ಮೇ.02): ಕೋವಿಡ್‌ ನಿಯಂತ್ರಣಕ್ಕೆ ಹೇರಲಾಗಿರುವ ಜನತಾ ಕರ್ಫ್ಯೂ ನಿಯಮದಲ್ಲಿ ಕೆಲವು ಸಡಿಲಿಕೆ ಮಾಡಲಾಗಿದ್ದು, ತಳ್ಳುವ ಗಾಡಿ ಮತ್ತು ಎಲ್ಲಾ ಹಾಪ್‌ಕಾಮ್ಸ್‌ಗಳಲ್ಲಿ ಹಣ್ಣು ತರಕಾರಿ ವ್ಯಾಪಾರಕ್ಕೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಅನುವು ಮಾಡಿಕೊಡಲಾಗಿದೆ.

ಜೊತೆಗೆ, ಎಪಿಎಂಸಿ ಮತ್ತು ದಿನಸಿ ಅಂಗಡಿಗಳಿಗೆ ಬೆಳಗ್ಗೆ 6 ಗಂಟೆಯಿಂದ ನಾಲ್ಕು ತಾಸುಗಳ ಮಾತ್ರ ತೆಗೆಯಲು ಮಾತ್ರ ನೀಡಲಾಗಿದ್ದ ಅವಕಾಶವನ್ನು ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ. ಎಲ್ಲ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ. ಹೊಸ ನಿಯಮ ಭಾನುವಾರದಿಂದಲೇ ಅನ್ವಯವಾಗಲಿದೆ ಎಂದು ಸರ್ಕಾರ ಆದೇಶಿಸಿದೆ.

"

ನಾಲ್ಕು ತಾಸುಗಳ ಕಾಲ ಮಾತ್ರ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಮಾರುಕಟ್ಟೆಗಳಲ್ಲಿ ಮತ್ತು ದಿನಸಿ ಅಂಗಡಿಗಳಲ್ಲಿ ಬೆಳಗ್ಗೆ ಜನಸಂದಣಿಯಾಗುತ್ತಿದೆ. ಇದನ್ನು ತಪ್ಪಿಸಲು ವ್ಯಾಪಾರದ ಸಮಯವನ್ನು ಹೆಚ್ಚಿಸಲಾಗಿದೆ. ಹಾಪ್‌ಕಾಮ್ಸ್‌, ಎಲ್ಲ ಹಾಲಿನ ಬೂತುಗಳು, ತಳ್ಳುವ ಗಾಡಿ ಮೂಲಕ ಹಣ್ಣು, ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡದೆ ಮಾರುಕಟ್ಟೆಬೆಲೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಈ ವ್ಯಾಪಾರವು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಎಪಿಎಂಸಿ ಮತ್ತು ದಿನಸಿ ಅಂಗಡಿಗಳನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿ ಕಲ್ಪಿಸಲಾಗಿದೆ.

ಎಪಿಎಂಸಿಗೂ ವಿನಾಯ್ತಿ

- ಬೆಳಗ್ಗೆ 6ರಿಂದ 10ರವರೆಗಷ್ಟೇ ಇದ್ದ ಅಗತ್ಯ ವಸ್ತು ಖರೀದಿ ಅವಕಾಶ

- ಈಗ ನಿಯಮಗಳನ್ನು ಮತ್ತಷ್ಟುಸಡಿಲಗೊಳಿಸಿದ ರಾಜ್ಯ ಸರ್ಕಾರ

- ಎಪಿಎಂಸಿಗಳಲ್ಲೂ ಮಧ್ಯಾಹ್ನ 12ರವರೆಗೂ ವ್ಯಾಪಾರ ಅವಕಾಶ

- ಸಂತೆ, ವಾರದ ಸಂತೆಗಳಿಗೆ ನಿರ್ಬಂಧ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!