ಮಹಾರಾಷ್ಟ್ರದಲ್ಲಿ ಒಮಿಕ್ರಾನ್ BQ.1 ತಳಿ ಪತ್ತೆ, ಕರ್ನಾಟಕದಲ್ಲಿ ಎಚ್ಚರಿಕೆ ಜೊತೆಗೆ ಮಾರ್ಗಸೂಚಿ ಪ್ರಕಟ!

Published : Oct 25, 2022, 06:58 PM IST
ಮಹಾರಾಷ್ಟ್ರದಲ್ಲಿ ಒಮಿಕ್ರಾನ್ BQ.1 ತಳಿ ಪತ್ತೆ, ಕರ್ನಾಟಕದಲ್ಲಿ ಎಚ್ಚರಿಕೆ ಜೊತೆಗೆ ಮಾರ್ಗಸೂಚಿ ಪ್ರಕಟ!

ಸಾರಾಂಶ

ಕೊರೋನಾ ಹಾವಳಿಯಿಂದ ಈಗಷ್ಟೇ ಹೊರಬಂದಿರುವ ಜನ ಹಬ್ಬ ಸೇರಿದಂತೆ ಇತರ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಆತಂಕ ಮನೆ ಮಾಡಿದೆ. ಮಹಾರಾಷ್ಟ್ರದಲ್ಲಿ ಮೊದಲ ಒಮಿಕ್ರಾನ್ ರೂಪಾಂತರಿ BQ.1 ತಳಿ ಪತ್ತೆಯಾಗಿದೆ. ಅತೀ ವೇಗವಾಗಿ ಹಾಗೂ ಮಾರಕವಾಗಿರುವ ಈ ತಳಿ ಕುರಿತು ಮುಂಜಾಗ್ರತೆ ವಹಿಸಲು ರಾಜ್ಯದಲ್ಲಿ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಬೆಂಗಳೂರು(ಅ.25): ದೀಪಾವಳಿ ಹಬ್ಬದಲ್ಲೇ ಸೂರ್ಯಗ್ರಹಣ ಘಟಿಸಿದೆ. ಗ್ರಹಣ ಅಂತ್ಯವಾಗುತ್ತಿದ್ದಂತೆ ಕರ್ನಾಟಕಕ್ಕೆ ಎಚ್ಚರಿಕೆ ಸಂದೇಶವೂ ಬಂದಿದೆ. ನೆರೆಯ ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಮಿಕ್ರಾನ್ ರೂಪಾಂತರಿ BQ.1 ತಳಿ ಪತ್ತೆಯಾಗಿದೆ. ಇದು ಅತ್ಯಂತ ವೇಗವಾಗಿ ಹರಡಬಲ್ಲ ಹಾಗೂ ಮಾರಕ ವೈರಸ್ ಆಗಿದೆ. ಹೀಗಾಗಿ ಕರ್ನಾಟಕದಲ್ಲಿ ಎಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ನೂತನ ಮಾರ್ಗಸೂಚಿ ಪ್ರಕಟಗೊಂಡಿದೆ. ಈ ಕುರಿತು ಆರೋಗ್ಯ ಸಚಿವ ಮಾಹಿತಿ ನೀಡಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ BQ.1 ತಳಿಯ ಮೊದಲ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಸಲಹಾ ಪತ್ರ ಹೊರಡಿಸಲಾಗಿದೆ. ಪ್ರತಿಯೊಬ್ಬರು ತಪ್ಪದೇ ಮೂರು ಡೋಸ್ ಲಸಿಕೆ ಪಡೆದುಕೊಳ್ಳಬೇಕು ಹಾಗೂ ಕೊರೊನಾ ಸೂಕ್ತ ನಡವಳಿಕೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೆ ಸುಧಾಕರ್ ಮನವಿ ಮಾಡಿದ್ದಾರೆ.

ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿ ಅಥವಾ ಸಲಹಾ ಪತ್ರದಲ್ಲಿ ಕೆಲ ಸೂಚನೆಳನ್ನು ನೀಡಲಾಗಿದೆ. ದೀಪಾವಳಿ ಹಬ್ಬ, ಕನ್ನಡ ರಾಜ್ಯೋತ್ಸವ ಸೇರಿದಂತೆ ಇತರ ಸಂಭ್ರಮಾಚರಣೆಗಳಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆ ಇದೆ. ಇದರಿಂದ ವೈರಸ್ ವೇಗವಾಗಿ ಹರಡುವ ಹಾಗೂ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಮಾಸ್ಕ್, ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಜ್ವರ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಬೇಕು. ತಕ್ಷಣವೇ ಆ್ಯಂಟಿ ಜೆನ್ ಪರೀಕ್ಷೆ, ಆರ್‌ಟಿಪಿಸಿಆರ್, ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಫಲಿತಾಂಶ ಬರುವವರೆಗೂ ಹಾಗೂ ಪಾಸಿಟೀವ್ ಇದ್ದಲ್ಲಿ ಪ್ರತ್ಯೇಕವಾಗಿ ಇರಲು ಕೋರಲಾಗಿದೆ.

ಲಸಿಕೆ ಹಾಕಿಸಿಕೊಂಡವರಿಗೂ ಮತ್ತೆ ವಕ್ಕರಿಸುತ್ತೆ ಕೋವಿಡ್, ರೋಗ ಲಕ್ಷಣಗಳೇನು ?

ಉಸಿರಾಟದ ಸಮಸ್ಯೆ ಇದ್ದಲ್ಲಿ ತಕ್ಷಣವೇ ಸ್ಥಳೀಯ ಅಸ್ಪತ್ರೆಯಲ್ಲಿ ಆರೈಕೆ ಪಡೆಯಲು ಸೂಚಿಸಲಾಗಿದೆ. ಎಸಿ ಇರುವ ಒಳಾಂಗಣ ಪ್ರದೇಶ, ಹೆಚ್ಚಿನ ಜನಸಂದಣಿ ಇರುವ ಪ್ರದೇಶ, ಸಾರ್ವಜನಿಕ ಸ್ಥಳ, ಸಾರಿಗೆ, ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಹಬ್ಬಗಳನ್ನು ಹೊರಾಗಂಣದಲ್ಲಿ ಆಚರಿಸಲು ಕೋರಲಾಗಿದೆ. ಜನ ದಟ್ಟಣೆಯಿಂದ ದೂರವಿರಲು ತಿಳಿಸಲಾಗಿದೆ.

 

 

ತಕ್ಷಣವೇ ಎಲ್ಲರೂ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಮನವಿ ಮಾಡಲಾಗಿದೆ. ಇತರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಹಾಗೂ ಚಿಕಿತ್ಸೆಯಲ್ಲಿರುವವರು ವೈದ್ಯರ ಜೊತೆ ಸಮಾಲೋಚಿಸಿ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಸೂಚಿಸಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಉಗುಳುವುದು ನಿಷೇಧಿಸಲಾಗಿದೆ.  ಪಟಾಕಿ ಸಿಡಿಸುವುದರಿಂದ ದೂರವಿರಲು ಸೂಚಿಸಲಾಗಿದೆ. 

 

ದೇಶದಲ್ಲಿ Omicron ಉಪ ರೂಪಾಂತರ BF.7 ಪತ್ತೆ, ಇದು ಕೋವಿಡ್‌ನಷ್ಟೇ ಡೇಂಜರಾ ?

ಒಮಿಕ್ರೋನ್‌ ಉಪತಳಿಯಿಂದ ಸಿಂಗಾಪುರದಲ್ಲಿ ಐದನೇ ಅಲೆ!
ಒಮಿಕ್ರೋನ್‌ ವೈರಾಣುವಿನ ಉಪತಳಿಯಾಗಿರುವ ‘ಎಕ್ಸ್‌ಬಿಬಿ’ ದ್ವೀಪ ರಾಷ್ಟ್ರ ಸಿಂಗಾಪುರದಲ್ಲಿ 5ನೇ ಕೋವಿಡ್‌ ಅಲೆ ಸೃಷ್ಟಿಗೆ ಕಾರಣವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಭೇದಿಸುವ ಸಾಮರ್ಥ್ಯವನ್ನು ‘ಎಕ್ಸ್‌ಬಿಬಿ’ ಹೊಂದಿರುವ ಕಾರಣ ಸಿಂಗಾಪುರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನವೆಂಬರ್‌ ಮಧ್ಯಭಾಗದ ವೇಳೆಗೆ 5ನೇ ಅಲೆ ತನ್ನ ಪರಾಕಾಷ್ಠೆಯ ಮಟ್ಟತಲುಪಬಹುದು ಎಂದು ಆರೋಗ್ಯ ಸಚಿವ ಒಂಗ್‌ ಯೆ ಕುಂಗ್‌ ತಿಳಿಸಿದ್ದಾರೆ. ಈ ಅಲೆ ತುತ್ತ ತುದಿಗೆ ತಲುಪಿದಾಗ ಪ್ರತಿದಿನ 15 ಸಾವಿರ ಪ್ರಕರಣಗಳು ವರದಿಯಾಗಬಹುದು. ಈ ಅಲೆ ಅಲ್ಪಾವಧಿಗೆ ಇರಲಿದ್ದು, ತೀಕ್ಷ$್ಣತೆ ಹೊಂದಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

20000 ರೈತರ ಜತೆ ಸೇರಿ ಡಿ. 9ಕ್ಕೆ ಸುವರ್ಣಸೌಧಕ್ಕೆ ಮುತ್ತಿಗೆ : ಬಿವೈವಿ
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ