
ಬೆಂಗಳೂರು (ಫೆ.11) ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಕ್ಕೆ ಸಮುದಾಯನ್ನ ಕೆರಳಿಸಿದೆ. ಹೀಗಾಗಿ ಅವರು 200 ಜನ ಬಂದು ಆತನನ್ನ ನಮ್ಮ ಕೈಗೆ ಒಪ್ಪಿಸಿ ಅಂತಾ ಗಲಾಟೆ ಮಾಡಿದ್ದಾರೆ. ಅದಕ್ಕೆ ಪೊಲೀಸರು ಒಪ್ಪಿಲ್ಲ. ಹೀಗಾಗಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ತೂರಿ ಗಲಾಟೆ ಮಾಡಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಘಟನೆ ನಡೆದ ಹಿನ್ನೆಲೆ ತಿಳಿಸಿದರು.
ಉದಯಗಿರಿ ಪೊಲೀಸ್ ಠಾಣೆ ಮೇಲೆ ರಾತ್ರೋರಾತ್ರಿ ಕಲ್ಲು ತೂರಾಟ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಕಲ್ಲು ತೂರಾಟ ಮಾಡಿದವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ, ಆಶ್ರುವಾಯು ಸಿಡಿಸಿ ಪರಿಸ್ಥಿತಿ ಕಂಟ್ರೋಲ್ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಉದಯಗಿರಿ ಪೊಲೀಸ್ ಠಾಣೆಯೇನು ಪಾಕಿಸ್ತಾನದಲ್ಲಿದ್ಯಾ? ಸಚಿವ ರಾಜಣ್ಣಗೆ ಕಾಮನ್‌ಸೆನ್ಸ್ ಇದ್ಯಾ? ಆರ್ ಅಶೋಕ್ ಗರಂ!
ಗಲಾಟೆ ಮಾಡಿದವರನ್ನು ಪತ್ತೆ ಮಾಡಿ ಬಂಧಿಸಲಾಗುತ್ತೆ. ಸದ್ಯ ಅಲ್ಲಿನ ಪರಿಸ್ಥಿತಿ ಕಂಟ್ರೋಲ್‌ನಲ್ಲಿದೆ. ಈಗಾಗಲೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರನ್ನ ಸ್ಥಳಕ್ಕೆ ಕಳಿಸಿದ್ದೇವೆ. ಕೆಲವು ಸಂದರ್ಭಗಳಲ್ಲಿ ಪೊಲೀಸರು ಸಹ ತಪ್ಪು ಮಾಡ್ತಾರೆ. ಇಂಥ ಸಂದರ್ಭದಲ್ಲಿ ಪೊಲೀಸರ ವಿರುದ್ಧವೂ ಕ್ರಮ ಆಗುತ್ತದೆ. ಯಾರದು ತಪ್ಪು, ಯಾರದು ಸರಿ ಎಂದು ನಾವು ನಿರ್ಧಾರ ಮಾಡೋಕೆ ಆಗೋಲ್ಲ. ಪೊಲೀಸ್ ಇನ್ಸ್ಪೆಕ್ಟರ್, ಸಬ್ ಇನ್ಸೆಪೆಕ್ಟರ್ ನ್ನು ಈ ಹಿಂದೆ ಇದ್ದ ಎಲ್ಲರನ್ನು ಸಸ್ಪೆಂಡ್ ಮಾಡಿದ್ದೇವೆ. ಅದೇ ರೀತಿ ಈ ಪ್ರಕರಣದಲ್ಲಿ ಪೊಲೀಸರು ತಪ್ಪು ಮಾಡಿದ್ರೂ ಅವರ ವಿರುದ್ಧ ಕ್ರಮ ತಗೋತೇವೆ ಎಂದರು.
ಇದನ್ನೂ ಓದಿ: ಅವಹೇಳನಕಾರಿ ಪೋಸ್ಟ್‌ಗೆ ಹೊತ್ತಿ ಉರಿದ ಉದಯಗಿರಿ | Udayagiri Police Station Incident | Kannada News
ಮಂಡ್ಯದಲ್ಲಿ ಕುಂಭಮೇಳ ನಡೆಯುತ್ತಿದೆ. ಅಲ್ಲಿನೂ ಸೂಕ್ತ ಭದ್ರತೆ ನೀಡುವಂತೆ ಸೂಚಿಸಿದ್ದೇವೆ. ಬಿಜೆಪಿಯವರು ಆರೋಪಿಸುವಂತೆ ಪೊಲೀಸರು ತಪ್ಪು ಮಾಡಿದ್ರೆ ಕ್ರಮ ಆಗುತ್ತೆ. ಈ ಹಿಂದೆ ತಪ್ಪು ಮಾಡಿದ್ದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಇಂಥ ಸಂದರ್ಭದಲ್ಲಿ ಪೊಲೀಸರ ವಿರುದ್ಧವೂ ಕ್ರಮ ಆಗುತ್ತದೆ. ಯಾರದು ತಪ್ಪು, ಯಾರದು ಸರಿ ಎಂದು ನಾವು ನಿರ್ಧಾರ ಮಾಡೋಕೆ ಆಗೋಲ್ಲ. ಸದ್ಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಹೋಗಿದ್ದಾರೆ ಪರಿಶೀಲನೆ ನಡೆಸಿದ ಬಳಿಕ ಗೊತ್ತಾಗಲಿದೆ ಎಂದರು.
ಈ ಪೊಲೀಸರಿಗೇನಾಗಿದೆ.. ಸಚಿವ ರಾಜಣ್ಣ ಗರಂ:
ಮೈಸೂರು ಉದಯಗಿರಿ ಉದ್ವಿಗ್ನ ಪ್ರಕರಣ ಸಂಬಂಧ ಪೊಲೀಸರ ವಿರುದ್ಧವೇ ಹರಿಹಾಯ್ದಿದ್ದ ಸಚಿವ ರಾಜಣ್ಣ. 'ಈ ಪೊಲೀಸರಿಗೇನಾಗಿದೆ? ಮಿನಿಮಮ್ ಕಾಮನ್‌ಸೆನ್ಸ್ ಬೇಡ್ವಾ? ಯಾರೋ ಆರ್ ಎಸ್ ಎಸ್ ಅವನು ಕೃತ್ಯ ಮಾಡಿದ್ದಾನೆ, ಅವನ ಮೇಲೆ ಕೇಸ್ ಆಗಿದೆ, ಆರೆಸ್ಟ್ ಆಗಿದ್ದಾನೆ. ಆದ್ರೆ ಪೊಲೀಸರು ಆರೋಪಿಯನ್ನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಯಾಕೆ ಇಟ್ಟರು? ಹೇಳಿಕೇಳಿ ಉದಯಗಿರಿ ಮುಸ್ಲಿಂ ಬಾಹುಳ್ಯದ ಏರಿಯಾ! ಹೀಗಿರುವಾಗ ಆರೋಪಿಯನ್ನ ಅಲ್ಲೇ ಏಕೆ ಇಡಬೇಕಿತ್ತು? ಈ ಪೊಲೀಸವರಿಗೆ ಬುದ್ಧಿ ಬೇಡ್ವಾ? ಸರ್ಕಾರದಲ್ಲಿ ನಾವಷ್ಟೇ ಅಲ್ಲ ಅಧಿಕಾರಿಗಳು ಸರಿಯಾದ ನಿರ್ಧಾರ ಮಾಡಬೇಕು ಎಂದು ಕಿಡಿಕಾರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ