ಭಾರತ ಹಿಂದೂ ರಾಷ್ಟ್ರ ನಿಜ, ಮುಸಲ್ಮಾನರ ಮೇಲೆ ಬಿಜೆಪಿಗೆ ಯಾಕಿಷ್ಟು ದ್ವೇಷ?: ಪರಮೇಶ್ವರ್

By Kannadaprabha News  |  First Published Nov 22, 2024, 10:51 AM IST

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸವಾಲು ಎಂದರೆ ಮೂಲತಃ ಬಡವರು, ಶಾಂತಿ, ಅಭಿವೃದ್ಧಿ ಪರವಾಗಿ ನಿಂತಿರುವುದು, ಸಂವಿಧಾನವನ್ನು ಒಪ್ಪಿಕೊಂಡಿರುವುದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.


ಮೈಸೂರು (ನ.22) ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸವಾಲು ಎಂದರೆ ಮೂಲತಃ ಬಡವರು, ಶಾಂತಿ, ಅಭಿವೃದ್ಧಿ ಪರವಾಗಿ ನಿಂತಿರುವುದು, ಸಂವಿಧಾನವನ್ನು ಒಪ್ಪಿಕೊಂಡಿರುವುದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿರುವ ಸಿದ್ಧಾಂತ ಬೇರೆ ಯಾವ ಪಕ್ಷದಲ್ಲೂ ನೋಡಲು ಸಾಧ್ಯವಿಲ್ಲ. ಅಂಬೇಡ್ಕರ್ ಸಂವಿಧಾನದ ಪ್ರತಿಯೊಂದು ಅಕ್ಷರವನ್ನೂ ಒಪ್ಪಿಕೊಂಡು ಗೌರವಿಸುತ್ತಿದ್ದೇವೆ. ನಾವು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಸಂವಿಧಾನದ ಆಶಯ ಅನುಷ್ಠಾನಕ್ಕೆ ಶ್ರಮ ವಹಿಸುತ್ತೇವೆ. ಅದನ್ನು ಉಳಿಸಿಕೊಂಡು ಹೋಗುವ ಸವಾಲಿದೆ ನಮ್ಮ ಮುಂದೆ ಎಂದರು.

Latest Videos

undefined

ಪಕ್ಷ ಸಂಘಟನೆ, ನೀತಿ ನಿಯಮ ರಕ್ಷಣೆಯೊಂದಿಗೆ ಮುಂದುವರಿಯಲು ಹಲವರು ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿದ್ದಾಗ ನನಗೆ ರಾಜ್ಯದ ಜವಾಬ್ದಾರಿ ನೀಡಿದರು. ನಾನು ಯಾವುದೇ ಲಾಭಿ ಅಥವಾ ಒತ್ತಡ ತರಲಿಲ್ಲ. 2020 ಅಕ್ಟೋಬರ್ ನಲ್ಲಿ ಅವರೇ ಕರೆ ಮಾಡಿ ನೇಮಕದ ವಿಷಯ ತಿಳಿಸಿದರು. ಎಂಟು ವರ್ಷ ಆ ಅವಕಾಶ ಸಿಕ್ಕಿತು. ಹೊಸ ವ್ಯಕ್ತಿತ್ವ ಸೃಷ್ಟಿಸಿತು. ಪಕ್ಷದ ಜೊತೆಗೆ ಪ್ರತಿಯೊಬ್ಬ ಕಾರ್ಯಕರ್ತನ ನಾಡಿಮಿಡಿತ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಅದು ಸೋನಿಯಾ ಗಾಂಧಿ ಅವರ ಆಶೀರ್ವಾದದಿಂದ ಸಾಧ್ಯವಾಯಿತು ಎಂದು ಅವರು ಹೇಳಿದರು.

ಗ್ಯಾರಂಟಿಯಿಂದಾಗಿ ಹಿಮಾಚಲ ಸರ್ಕಾರದ ಬಳಿ ಕರೆಂಟ್‌ ಬಿಲ್‌ಗೂ ಕಾಸಿಲ್ಲ: 18 ಹೋಟೆಲ್‌ಗಳೇ ಬಂದ್‌!

ನಾನು 2013 ರಲ್ಲಿ ಸೋತ ಮೇಲೆ ಪಕ್ಷ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದರು. 2013- 18ರ ಸಿದ್ದರಾಮಯ್ಯ ಅವರ ಆಡಳಿತ ಮೈಲಿಗಲ್ಲು. ಬಡವರನ್ನು ಮೇಲೆತ್ತುವ ಕಾರ್ಯಕ್ರಮಗಳನ್ನು ನೀಡಿದರು. ಕೊಟ್ಟ ಪ್ರತಿಯೊಂದು ಕಾರ್ಯಕ್ರಮ ಇಂದಿಗೂ ನೆನಪು ಮಾಡಿಕೊಳ್ಳುವಂತದ್ದು ಎಂದು ಕೊಂಡಾಡಿದರು. ಕಳೆದ ಚುನಾವಣೆ ವೇಳೆ ಡಿ.ಕೆ. ಶಿವಕುಮಾರ್ ಮತ್ತು ಸುರ್ಜೇವಾಲ ಅವರು ಪಕ್ಷದ ಪ್ರಣಾಳಿಕೆ ತಯಾರಿಸುವ ಜವಾಬ್ದಾರಿ ನೀಡಿದರು. ಎಲ್ಲಾ ಕಡೆ ಸಲಹೆ ಪಡೆದು ಪ್ರೊ. ರಾಧಾಕೃಷ್ಣ ಅವರೊಂದಿಗೆ ಚರ್ಚಿಸಿ ಸಿದ್ಧಪಡಿಸಲಾಯಿತು. ಚರ್ಚೆ ವೇಳೆ ಮಹಿಳೆ ಸಬಲೀಕರಣದ ಸಲಹೆ ಬಂತು. ಆರ್ಥಿಕ ಶಕ್ತಿ ಬಹಳ ಮುಖ್ಯ, ಸ್ವಾತಂತ್ರ್ಯ ಇರಬೇಕು ಎಂದು ಹೇಳಿದ್ದರಿಂದ ಆ ನಿಟ್ಟಿನಲ್ಲಿ ಸಾರಿಗೆ, ಉಚಿತ ಪ್ರಯಾಣ, ಅನ್ನಭಾಗ್ಯ, ಯುವನಿಧಿ, ಎರಡು ಸಾವಿರ ಕೊಡಲು ತೀರ್ಮಾನಿಸಿದೆವು. ಆರ್ಥಿಕ ಲೆಕ್ಕಾಚಾರ ಮಾಡಿಯೇ ತೀರ್ಮಾನಿಸಿದ್ದು. ಶಕ್ತಿ ಯೋಜನೆ ಬಗ್ಗೆ ರಾತ್ರಿ 2 ಗಂಟೆಗೆ ಸಲಹೆ ಬಂದಿತು. ಆಗಲೇ ಹೈಕಮಾಂಡ್ ಒಪ್ಪಿಗೆ ಪಡೆದಿದ್ದಾಗಿ ಅನೇಕ ಘಟನಾವಳಿಯನ್ನು ಮೆಲುಕು ಹಾಕಿದರು.

ಸಿದ್ದರಾಮಯ್ಯ ಆರ್ಥಿಕ ತಜ್ಞರು, ಆರ್ಥಿಕ ಸಚಿವನಾಗಿ ಎಲ್ಲಾ ಲೆಕ್ಕಾಚಾರ ಹಾಕಿ ಬಜೆಟ್ ನಲ್ಲಿ ಸೇರಿಸಿದರು. ಬಜೆಟ್ ಗೆ ಹೊರತಾಗಿ ಮಾಡಿದರೆ ಬದಲಾವಣೆಗೆ ಅವಕಾಶವಿರುತ್ತದೆ. ಆದರೆ ಬಜೆಟ್ ನಲ್ಲಿ ಮಾಡಿದರೆ ಬದ್ಧತೆ ಅರ್ಥ ಮಾಡಿಕೊಳ್ಳಬೇಕು. ಶಕ್ತಿ ಯೋಜನೆಯನ್ನು ಪ್ರಧಾನಿ, ಕೇಂದ್ರ ಗೃಹ ಸಚಿವರು ಸೇರಿ ಎಲ್ಲಾ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರಧಾನಿ ಗ್ಯಾರಂಟಿ ಅನುಷ್ಠಾನ ಮಾಡಿಲ್ಲ, ಇಲ್ಲಿಯೂ ಸುಳ್ಳು ಹೇಳುತ್ತಿದ್ದಾರೆ ಎಂದರು.

 ನಾನು ಸುದ್ದಿಗೋಷ್ಠಿಯಲ್ಲಿ ಪ್ರತ್ಯುತ್ತರ ನೀಡಿ, ಕರ್ನಾಟಕಕ್ಕೆ ಆಹ್ವಾನಿಸಿದೆ. ನಂತರ ಅವರೂ ಗ್ಯಾರಂಟಿ ಘೋಷಿಸಿದ್ದಾಗಿ ಪರಮೇಶ್ವರ್ ಹೇಳಿದರು.ನಮ್ಮ ಯೋಜನೆಗಳು ಕರ್ನಾಟಕದಲ್ಲಿ ಬಡವರ ಮೇಲೆತ್ತುವಲ್ಲಿ ತುಂಬಾ ಸಹಕಾರಿಯಾಗಿದೆ. ಮಹಿಳೆಯರಿಗೆ ನೀಡಿದ ಹಣ ದುರುಪಯೋಗವಾಗಿಲ್ಲ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ. ಶೇ. 50ಕ್ಕೂ ಹೆಚ್ಚಿರುವ ಮಹಿಳೆಯರನ್ನು ಅಭಿವೃದ್ಧಿ ಕಡೆಗೆ ಕರೆದೊಯ್ಯುವುದು ಬದ್ಧತೆಯಲ್ಲವೇ? ಬಡ ಮಹಿಳೆಗೆ ಎರಡು ಸಾವಿರ ಸಿಕ್ಕರೆ ಅವಳ ಜೀವನದ ಪರಿವರ್ತನೆಯನ್ನು ಬಿಜೆಪಿ, ಜೆಡಿಎಸ್ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಅಭಿವೃದ್ಧಿ ಕುಂಠಿತವಿಲ್ಲದೆ ಗ್ಯಾರಂಟಿ ಬಗ್ಗೆ ಹೆಮ್ಮೆಯಾಗಬೇಕು ಎಂದು ಅವರು ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈಗ ಜಾತಿ ಜನಗಣತಿ ಬಗ್ಗೆ ಚರ್ಚೆ ನಡೆಯುತ್ತಿದೆ. 160 ಕೋಟಿ ರು. ವೆಚ್ಚದಲ್ಲಿ ರಚಿಸಿದ ಸಮಿತಿ ವರದಿ ಸಲ್ಲಿಸಿದೆ. ವರದಿಯನ್ನು ಯಾರೂ ಓದಿಲ್ಲ. ಆದರೆ ಒಂದಿಷ್ಟು ವಿಚಾರ ಸಹಜವಾಗಿ ಗೊತ್ತಿರುತ್ತದೆ. ಜಾತಿ ಸಂಖ್ಯೆ ಮಾತ್ರವಲ್ಲ, ಸಾಮಾಜಿಕ ಆರ್ಥಿಕ ಪ್ರಗತಿ ತಿಳಿಯುತ್ತದೆ. ಕಾರ್ಯಕ್ರಮ ಕೊಡಲು ಅನುಕೂಲವಾಗುತ್ತದೆ. ಯಾವ ಸಮುದಾಯ ಹಿಂದೆ ಬಿದ್ದಿದೆ ಅದರ ಅಭಿವೃದ್ಧಿ ನಮ್ಮ ಉದ್ದೇಶ ಎಂದರು.ರಾಹುಲ್ ಗಾಂಧಿ ಅವರೂ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಜಾತಿವಾರು ಒಳಮೀಸಲಾತಿ ಕೊಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು.ಅಲ್ಪಸಂಖ್ಯಾತರ ಓಲೈಕೆ ಆರೋಪ ಪಕ್ಷದ ಮೇಲಿದೆ. ಇಲ್ಲೇ ಹುಟ್ಟಿ ಬೆಳೆದವರು ಬೇರೆಯವರಾಗಲು ಹೇಗೆ ಸಾಧ್ಯ? 

ಬಿಜೆಪಿಗೆ ಮುಸಲ್ಮಾನರ ಮೇಲೆ ಯಾಕಿಷ್ಟು ದ್ವೇಷ. ಹಿಂದೂ ರಾಷ್ಟ್ರ ನಿಜ. ಆದರೆ ಎಲ್ಲರಿಗೂ ಬದುಕುವ ಸಮಾನ ಹಕ್ಕಿದೆ. ಶೇ. 18ರಷ್ಟಿರುವ ಅಲ್ಪಸಂಖ್ಯಾತರನ್ನು ದೇಶದಿಂದ ಹೊರ ಹಾಕುತ್ತೀರಾ? ಅಲ್ಪಸಂಖ್ಯಾತರೂ ನಮ್ಮವರು, ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕು ಎಂದು ಅವರ ಪರವಾಗಿ ನಿಂತಿದ್ದೇವೆ.ಈ ಸವಾಲುಗಳ ಎದುರಿಸಲು ಪ್ರತಿಯೊಬ್ಬ ಕಾರ್ಯಕರ್ತ ತಯಾರಿರಬೇಕು. ಸಿದ್ದರಾಮಯ್ಯ ಅವರನ್ನು ಎರಡನೇ ಬಾರಿ ಸಿಎಂ ಮಾಡಿದ್ದೀರಿ. ಮೈಸೂರು- ಚಾಮರಾಜನಗರ ಜನರಿಗೆ ಹೆಮ್ಮೆ ಇರಬೇಕು. ಇನ್ನೂ ಸದೃಢವಾಗಿ ಪಕ್ಷ ಕಟ್ಟಬೇಕು ಎಂದು ಅವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.ಬಿಜೆಪಿ- ಜೆಡಿಎಸ್ ಒಟ್ಟಾಗಿರುವುದು ಕಾಂಗ್ರೆಸ್ ಗೆ ಒಳ್ಳೆಯದು ಹಾಗೂ ಕೆಟ್ಟದ್ದೂ ಇದೆ. ಆದರೆ ಯಾವ ಕಾರಣಕ್ಕೂ ಸರ್ಕಾರವನ್ನು ಅಸ್ತಿರಗೊಳಿಸಲು ಸಾಧ್ಯವಿಲ್ಲ. ಅದು ಕನಸು ಎಂದು ನೀವೆಲ್ಲರೂ ಹೇಳಬೇಕು. ಸರ್ಕಾರ ಸ್ಥಿರವಾಗಿರುತ್ತದೆ. ನೂರು ಆಪಾದನೆ ಬಂದರೂ ಸಿದ್ದರಾಮಯ್ಯ ಗಟ್ಟಿಯಾಗುತ್ತಾರೆಯೇ ಹೊರತು ಮೆತ್ತಗಾಗಲ್ಲ. ನೀವೆಲ್ಲಾ ಆ ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲಬೇಕು. ಮುಂಬರುವ ಜಿಪಂ, ತಾಪಂ ಗೆಲ್ಲಬೇಕು ಎಂದು ಅವರು ಕರೆ ನೀಡಿದರು.ನಿಗಮ ಮಂಡಳಿ ನಿರ್ದೇಶಕರ ಪಟ್ಟಿಯನ್ನು ಉಪ ಚುನಾವಣೆ ಫಲಿತಾಂಶದ ನಂತರ ಬಿಡುಗಡೆಗೊಳಿಸಲಾಗುವುದು. ಮಹಿಳೆಯರಿಗೂ ಆದ್ಯತೆ ನೀಡಲಾಗಿದೆ ಎಂದರು.ಕಾಂಗ್ರೆಸ್‌ ಕಚೇರಿ ಬೇಗ ಕಟ್ಟಿ

News Hour: ಬಡವರ ದುಡ್ಡಲ್ಲಿ ಸರ್ಕಾರ ನಡೆಸೋ ಸ್ಥಿತಿಗೆ ಇಳಿದ ಕರ್ನಾಟಕ, ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕವೂ ಏರಿಕೆ!

ಮೈಸೂರು ನಗರ ಕಾಂಗ್ರೆಸ್‌ ಕಚೇರಿ ಕಟ್ಟಲೇ ಬೇಕು ಎಂದು ಕೋಪದಲ್ಲಿ ಸಿಎಂಗೆ ಹೇಳಿದ್ದೆ. ಈ ಜಾಗ ವ್ಯಾಜ್ಯದಲ್ಲಿತ್ತು. ಈ ಸಂಬಂಧ ಚಂದ್ರಪ್ರಭಾ ಅರಸು ಹಾಗೂ ಸಮಿತಿ ನೀಡಿದ ಕೊಡುಗೆ ಸ್ಮರಣೀಯವಾದದ್ದು. ಎರಡನೇ ಬಾರಿ ಸಿಎಂ ಆದಾಗ ತಲೆ ಒಳಗೆ ಹೋಗಿದೆ. 18 ಕೋಟಿಯಲ್ಲಿ ನಿರ್ಮಾಣಕ್ಕೆ ಹೊರಟಿರುವುದು ಉತ್ತಮ ಬೆಳವಣಿಗೆ. ರಾಜಕೀಯ ಹೇಗೋ ಏನೋ ಗೊತ್ತಿಲ್ಲ, ಆದಷ್ಟು ಬೇಗ ನಿರ್ಮಾಣವಾಗಲಿ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ನಗರ ಕಾಂಗ್ರೆಸ್ಅಧ್ಯಕ್ಷ ಆರ್. ಮೂರ್ತಿ, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನರೇಂದ್ರ, ಎಂ. ಪ್ರದೀಪ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಣ್ಣ ಮೊದಲಾದವರು ಇದ್ದರು

click me!