ಕೊಪ್ಪಳದಲ್ಲಿ ನಡೆಯಿತು ಆಪರೇಶನ್ ಜಾಂಬವಂತ!

By Santosh Naik  |  First Published Jul 11, 2022, 6:20 PM IST

ಕೊಪ್ಪಳ್ಳದಲ್ಲಿ ಸಾಮಾನ್ಯವಾಗಿ ಕರಡಿಯ ಉಪಟಳ ಹೆಚ್ಚು. ಸೋಮವಾರ ಇಲ್ಲಿನ ಚಾಮಲಾಪೂರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ವಿಜಯನಗರ ಜಿಲ್ಲೆಯ ಕಮಲಾಪೂರ ಪ್ರಾಣಿ ಸಂಗ್ರಹಾಲಯದ ವೈದ್ಯರನ್ನು ಹಾಗೂ ಕರಡಿ ಹಿಡಿಯುವ ಪರಿಣಿತರನ್ನ ಕರೆಸಿ, ಅದನ್ನು ಹಿಡಿದರು.


ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಜುಲೈ 11): ಕೊಪ್ಪಳ‌ ತಾಲೂಕಿನ‌ಲ್ಲಿ‌ ಇತ್ತೀಚಿನ ದಿನಗಳಲ್ಲಿ ಕರಡಿಗಳ ಉಪಟಳ ಜೋರಾಗಿದೆ. ಕಳೆದ ಎರಡು ಮೂರು ತಿಂಗಳಲ್ಲಿ ಸಾಕಷ್ಟು ಕರಡಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಸೋಮವಾರವೂ ಸಹ ಕರಡಿಯೊಂದು ಕಾಡಿನಿಂದ ನಾಡಿಗೆ ಬಂದಿತ್ತು. ಆದರೆ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ಈ ಮೊದಲಿನಿಂದಲೂ ಕರಡಿಗಳ ಸಂತತಿ  ಇದ್ದೆ ಇದೆ. ಅದರಲ್ಲಿಯೂ ವಿಶೇಷವಾಗಿ ಇರಕಲಗಡ ಹೋಬಳಿಯಲ್ಲಂತೂ ಕರಡಿಗಳ ಹಾವಳಿ ಜೋರಾಗಿಯೇ ಇದೆ. ಇಂದು  ಕೊಪ್ಪಳ ತಾಲೂಕಿನ ಸೂಳಿಕೇರಿ,ಸೂಳಿಕೇರಿ ತಾಂಡಾ, ಚಿಕ್ಕಬೊಮ್ಮನಾಳ, ಹಿರೇಬೊಮ್ಮನಾಳ, ಸೇರಿದಂತೆ ಗುಡ್ಡಕ್ಕೆ ಹೊಂದಿಕೊಂಡಿರುವ ಹತ್ತಾರು ಗ್ರಾಮಗಳಲ್ಲಿ ಕರಡಿಗಳು ಹೆಚ್ಚಾಗಿವೆ. ಈ ಹಿನ್ನಲೆಯಲ್ಲಿ ಇಂದು ಕೊಪ್ಪಳ ತಾಲೂಕಿನ  ಚಾಮಲಾಪೂರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಜಮೀನಿಲ್ಲಿರುವ ಮನೆ ಹತ್ತಿರ ಕರಡಿ ಪ್ರತ್ಯಕ್ಷವಾಗಿತ್ತು. ಇನ್ನು ಯಾವಾಗ ಚಾಮಲಾಪೂರ ಗ್ರಾಮದ ಬಳಿ ಕರಡಿ ಕಾಣಿಸಿಕೊಂಡಿತೋ ಆಗ ಗ್ರಾಮಸ್ಥರು ಆತಂಕಕ್ಕೆ ಒಳಗಾದರು. ಏಕಾಏಕಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಜಮೀನಿಗೆ ಕರಡಿ ಬಂದಿತ್ತೋ ಅದನ್ನ ನೋಡಿದ ಗ್ರಾಮಸ್ಥರಿಗೆ ಸಹಜವಾಗಿಯೇ ಭಯ ಆಯಿತು. ಯಾವಾಗ ಏನು ಮಾಡುತ್ತದೆಯೋ ಏನೋ ಎನ್ನುವ ಭಯ ಗ್ರಾಮಸ್ಥರಲ್ಲಿ ಕಾಡಲು ಆರಂಭವಾಯಿತು. ಕೂಡಲೇ ಗ್ರಾಮಸ್ಥರು ಎಚ್ಚೆತ್ತು ಕರಡಿಯನ್ನು ಕಾಡಿಗೆ ಅಟ್ಟಲು ಸಿದ್ದವಾದರು. ಗ್ರಾಮಸ್ಥರು ಕೈಯಲ್ಲಿ ದೊಡ್ಡ ದೊಡ್ಡ ಬಡಿಗೆಗಳನ್ನು ಹಿಡಿದುಕೊಂಡು ಕರಡಿಯನ್ನು ಬೆನ್ನು ಹತ್ತಿದರು.


ಅರಣ್ಯ ಇಲಾಖೆ ಅಧಿಕಾರಿಗಳ ದೌಡು:
ಇನ್ನು ಚಾಮಲಾಪೂರ ಗ್ರಾಮಕ್ಕೆ ಹೊಂದಿಕೊಂಡಂತೆ ಕರಡಿ (Bear) ಪ್ರತ್ಯಕ್ಷವಾಗಿರುವ ಸುದ್ದಿಯನ್ನು ಗ್ರಾಮಸ್ಥರು ಅರಣ್ಯ ಇಲಾಖೆಯ (rest department) ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿಯವರು ಚಾಮಲಾಪೂರ (Chamalapura) ಗ್ರಾಮಕ್ಕೆ ದೌಡಾಯಿಸಿದರು.‌ಅಲ್ಲಿನ ಚಿತ್ರಣ ನೋಡಿಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ವಿಜಯನಗರ ಜಿಲ್ಲೆಯ ಕಮಲಾಪೂರ ಪ್ರಾಣಿ ಸಂಗ್ರಹಾಲಯದ ವೈದ್ಯರನ್ನು ಹಾಗೂ ಕರಡಿ ಹಿಡಿಯುವ ಪರಿಣಿತರನ್ನ ಕರೆಸಿದರು‌.

Latest Videos

ಹೇಗಿತ್ತು ಆಪರೇಶನ್ ಜಾಂಬವಂತ: ಇನ್ನು ಗ್ರಾಮಕ್ಕೆ ಹೊಂದಿಕೊಂಡಂತೆ ಕರಡಿ ಬಂದಿರುವುದರಿಂದ‌ ಗ್ರಾಮಸ್ಥರು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದರು. ಆದರೆ ಯಾವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಕರಡಿ ಹಿಡಿಯಲು ಬಂದರೋ ಆಗ ಕೊಂಚ ನೆಮ್ಮದಿಯ ನಿಟ್ಟುಸಿರನ್ನ ಗ್ರಾಮಸ್ಥರು ಬಂದರು.‌ಇನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂದ ವೇಳೆಯಲ್ಲಿ ಕರಡಿ ಜಮೀನಿನ ಬೆಳೆಯೊಂದರ ಪೊದೆಯೊಂದರಲ್ಲಿ ಕರಡಿ ಅವಿತು ಕುಳಿತಿತ್ತು.

ಬಳಿಕ ಕಮಲಾಪೂರದ ಪ್ರಾಣಿ ಸಂಗ್ರಹಾಲಯದ ಪಶುವೈದ್ಯರು ಜೀಪು ಹಾಗೂ ಟ್ರ್ಯಾಕ್ಟರ್ ಗಳ ಮೂಲಕ ಕರಡಿಯನ್ನು ಸುತ್ತುವರೆದರು. ಬಳಿಕ ಪಶುವೈದ್ಯರು ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಆಗ ಕರಡಿ ಪೊದೆಯಿಂದ ಹೊರಗಡೆ ಬಂತು. ಈ ವೇಳೆಯಲ್ಲಿ ಗ್ರಾಮಸ್ಥರು ಕರಡಿಗೆ ಬಲೆ ಹಾಕುವ ಮೂಲಕ ಹಿಡಿದರು. ಗ್ರಾಮಕ್ಕೆ ಹೊಂದಿಕೊಂಡಂತೆ ಕರಡಿ ಬಂದಿರುವುದರಿಂದ ಇಡೀ ಚಾಮಲಾಪೂರ ಗ್ರಾಮವೇ ಬೆಚ್ಚಿಬಿದ್ದಿತ್ತು. ಆದರೆ ಯಾವಾಗ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಯವರು ಕರಡಿಯನ್ನು ಹಿಡಿದರೋ ಆಗ ಇಡೀ ಗ್ರಾಮವೇ ನೆಮ್ಮದಿಯ ನಿಟ್ಟುಸಿರು‌ ಬಿಟ್ಟರು.‌

click me!