ರಾಜ್ಯದಲ್ಲಿ ಜನತಾ ಲಾಕ್‌ಡೌನ್ ಸಂಪೂರ್ಣ ವಿಫಲವಾಗಿದ್ದು ಇದೀಗ ಸಂಪೂರ್ಣ ಲಾಕ್‌ಡೌನ್‌ನತ್ತ ಸರ್ಕಾರ ಚಿತ್ತ ಹರಿಸಿದೆ. ಕೊರೋನಾ ಚೈನ್ ಬ್ರೇಕ್ ಮಾಡುವ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು (ಮೇ.06): ರಾಜ್ಯದಲ್ಲಿ ಮಹಾಮಾರಿ ಅಬ್ಬರ ದಿನವೂ ಹೆಚ್ಚಾಗುತ್ತಲೇ ಇದೆ. ಜನತಾ ಲಾಕ್ ಡೌನ್ ಸಂಪೂರ್ಣ ವಿಫಲವಾಗಿದೆ. ನಾವು ನಿರೀಕ್ಷೆ ಮಾಡಿದಷ್ಟು ಪ್ರಯೋಜನ ಜನತಾ ಲಾಕ್ ಡೌನ್ ನಿಂದ ಆಗಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಸುಧಾಕರ್ ಜನತಾ ಲಾಕ್ ಡೌನ್ ಹೇಗಿದೆ ಎಂದು ನೀವೇ ನೋಡಿದ್ದೀರಾ. ಜನರೇ ಇದನ್ನ ಅರ್ಥ ಮಾಡಿಕೊಳ್ಳಬೇಕು. ಜನರು ಸಹಕಾರ ಅಗತ್ಯವಾಗಿ ನೀಡಬೇಕು. ಇಲ್ಲದೆ ಹೋದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಚೈನ್ ಲಿಂಕ್ ಕಟ್ ಆಗಲಿ ಕನಿಷ್ಠ 14 ದಿನ ಬೇಕು. ಈಗ 7-8 ದಿನ ಆಗಿದೆ ಎಂದರು.
undefined
ಒಂದು ಕೋಟಿ ಲಸಿಕೆ ಗುರಿ ಮುಟ್ಟಿದ ಕರ್ನಾಟಕ, ಶೇ. 15ಕ್ಕಿಂತ ಹೆಚ್ಚು! ...
ಮಹಾರಾಷ್ಟ್ರದಲ್ಲಿ ಕಡಿಮೆ ಆಗಿದೆ ಎಂದರೆ ನಮ್ಮಲ್ಲಿಯೂ ಕಡಿಮೆ ಆಗೊಲ್ಲವಾ....? ಜನರು ಸಹಕಾರ ನೀಡಬೇಕು. ಪೂರ್ಣ ಲಾಕ್ ಡೌನ್ ಬಗ್ಗೆ ಚಿಂತನೆ ಮಾಡುತ್ತೇವೆ. ಮೇ 12 ನೇ ತಾರೀಖಿಗೆ ಜನತಾ ಲಾಕ್ ಡೌನ್ ಮುಗಿಯುತ್ತದೆ. ಬಳಿಕ ಸಿಎಂ ಯಡಿಯೂರಪ್ಪ ಜೊತೆ ಮಾತಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇ ಎಂದು ಲಾಕ್ ಡೌನ್ ಬಗ್ಗೆ ಸುಧಾಕರ್ ಚಿಂತನೆ ಇರುವ ಬಗ್ಗೆ ಸುಳಿವು ನೀಡಿದ್ದಾರೆ.
ನಿನ್ನೆಗೆ 1 ಕೋಟಿ ಲಸಿಕೆ ಹಾಕಿದ್ದೇವೆ : 18-45 ವರ್ಷದವರಿಗೆ ಲಸಿಕೆ ಕೊಡುವ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಕ್ರಮಗಳು ಆಗುತ್ತಿವೆ. 3 ನೇ ಅಲೆ ಬರುವ ಒಳಗೆ ಎಲ್ಲರಿಗೂ ಲಸಿಕೆ ಕೊಡುವ ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸುಧಾಕರ್ ತಿಳಿಸಿದರು.
'ನಿಯಂತ್ರಣ ತಪ್ಪಿದ ಕೊರೋನಾ : ಕಂಪ್ಲೀಟ್ ಲಾಕ್‌ಡೌನ್ ಮಾಡಿ' ...
ನಮ್ಮ ದೇಶದಲ್ಲಿ ಎರಡು ಲಸಿಕೆ ಕಂಪನಿಗಳು ಇವೆ. ಉತ್ಪಾದನೆ ಕಡಿಮೆ ಆಗುತ್ತಿರುವುದರಿಂದ ಲಸಿಕೆ ನಮಗೆ ಲಭ್ಯವಾಗುತ್ತಿಲ್ಲ. ಈಗಾಗಲೇ ಎರಡು ಕಂಪನಿಗಳ ಜೊತೆ ಮಾತಾಡಿದ್ದೇವೆ. ನಮಗೆ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡಿ ಎಂದು ಕೇಳಿದ್ದೇವೆ. ಮೇ 15 ಅಥವಾ ಮೇ 15 ನಂತರ ಲಸಿಕೆ ಅಭಿಯಾನ ಪ್ರಾರಂಭ ಮಾಡುತ್ತೇವೆ ಎಂದರು.
ಲಸಿಕೆ ಕೊಡುವುದು ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡುವ ಬಗ್ಗೆ ನನ್ನ ಗಮನ ಇದೆ ಎಂದರು.
ಆಕ್ಸಿಜನ್ ಉತ್ಪಾದನೆ : ಹವಾಮಾನದಿಂದ ಆಕ್ಸಿಜನ್ ಉತ್ಪತ್ತಿ ಮಾಡುವ ಜನರೇಟರ್ ಪ್ರಾರಂಭ ಮಾಡುತ್ತೇವೆ. ಕೇರ್ ಸೆಂಟರ್ ನಲ್ಲಿ ಆಕ್ಸಿಜನ್ ಕಾಂನ್ಸನ್ ಟ್ರೇಟರ್ ಗಳನ್ನ ಅಳವಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ . 50 ರಿಂದ 1 ಲಕ್ಷ ಮಿಷನ್ ಗಳನ್ನು ಖರೀದಿ ಮಾಡಲು ನಿರ್ಧಾರ ಮಾಡಲಾಗಿದೆ. ಪ್ರತಿ ಜಿಲ್ಲೆಗೆ 1 ಸಾವಿರ ಮಿಷನ್ ಕೊಡುವ ತೀರ್ಮಾನ ಮಾಡಲಾಗಿದೆ. ಶೀಘ್ರವಾಗಿ ಆಕ್ಸಿಜನ್ ಮಿಷನ್ ತರಿಸುವ ಕೆಲಸ ಮಾಡುವುದಾಗಿ ಸುಧಾಕರ್ ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona