ಕೆಲವು ಗಲಭೆಗಳು ರಾಜಕೀಯ ಪ್ರೇರಿತ ಆಗಿರುತ್ತವೆ. ಗುರುತರ ಆಪಾದನೆ ಇದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಆಗಲಿ. ಆದರೆ ಇದು ದೊಂಬಿ ಗಲಭೆ, ಮುಗ್ಧರ ಬಂಧನ ಆಗಿದೆ. ಪೊಲೀಸರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.
ಕೋಲಾರ (ಅ.11): ಕೆಲವು ಗಲಭೆಗಳು ರಾಜಕೀಯ ಪ್ರೇರಿತ ಆಗಿರುತ್ತವೆ. ಗುರುತರ ಆಪಾದನೆ ಇದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಆಗಲಿ. ಆದರೆ ಇದು ದೊಂಬಿ ಗಲಭೆ, ಮುಗ್ಧರ ಬಂಧನ ಆಗಿದೆ. ಪೊಲೀಸರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.
ಹುಬ್ಭಳ್ಳಿ ಗಲಭೆ ಪ್ರಕರಣವನ್ನ ಸರ್ಕಾರ ವಾಪಾಸ್ ಪಡೆದ ವಿಚಾರ ಸಂಬಂಧ ಇಂದು ಕೋಲಾರ ಕಾಂಗ್ರೆಸ್ ನಗರಾಧ್ಯಕ್ಷ ಪ್ರಸಾದ್ ಬಾಬು ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ದೊಂಬಿ ಗಲಭೆಗಳಲ್ಲಿ ಸಂಬಂಧವಿಲ್ಲದವರು ಸೇರಿರುತ್ತಾರೆ. ನೇರವಾಗಿ ಅಪರಾಧ ಮಾಡಿದವರನ್ನು ಬಿಡುಗಡೆ ಮಾಡುವ ಯೋಚನೆ ಸರ್ಕಾರಕ್ಕಿಲ್ಲ ಎಂದರು. ಇದೇ ವೇಳೆ 'ನಾಗಮಂಗಲ ಪ್ರಕರಣದಲ್ಲೂ ಹೀಗೆ ಆಗಲಿದೆಯೇ?' ಎಂಬ ಮಾಧ್ಯಮದವರ ಪ್ರಶ್ನೆಗೆ, 'ಪೊಲೀಸರ ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಆಗಲಿದೆ ಎಂದರು.
undefined
ನ್ಯಾಯಾಲಯವೇ ಜಾಮೀನು ನಿರಾಕರಿಸಿದ್ರೂ, ಪೊಲೀಸರಿಗೆ ಕಲ್ಲು ತೂರಿದ ಪುಂಡರ ಕೇಸ್ ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರ!
ಇಂದು ಪತ್ರಿಕೆಗಳಲ್ಲಿ ಸರ್ಕಾರದ ಜಾಹಿರಾತು ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವುದು ಚಾಮುಂಡೇಶ್ವರಿ ಹೇಳಿರುವುದು ತಾನೆ? ಸರ್ಕಾರವೂ ಅದನ್ನೆ ಹೇಳಿದೆ, ವಿಪಕ್ಷ ಎಂದು ಏನೂ ಹೇಳಿಲ್ಲ. ಸಮಾಜಕ್ಕೆ ಕೆಟ್ಟದನ್ನ ಬಯಸುವರ ವಿರುದ್ದವೇ ಆ ಜಾಹಿರಾತು ಇದೆ. ಪಕ್ಷವನ್ನು ಹೆಸರಿಸಿಲ್ಲ ಎಂದರು.
ಸರ್ಕಾರವನ್ನು ಅಸ್ತಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಶಾಸಕರು ಸಚಿವರೆಲ್ಲ ಒಟ್ಟಾಗಿದ್ದೇವೆ. ಮುಂದಿನ ಅವಧಿವರೆಗೆ ಸಿಎಂ ಆಗಿ ಸಿದ್ದರಾಮಯ್ಯ ಅವ್ರೆ ಮುಂದುವರೆಯುತ್ತಾರೆ. ರಾಜ್ಯದಲ್ಲಿ ದಲಿತ ಮಂತ್ರಿಗಳು ಭೇಟಿಗೆ ಬೇರೆ ಕತೆ ಕಟ್ಟಬೇಡಿ,ಮಂತ್ರಿಗಳ ಭೇಟಿಯಲ್ಲೂ ಸಿಎಂ ಸಿದ್ದರಾಮಯ್ಯ ಪರವಾಗಿಯೇ ಚರ್ಚೆಯಾಗಿದೆ. ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕು ಬೇಸರಗೊಂಡಿಲ್ಲ. ದಲಿತ ಸಿಎಂ ಕೂಗು 30. ವರ್ಷದಿಂದ ಇದೆ, ಹೈ ಕಮಾಂಡ್ ಒಬ್ಬರನ್ನ ಸಿಎಂ ಮಾಡಿದೆ, ಅವರಿಗೆ ನಮ್ಮ ಬೆಂಬಲವಿದೆ ಎಂದರು.
ಇನ್ನು ಬಿಜೆಪಿಯವರು ವಿನಾಕಾರಣ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡ್ತಿದ್ದಾರೆ. ಈ ಕ್ಲಿಷ್ಟ ಸಂಧರ್ಭದಲ್ಲಿ ನಾವು ಸಿಎಂ ಜೊತೆಗಿರ್ತೇವೆ. ಸಿಎಂ ಒಬ್ಬರು ಇದ್ದಾಗ, ಇನ್ನೊಬ್ಬರು ದಲಿತ ಸಿಎಂ ಆಗಬೇಕು ಎಂಬುದು ಅಪ್ರಸ್ತುತ ಎಂದರು. ಇದೇ ಸಂದರ್ಭದಲ್ಲಿ ಕೊವಿಡ್ ಹಗರಣ ತನಿಖೆ ಕುರಿತು ಮಾತನಾಡಿದ ಸಚಿವರು, ಈಗಾಗಲೇ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಯಾಗಿದೆ. ಕಾನೂನು ರೀತಿ ಕ್ರಮ ಆಗಲಿದೆ ಎಂದರು.
ಹುಬ್ಬಳ್ಳಿ ಗಲಭೆ ಕೇಸ್ ವಾಪಸ್‌ಗೆ ಸಚಿವ ಸಂಪುಟ ನಿರ್ಧಾರ, ವಿವಾದ ಸೃಷ್ಟಿಸಿದ ಸರ್ಕಾರದ ನಡೆ!
ಸರ್ವರ್ ಸಮಸ್ಯೆಯಿಂದ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ ವಿಳಂಬ ಆಗಿದೆ. ಪ್ರತಿ ತಿಂಗಳು 10 ರಂದು ಹಣ ಬಿಡುಗಡೆ ಆಗ್ತಿತ್ತು. ಆದರೆ ಬಾಕಿ ಹಣ ಮುಂದಿನ ವಾರ ಬಿಡುಗಡೆ ಆಗುತ್ತೆ. ದಕ್ಷಿಣ ಭಾರತದಲ್ಲಿ ನಮ್ಮ ರಾಜ್ಯದಲ್ಲಿ 80 ರಷ್ಟು ಬಡತನ ಇದೆ. BPL ಅರ್ಹತೆ ಪರಿಶೀಲಿಸಿ ಅನರ್ಹರನ್ನ APL ಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದರು.