ನ್ಯಾಯಾಲಯವೇ ಜಾಮೀನು ನಿರಾಕರಿಸಿದ್ರೂ, ಪೊಲೀಸರಿಗೆ ಕಲ್ಲು ತೂರಿದ ಪುಂಡರ ಕೇಸ್ ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರ!

By Ravi Janekal  |  First Published Oct 11, 2024, 4:43 PM IST

ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ತಪ್ಪಿಸಲು ಹುಬ್ಬಳ್ಳಿ ಗಲಭೆ  ಆರೋಪಿಗಳ ಕೇಸ್ ವಾಪಸ್ ತೆಗೆಯುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಮೈಂಡ್ ಡೈವರ್ಟ್  ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ಆಕ್ರೋಶ ವ್ಯಕ್ತಪಡಿಸಿದರು.


ಯಾದಗಿರಿ (ಅ.11): ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ತಪ್ಪಿಸಲು ಹುಬ್ಬಳ್ಳಿ ಗಲಭೆ  ಆರೋಪಿಗಳ ಕೇಸ್ ವಾಪಸ್ ತೆಗೆಯುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಮೈಂಡ್ ಡೈವರ್ಟ್  ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ರಿಕ್ತ ಮತಾಂಧರು ಪೊಲೀಸ್ ಸ್ಟೇಷನ್‌ಗೆ ನುಗ್ಗಿ ಬೆಂಕಿ ಹಚ್ಚಿದ್ದರು, ಕರ್ತವ್ಯದಲ್ಲಿ ಪೊಲೀಸ್ ಪೇದೆಗಳ ಮೇಲೆ ಕಲ್ಲು ತೂರಿ ತೀವ್ರವಾಗಿ ಗಾಯಗೊಳಿಸಿದ್ದರು. ಅಷ್ಟೇ ಅಲ್ಲದೆ ಪೊಲೀಸ್ ವಾಹನದ ಮೇಲೆ ನಿಂತು ಘೋಷಣೆ ಕೂಗಿದ್ದರು. ಇಂತಹ ದುಷ್ಕೃತ್ಯಕ್ಕೆ ಸುಪ್ರೀಂ ಕೋರ್ಟ್ ಸಹ ಜಾಮೀನು ನಿರಾಕರಿಸಿತ್ತು. ಆದರೆ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸರ್ಕಾರ ಇಂತಹ ದುಷ್ಟರ ಕೇಸ್ ವಾಪಸ್ ಪಡೆದಿದೆ ಎಂದರೆ ಯೋಚಿಸಿ, ನಾಳೆ ಉಗ್ರರು ಇನ್ನಷ್ಟು ಪೊಲೀಸ್ ಸ್ಟೇಷನ್‌ಗೆ ಬೆಂಕಿ ಹಚ್ಚಬಹುದು. ಕೆಜೆಹಳ್ಳಿ, ಡಿಜೆ ಹಳ್ಳಿ, ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇವೆಲ್ಲ ಉದಾಹರಣೆಗಳಷ್ಟೆ. ಈ ಸರ್ಕಾರ ವೋಟ್ ಬ್ಯಾಂಕಿಗಾಗಿ ಏನೂ ಬೇಕಾದ್ರೂ ಮಾಡಲು ಸಿದ್ಧವಿದೆ ಎಂಬುದುಕ್ಕೆ ಈ ಘಟನೆಯೇ ಸಾಕ್ಷಿ ಎಂದು ಕಿಡಿಕಾರಿದರು.

Tap to resize

Latest Videos

undefined

ಹುಬ್ಬಳ್ಳಿ ಗಲಭೆ ಕೇಸ್ ವಾಪಸ್‌ಗೆ ಸಚಿವ ಸಂಪುಟ ನಿರ್ಧಾರ, ವಿವಾದ ಸೃಷ್ಟಿಸಿದ ಸರ್ಕಾರದ ನಡೆ!

ಹುಬ್ಬಳ್ಳಿ ಗಲಭೆ ಕೇಸ್ ಗಂಭೀರವಾದುದದು, ದೇಶದ ಕಾನೂನು, ಭದ್ರತೆಗೆ, ಪೊಲೀಸ್ ವ್ಯವಸ್ಥೆಗೆ ಸವಾಲು ಹಾಕುವಂತದ್ದು. ಅಂತಹ ದುಷ್ಟರ ಕೇಸ್ ವಾಪಸ್ ಪಡೆದಿದ್ದಾರೆಂದರೆ ನಾಳೆ ಯಾರೇ ಈ ರೀತಿ ಗಲಭೆ ಮಾಡಿದ್ರೂ ಪ್ರಚೋದನೆ ಕೊಟ್ಟಂತೆ ಆಗುತ್ತದೆ. ಪೊಲೀಸ್ ಠಾಣೆಗೆ ನುಗ್ಗಿ ಹೊಡೆದವ್ರು, ನಾಳೆ ನಿಮ್ಮ ಮನೆಗೆ ಹೊಕ್ಕು ಹೊಡಿತ್ತಾರೆ. ಯಾರೂ ಅಧಿಕಾರದಲ್ಲಿ ಇರಲ್ಲ ಅವರ ಮನೆಗೆ ಹೊಕ್ಕು ಹೊಡೆಯುವ ಕೆಲಸ ಆಗುತ್ತೆ. ಕಾಂಗ್ರೆಸ್ ನವ್ರು ಕರ್ನಾಟಕ ಭಾರತ ದೇಶದಿಂದ ಹೊರಗಿದೆ, ಅಂಬೇಡ್ಕರ್ ಬರೆದ ಸಂವಿಧಾನದಿಂದ ಸಪರೇಟ್ ಇದೆ ಅಂತ ತಿಳಿದಿದ್ದಾರೆ ಅಂತ ತಿಳ್ಕೊಂಡಿದ್ದಾರೆ. ಅವರ‌ ಮನಸ್ಸಿಗೆ ಏನು ಬರುತ್ತೋ ಅದನ್ನು ಮಾಡ್ತಿದ್ದಾರೆ. ಕೂಡಲೇ ನಿನ್ನೆ ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡ ನಿರ್ಧಾರ ಕೈಬೀಡಬೇಕು. ಆರೋಪಿಗಳಿಗೆ ಎಲ್ಲರಿಗೂ ಶಿಕ್ಷೆ ಆಗಬೇಕು. ಇಲ್ಲದಿದ್ರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಕಾಂಗ್ರೆಸ್ ಪಕ್ಷ ಬೆಂಬಲಿಸುವವರು ರಾಜ್ಯದಲ್ಲಿ ಏನ್ ಬೇಕಾದ್ರು ಮಾಡಬಹುದು ಅಂತ ಅನ್ಕೊಂಡಿದ್ದಾರೆ. ಅಧಿಕಾರ ಶಾಶ್ವತ ಅಲ್ಲ, ಕಾಲ ಚಕ್ರ ತಿರುಗ್ತಾ ಇರುತ್ತೆ. ಆಡಳಿತ ಪಕ್ಷದಲ್ಲಿ ಯಾವ ರೀತಿ ಸರ್ಕಾರ ನಡೆಸ್ತಾರೆ ಅನ್ನೋದು ಮುಖ್ಯ ಎಂದರು.

click me!