ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀ ಮತ್ತೊಂದು ಬಾಂಬ್, ಸಚಿವಗೆ ಖಡಕ್ ಎಚ್ಚರಿಕೆ

By Suvarna News  |  First Published Apr 22, 2022, 8:10 PM IST

* ಸರ್ಕಾರದ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ದಿಂಗಾಲೇಶ್ವರ ಶ್ರೀಗಳು
* ಬಿಜೆಪಿ ಸರ್ಕಾರದ ವಿರುದ್ಧ 30% ಕಮಿಷನ್ ಆರೋಪ ಮಾಡಿದ್ದ ದಿಂಗಾಲೇಶ್ವರ ಸ್ವಾಮೀಜಿ
* ಸಚಿವ ಸಿಸಿ ಪಾಟೀಲ್‌ಗೂ ಎಚ್ಚರಿಕೆ ನೀಡಿದ ಶ್ರೀಗಳು


ಗದಗ, (ಏ.22): ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ 30% ಕಮಿಷನ್ ಆರೋಪ ಮಾಡಿದ್ದ ದಿಂಗಾಲೇಶ್ವರ ಶ್ರೀಗಳು, ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಹೌದು...ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಕ್ಕೆ ಸರಕಾರ ಪೊಲೀಸರ ಮೂಲಕ ನನ್ನ ಹೆದರಿಸುವ ತಂತ್ರ ಮಾಡುತ್ತಿದೆ. ಈ ಮೂಲಕ ನನ್ನ ಕಟ್ಟಿಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಆದ್ರೆ, ಸರ್ಕಾರದ ಈ ಬೆದರಿಕೆಗೆ ಹೆದರಲ್ಲ ಎಂದು ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Tap to resize

Latest Videos

. ಆದ್ರೆ ಇದೀಗ ಶ್ರೀಗಳು ಅದೇ ಬಿಜೆಪಿ ಸರಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸರಕಾರ ಪೊಲೀಸ್ ಅಧಿಕಾರಿಗಳ ಮೂಲಕ ನನ್ನ ಹೆದರಿಸುವ ಪ್ರಯತ್ನ ಮಾಡ್ತಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.

Bagalkot: ಮಠಮಾನ್ಯಗಳ ಅನುದಾನದಲ್ಲಿ 30 % ಕಮಿಷನ್ ನೀಡಬೇಕಿದೆ: ದಿಂಗಾಲೇಶ್ವರ ಶ್ರೀ

 ಗೂಢಾಚಾರದ ಮೂಲಕ ನನ್ನ ಮೇಲಿನ ಕೇಸ್ ಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ. ಪೊಲೀಸರು ಬಾಲೆಹೊಸೂರಿಗೆ ಭೇಟಿ ನೀಡಿ ಭಕ್ತರಿಗೆ ಕಾಟ ಕೊಡ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಆದ್ರೆ ಈ ರೀತಿ ಮಾಡಿ ಪೊಲೀಸ್ ಇಲಾಖೆಯನ್ನ ಬಳಿಸಿಕೊಂಡು ನನ್ನ ಹೆದುರಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ರೆ ನಾನು ಹೆದರುವ ಸ್ವಾಮಿ ನಾನಲ್ಲ ಅಂತ ದಿಂಗಾಲೇಶ್ವರ ಶ್ರೀಗಳು ಸವಾಲ್ ಹಾಕಿದ್ದಾರೆ.

ಇನ್ನು ಇದೇ ವೇಳೆ ಸಚಿವ ಸಿ.ಸಿ. ಪಾಟೀಲ್ ಮನೆ ಮುಂದೆ ಶ್ರೀಗಳು ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಅಂದಹಾಗೆ ಜಗದ್ಗುರು ಗದಗಿನ ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಜನ್ಮದಿನದಿಂದ ಭಾವೈಕ್ಯತೆ ದಿನ ಘೋಷಣೆ ಮಾಡಿದ್ದಕ್ಕೆ ದಿಂಗಾಲೇಶ್ವರ ಶ್ರೀಗಳು ಆಕ್ಷೇಪ ಎತ್ತಿದ್ದರು. ಆದ್ರೆ ಸಚಿವ ಸಿಸಿ ಪಾಟೀಲ್ ಶ್ರೀಗಳ ಆಕ್ಷೇಪಣೆ ಖಂಡಿಸಿ ಶ್ರೀಗಳ ಹಿನ್ನಲೆ ಬಗ್ಗೆ ಮತ್ತು ಹಲವಾರು ಗುರುತರ ಆರೋಪಗಳನ್ನ ಮಾಡಿದ್ದರು. ಹೀಗಾಗಿ ಸಚಿವ ಸಿ.ಸಿ. ಪಾಟೀಲ್ ವಿರುದ್ಧ ದಿಂಗಾಲೇಶ್ವರ ಕಿಡಿಕಾರಿದ್ದಾರೆ. ಹೀಗಾಗಿ ಬರೋ 27ನೇ ತಾರೀಖಿನೊಳಗಾಗಿ ತಾವು ಮಾಡಿರೋ ಎಲ್ಲಾ ಆರೋಪಗಳನ್ನ ಸಚಿವ ಸಿ.ಸಿ. ಪಾಟೀಲ್ ಸಾಬೀತು ಮಾಡಬೇಕು. ಸಾಭೀತಾದ್ರೆ ನಾನು ಎಲ್ಲಾ ಮಠಗಳ ಪೀಠತ್ಯಾಗ ಮಾಡ್ತೇನೆ  ಒಂದು ವೇಳೆ ಸಾಬೀತು ಮಾಡದಿದ್ದರೆ ಎಪ್ರಿಲ್ 27ರಂದು ನರಗುಂದ ಪಟ್ಟಣದ ಸಚಿವ ಸಿಸಿ ಪಾಟೀಲ್ ಮನೆ ಎದುರು ಧರಣಿ ನಡೆಸುತ್ತೇನೆ ಅಂತ ಎಚ್ಚರಿಕೆ ನೀಡಿದರು.

ಸಚಿವ ಸಿ.ಸಿ. ಪಾಟೀಲ್ರು ನನ್ನ ಬಗ್ಗೆ ಕೆಳಮಟ್ಟದ ಪದ ಬಳಸಿ ನಮಗೆ ಭಕ್ತರು ಆಘಾತ ಮಾಡಿದ್ದಾರೆ. ಶ್ರೀಗಳ ಪೂರ್ವಾಶ್ರಮದ ಬಗ್ಗೆ ನನಗೆ ಗೋತ್ತಿದೆ ಅಂತ ಸಚಿವ ಸಿ ಸಿ ಪಾಟೀಲ್ ಅಂದಿದ್ದಾರೆ. 5ನೇ ವರ್ಷದವನಾಗಿದ್ದಾಲೇ ಮಾನಸಿಕವಾಗಿ ನಾನು ಸನ್ಯಾಸಿ ಸ್ವೀಕಾರ ಮಾಡಿದ್ದೇನೆ. ನಮ್ಮ ಮನೆಯಲ್ಲಿ ಸಚಿವ ಸಿ ಸಿ ಪಾಟೀಲ್ ಮಾಲೀಕರಾಗಿದ್ದಿರೋ. ಜೀತದಾಳು ಆಗಿದ್ದೀರೋ ಸಮಾಜಕ್ಕೆ ಸ್ಪಷ್ಟ ಪಡಿಸಬೇಕು. ಮೂರು ಸಾವಿರ ಮಠದ ವಿಷಯ ಪ್ರಸ್ತಾಪ ಮಾಡಿದ್ದೀರಿ. ಮೂರು ಸಾವಿರ ಮಠದ ಪೀಠಕ್ಕಾಗಿ ರೌಡಿಸಂ‌ ಮಾಡಿದ್ದಾರೆ ಎಂದಿದ್ದಾರೆ. ರೌಡಿಸಂ ಏನ್ ಮಾಡಿದ್ದೇನೆ ಎಂದು ಸಚಿವ ಸಿ.ಸಿ. ಪಾಟೀಲ್ ತೋರಿಸಬೇಕು. ಸಚಿವ ಸಿ ಸಿ ಪಾಟೀಲ್ ನನ್ನ ಮೇಲೆ ಮಾಡಿರೋ ಆರೋಪ ಸಾಬೀತು ಮಾಡಿದ್ರೆ ತಕ್ಷಣ ಎಲ್ಲ ಮಠಗಳ ಪೀಠ ತ್ಯಾಗ ಮಾಡ್ತೀನಿ ಎಂದು ಶ್ರೀಗಳು ಸವಾಲು ಹಾಕಿದ್ದಾರೆ.

ಇನ್ನು ಮುಂದುವರೆದು ಸಿಸಿ ಪಾಟೀಲ್ ಮೇಲೆ ಶ್ರೀಗಳು ವಾಗ್ದಾಳಿ ನಡೆಸಿದ್ದು, ಸಚಿವರು ನನ್ನ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡಿದ್ಸೀರಿ. ನಿಮ್ಮ ನೈತಿಕತೆಯ ಬಗ್ಗೆ ನನಗೆ ಬಹಳಷ್ಟು ಆಶ್ಚರ್ಯ ಆಗ್ತಿದೆ. ವಿಧಾನಸೌಧದಲ್ಲಿ ಅಧಿವೇಶನ ನಡೆದಾಗ ಮೊಬೈಲ್ ನಲ್ಲಿ ಏನ್ ನೋಡಿದ್ರಿ ಅನ್ನೋದನ್ನ ಇಡೀ ಜಗತ್ತಿಗೆ ಗೊತ್ತಿದೆ. ಯಾವ ನೈತಿಕೆಯ ಹಿನ್ನೆಲೆಯಲ್ಲಿ ನೀವು ರಾಜೀನಾಮೆ ಕೊಟ್ರೆ ಅನ್ನೋದನ್ನ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಪರೋಕ್ಷವಾಗಿ ಅಧಿವೇಶನದಲ್ಲಿ ಬ್ಲ್ಯೂ ಫಿಲ್ಮ್ ನೋಡಿದ್ದರ ಬಗ್ಗೆ ಪ್ರಸ್ತಾಪಿಸಿ ಟಾಂಗ್ ನೀಡಿದರು.

ದಿಂಗಾಲೇಶ್ವರ ಶ್ರೀಗಳು ಹಾಕಿ ಕಮಿಷನ್ ಬಾಂಬ್ ಗೆ ಬಿಜೆಪಿ ಸರ್ಕಾರ ಕಕ್ಕಾಬಿಕ್ಕಿಯಾಗಿದೆ. ಶ್ರೀಗಳ ಹೇಳಿಕೆ ಇಟ್ಕೊಂಡು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈಗ ಶ್ರೀಗಳು ಮತ್ತೊಂದು ಬಾಂಬ್ ಹಾಕಿದ್ದಾರೆ. ಹೌದು 30 ಪರ್ಷೆಂಟ್ ಕಮೀಷನ್ ಬಗ್ಗೆ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದ ದಿಂಗಾಲೇಶ್ವರ ಶ್ರೀಗಳ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ವಿರೋಧ ಪಕ್ಷದ ನಾಯಕರು ಇದೇ ವಿಚಾರವನ್ನ ಇಟ್ಟುಕೊಂಡು ಸರಕಾರದ ಮೇಲೆ ಮುಗಿಬಿದ್ದಿದ್ದರು.

ಇದಾದ ಬಳಿಕ ದಿಂಗಾಲೇಶ್ವರ ಹೇಳಿಕೆಯಿಂದ ಮುಜಗುರ ತಪ್ಪಿಸಿಕೊಳ್ಳಲು ಬಿಜೆಪಿ ನಾಯಕರು ದಿಂಗಾಲೇಶ್ವರ ಶ್ರೀಗಳ ವಿರುದ್ಧ ತಿರುಗಿಬಿದ್ದಿದ್ದರು. ದಿನದಿನಕ್ಕೆ ಹೊಸ ಹೊಸ ಆಯಾಮಗಳು, ಹೊಸ ಹೊಸ ಚರ್ಚೆಗಳಿಗೆ ನಾಂದಿಹಾಡಿತ್ತು. ಅದರಲ್ಲೂ ಶ್ರೀಗಳ ಹೇಳಿಕೆಯಿಂದ ಇಡೀ ಸಂಪುಟದ ನಾಯಕರು ದಂಗಾಗಿಹೋಗಿದ್ದರು. ಈ ಬೆನ್ನಲ್ಲೆ ದಿಂಗಾಲೇಶ್ವರ ಶ್ರೀಗಳ ಹಿನ್ನಲೆ ಕೆದುಕೋದಕ್ಕೆ ಶುರು ಮಾಡಿದ್ದರು. ಹಲವು ಬಿಜೆಪಿ ನಾಯಕರು ಹಲವು ಆರೋಪಗಳನ್ನ ಮಾಡಿದ್ದರು

click me!