ಭಟ್ಕಳದಲ್ಲಿ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನಿ ಮಹಿಳೆಯ ಪತಿ ಸಾವು

By Suvarna News  |  First Published Apr 22, 2022, 6:42 PM IST

* ಭಟ್ಕಳದಲ್ಲಿ ಬಂಧನಗೊಳಗಾಗಿದ್ದ ಪಾಕಿಸ್ತಾನಿ ಮಹಿಳೆಯ ಪತಿ ಸಾವು
* ಕಳೆದ ವರ್ಷ ಭಟ್ಕಳದಲ್ಲಿ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನ ಪ್ರಜೆ ಖತೀಜಾ ಮೆಹ್ರೀನ್
* ಮಹಿಳೆಯ ಪತಿ ಜಾವೇದ್ ಮೊಹಿದ್ದೀನ್ ರುಕ್ನುದ್ದೀನ್ ಹೃದಯಾಘಾತದಿಂದ ಸಾವು


ಕಾರವಾರ(ಏ.22): ಭಟ್ಕಳದಲ್ಲಿ (Bhatkal) ಬಂಧನಕ್ಕೊಳಗಾಗಿದ್ದ ಪಾಕಿಸ್ತಾನಿ ಮಹಿಳೆಯ (Pakistan Woman) ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ(Death).

ಕಳೆದ ವರ್ಷ(2021) ಭಟ್ಕಳದಲ್ಲಿ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನd ಪ್ರಜೆ ಖತೀಜಾ ಮೆಹ್ರೀನ್ ಅವರ ಪತಿ ಜಾವೇದ್ ಮೊಹಿದ್ದೀನ್ ರುಕ್ನುದ್ದೀನ್ ಇಂದು (ಶುಕ್ರವಾರ) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Latest Videos

undefined

ಭಟ್ಕಳ ನವಾಯತ್ ಕಾಲೋನಿ ನಿವಾಸಿಯಾಗಿದ್ದ ಜಾವೇದ್ ಮೊಹಿದ್ದೀನ್ ರುಕ್ನುದ್ದೀನ್‌ಗೆ ನಿನ್ನೆ(ಗುರುವಾರ) ಆರೋಗ್ಯದಲ್ಲಿ ಏರುಪೇರು ಕಂಡ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗುವನ್ನು ಅಗಲಿದ್ದಾರೆ

ಪಾಕ್ ಮಹಿಳೆ ಭಟ್ಕಳದಲ್ಲಿ ಬಂಧನ, ಇಲ್ಲಿಯ ರೇಷನ್ , ಆಧಾರ್ ಕಾರ್ಡ್ ಪಡಕೊಂಡಿದ್ದಳು!

ಮೋಹಿದ್ದಿನ್ ರುಕ್ನುದ್ದೀನ್ ಅವರನ್ನು ಮದುವೆಯಾಗಿ  2014ರಲ್ಲಿ ಪಾಕಿಸ್ತಾನ ಪ್ರಜೆ  ಖತೀಜಾ ಮೆಹ್ರೀನ್ ಜಾವೇದ್ ಭಾರತಕ್ಕೆ ಬಂದಿದ್ದು, ಕಾನೂನು ಬಾಹಿರವಾಗಿ ಭಾರತಕ್ಕೆ ನುಸುಳಿ ಅನಧಿಕೃತವಾಗಿ ಭಟ್ಕಳದ ನವಾಯತ ಕಾಲೋನಿ ವೈಟ್ ಹೌಸ್ ಮನೆಯಲ್ಲಿ ವಾಸವಾಗಿದ್ದಳು

ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಇಂಟೆಲಿಜೆನ್ಸ್ ಅಧಿಕಾರಿಗಳು  ಭಟ್ಕಳ ಪೊಲೀಸರ ಸಹಾಯದಿಂದ ಕಳೆದ 2021ರ ಜೂ.9ರಂದು ಆಕೆಯನ್ನು ಬಂಧಿಸಿದ್ದರು. 

ನಕಲಿ ಡಾಕ್ಯುಮೆಂಟ್‌ಗಳ ಮೂಲಕ  7 ವರ್ಷಗಳ ಹಿಂದೆ ಭಾರತಕ್ಕೆ ಮಹಿಳೆ ಎಂಟ್ರಿ ಕೊಟ್ಟಿದ್ದಳು. 2013ರಲ್ಲಿ ಮೇಯಿಂದ ಜುಲೈವರೆಗೆ ವಿಸಿಟಿಂಗ್ ವೀಸಾದ ಮೂಲಕ ಭಾರತಕ್ಕೆ ಬಂದು ಹಿಂತಿರುಗಿದ್ದಳು. ಜಾವೀದ್‌ನನ್ನು ದುಬೈನಲ್ಲಿ ಮದುವೆಯಾಗಿ ವಿಸಿಟಿಂಗ್ ವೀಸಾದಲ್ಲಿ ಬಂದಿದ್ದಳು. ಬಳಿಕ 2014ಕ್ಕೆ ಕಳ್ಳ ಮಾರ್ಗದ ಮೂಲಕ ಭಾರತಕ್ಕೆ ಪ್ರವೇಶಿಸಿ ತನ್ನ 3 ಮಕ್ಕಳೊಂದಿಗೆ ಭಟ್ಕಳದಲ್ಲಿದ್ದಳು.

ನೇಪಾಳದ ಗಡಿಯಲ್ಲಿ ಮಹಿಳೆ ಏಜೆಂಟರ ಸಹಾಯದಿಂದ ಕಳ್ಳಮಾರ್ಗದಿಂದ ನುಸುಳಿರುವುದಾಗಿ ಮಾಹಿತಿ ಸಿಕ್ಕಿದೆ. ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ರೇಷನ್ ಕಾರ್ಡ್, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಪಡೆದುಕೊಂಡಿದ್ದಳು.  ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಯಿಂದ ಮಾಹಿತಿ ಪಡೆದು ಮಹಿಳೆಯನ್ನು ವಶಕ್ಕೆ  ಪಡೆಯಲಾಗಿತ್ತು,

click me!