ಹುಬ್ಬಳ್ಳಿ ಗಲಭೆಯಲ್ಲಿ ‌ಯಾರೇ ಇರಲಿ ಬಿಡುವ ಪ್ರಶ್ನೆಯೇ ‌ಇಲ್ಲ Pralhad Joshi

By Suvarna News  |  First Published Apr 22, 2022, 3:46 PM IST

ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯಾರೇ ಇದ್ರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.


ವರದಿ : ಜಗನ್ನಾಥ ‌ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್ 

ರಾಯಚೂರು (ಏ.22):  ಹುಬ್ಬಳ್ಳಿ ಗಲಾಟೆಯ (hubballi violence) ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಕಮಿಷನರ್ ಹಾಗೂ ಪೊಲೀಸರು ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi ) ಹೇಳಿದ್ದಾರೆ. ರಾಯಚೂರಿನ ಯರಮರಸ್ ಸರ್ಕ್ಯೂಟ್ ಹೌಸ್ ನಲ್ಲಿ  ಮಾತನಾಡಿದ ‌ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿಡಿಯೋದಲ್ಲಿ ಇರುವ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಗಲಾಟೆಯಲ್ಲಿ ಯಾರೇ ಇದ್ರೂ ಬಿಡುವ ಪ್ರಶ್ನೆಯೇ ಇಲ್ಲ. ಗ್ರಾಫಿಕ್ಸ್ ‌ಮಾಡಿ ಪೋಟೋ ಹಾಕಿದ ವ್ಯಕ್ತಿಯ ಬಂಧನದ ಬಳಿಕವೂ ಗಲಾಟೆ ‌ಮಾಡಿದ್ದು, ಪೊಲೀಸರ ಮೇಲೆ ಕಲ್ಲು ಎಸೆಯಲಾಗಿದೆ.

Tap to resize

Latest Videos

 ಪೊಲೀಸ್ ವಾಹನಗಳು ಜಖಂಗೊಳಿಸುವುದು,  ಹಿಂದೂ ದೇವಸ್ಥಾನ ‌ಮೂರ್ತಿ ಹಾನಿ ಮಾಡುವುದು, ಪೊಲೀಸರನ್ನು ಕಲ್ಲು ಚಪ್ಪಡಿ ಹಾಕಿ ಕೊಂದು ಹಾಕಲು ಯತ್ನಿಸಿರುವುದು ಬಗ್ಗೆ ಮಾಹಿತಿ ಬಂದಿದ್ದು, ಇಂತಹ ಸಂಗತಿಗಳು ಸಹಿಸಲು ಸಾಧ್ಯವಿಲ್ಲ. ಸಮಾಜ ವಿದ್ರೋಹಿ ಶಕ್ತಿಗಳು ‌ಯಾರೇ ಇರಲಿ. ಅವರನ್ನ ಬಂಧಿಸಿ ಕಾನೂನು ಪ್ರಕಾರ ಅವರಿಗೆ ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸುತ್ತೇವೆ. ಈ ಗಲಾಟೆ ಬಗ್ಗೆ ಸಮಗ್ರ ತನಿಖೆ ಆಗುತ್ತೆ. ಸದ್ಯ ಒಂದು ಮಾಸ್ಟರ್ ಮೈಂಡ್ ಸಿಕ್ಕಿದ್ದಾನೆ. ಇನ್ನೂ ಎಷ್ಟು ಎಷ್ಟು ಮಾಸ್ಟರ್ ಮೈಂಡ್ ‌ಇದ್ದಾರೆ ಅವರನ್ನು ಹೊರ ತೆಗೆಯುತ್ತೇವೆ. ಎಲ್ಲರನ್ನೂ ಬಂಧಿಸಿ ಅತ್ಯಂತ ಕಟ್ಟೋರ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದರು.

ಡಿಜೆ ಹಳ್ಳಿ, ಕೆಜಿಹಳ್ಳಿ ಮಾದರಿ ಗಲಾಟೆಯೇ ನಡೆಯುತ್ತಿತ್ತು ಎಂಬ ಮಾಹಿತಿ ಹಿರಿಯ ಪೊಲೀಸ್ ಅಧಿಕಾರಿಗಳು ನನಗೆ ಕೊಟ್ಟಿದ್ದಾರೆ.
ಮುಂದೆ ಇಂತಹ ಗಲಾಟೆ ಆಗದಂತೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

CHIKKAMAGALURU ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವರ ಭೇಟಿ

ದೇಶದಲ್ಲಿ ‌ಕಲ್ಲಿದ್ದಲು ಕೊರತೆಯೇ ಇಲ್ಲ: ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಗಳಿಗೆ ಕಲ್ಲಿದ್ದಲು ಕೊರತೆ ಇಲ್ಲ. ಗಣಿಗಳಿಂದ ನಿಗದಿತ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು. ರಾಯಚೂರಿನ ಆರ್ ಟಿಪಿಎಸ್ ಗೆ ಸಿಂಗ್ರೇಣಿಯಿಂದ ಪ್ರತಿ ದಿನ 7 ರೇಖು ಬರಬೇಕಿತ್ತು.ಈಗ ಅದನ್ನು 9-10ಕ್ಕೆ ಹೆಚ್ಚಳ ಮಾಡಲಾಗಿದೆ. ಮಹಾನದಿ, ಎಮ್ಸಿಎಲ್ ನಿಂದ ರೋಡ್ ಕಂ ರೈಲು ಮೂಲಕ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ 2 ದೊಡ್ಡ ಕಲ್ಲಿದ್ದಲು ಗಣಿ ನೀಡಲಾಗಿದೆ. ಬಿಸ್ ವೈ ಅವಧಿಯಲ್ಲಿ ಒಂದು ಗಣಿಯಿಂದ  1 ರೇಖು ಬರುತ್ತಿದೆ. ಅದನ್ನು ಹೆಚ್ಚಿಸಲು ಸಲಹೆ‌ ನೀಡಲಾಗಿದೆ. ಮಂದಾಕಿನಿ ಕೋಲ್ ಬ್ಲಾಕ್ ಕೊಟ್ಟು ಅಲೊಕೇಷನ್ ಹೆಚ್ಚಿಸಿದ್ದೇವೆ. ಹೆಚ್ಚಿನ ವಿದ್ಯುತ್ ಬೇಡಿಕೆ ಇಲ್ಲದಿರುವುದರಿಂದ ಬಂದ್ ಮಾಡಿದ್ದಾಗಿ ಇಂಧನ ಸಚಿವರೇ ಹೇಳಿದ್ದಾರೆ. ದೇಶದಲ್ಲಿ ಪ್ರತಿ ದಿನ 3.1 ಬಿಲಿಯನ್ ಯುನಿಟ್ ಡಿಮ್ಯಾಂಡ್ ಇತ್ತು. ಅದು ಈಗ 3.4 ಬಿಲಿಯನ್ ಯುನಿಟ್ ಬೇಡಿಕೆಗೆ ಹೆಚ್ಚಿದೆ. ರಷ್ಯಾದಿಂದ ಗ್ಯಾಸ್ ಸಪ್ಲೈ ಬಂದಾಗಿದ್ದರಿಂದ ಎಲ್ಲದಕ್ಕೂ ಕಲ್ಲಿದ್ದಲು ಅನಿವಾರ್ಯ ಆಗಿದ್ದರೂ ನಿತ್ಯ 2 ಮಿಲಿಯನ್ ಟನ್ ನಿತ್ಯ ಬೇಕಿದೆ. ಅಷ್ಟೆ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ. ಪ್ರತಿ ಘಟಕದಲ್ಲಿ 10 ದಿನದ ಸ್ಟಾಕ್ ಇದೆ ಎಂದು ಹೇಳಿದರು.

ಕೊಪ್ಪಳದಿಂದ ಸ್ಪರ್ಧೆ ಮಾಡ್ತಾರಾ ಸಿದ್ದರಾಮಯ್ಯ

 ದೆಹಲಿ ಆಪ್ ಪರಿವಾರ ರಾಜಕೀಯ : ಬಿಜೆಪಿಗೆ ಭ್ರಷ್ಟಾಚಾರ, ಗುಂಡಾ ಹಿನ್ನೆಲೆ ‌ನಾಯಕರು  ಬರುತ್ತಿದ್ದಾರೆಂಬ ಆಪ್ ಮುಖ್ಯಸ್ಥ ಕೇಜ್ರಿವಾಲ್ ಆರೋಪಕ್ಕೆ ‌ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ  ಅಲ್ಲ‌ಗಳೆದರು. ರಾಜ್ಯಸಭಾಕ್ಕೆ ಅವರ ಅಳಿಯನ್ನು ಕಳಿಸಿದ್ದಾರಲ್ಲ ಅದಕ್ಕೇನಂತಾರೆ. ನಾವು ಪರಿವಾರ ರಾಜಕೀಯ ವಾದ ವಿರೋಧಿಸುತ್ತೇವೆ.
ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದರೆ ಬುಲ್ಡೋಜರ್ ಮೂಲಕ ಧ್ವಂಸ ಮಾಡುತ್ತೇವೆ. ಸಕ್ರಮ ಇದ್ರೆ ಬಿಡುತ್ತೇವೆ ಎಂದರು. ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸರಿಯಾದ ದಿಕ್ಕಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಲಾಭ, ನಷ್ಟ‌,‌ ತುಷ್ಟೀಕರಣ ಸಂಸ್ಕೃತಿ ಕಾಂಗ್ರೆಸ್ ಬಿಡಬೇಕು. ಐಕ್ಯತೆ ಗೆ ಒತ್ತು ಕೊಡಬೇಕು. ಎಲ್ಲ ಮುಸ್ಲಿಂರು ಮತಾಂದರಲ್ಲ ಕೆಲವು ಕಿಡಿಗೇಡಿಗಳು ಕಲ್ಲು ಹಾಕುತ್ತಿದ್ದಾರೆ ಅವರ ಸಹಿಸಲು ಸಾಧ್ಯವಿಲ್ಲ ಎಂದು ಜೋಷಿ ಹೇಳಿದರು.

click me!