
ಬೆಂಗಳೂರು, (ಅ.30): 5 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗವಾಣೆ ಮಾಡಿ ಕರ್ನಾಟಕ ಸರ್ಕಾರ 9Karnataka Government) ಇಂದು (ಅ.30) ಆದೇಶ ಹೊರಡಿಸಿದೆ.
ಸುಮನ್ ಡಿ. ಪನ್ನೇಕರ್, ಇಷಾ ಪಂತ್, ಯತೀಶ್ ಎನ್. ಸೇರಿದಂತೆ ಐವರು ಖಡಕ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ (Transffer) ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನೇಮಕ ಮಾಡಿದ್ದ ಸರ್ಕಾರದಿಂದಲೇ ತಡೆ: ಖಡಕ್ ಅಧಿಕಾರಿಗೆ ಬೆದರಿದ್ರಾ ಮಂಡ್ಯ ರಾಜಕೀಯ ನಾಯಕರು?
ತೀವ್ರ ವಿವಾದಕ್ಕೀಡಾಗಿದ್ದ ಮಂಡ್ಯ (mandya) ಎಸ್ಪಿ ಸ್ಥಾನಕ್ಕೆ ಸುಮನ್ ಡಿ. ಪನ್ನೇಕರ್ ಅವರ ಬದಲು ಯತೀಶ್ ಎನ್. ಅವರನ್ನು ನೇಮಕ ಮಾಡಲಾಗಿದೆ. ಮಂಡ್ಯ ಎಸ್‌ಪಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಸುಮನ್ ಡಿ. ಪನ್ನೇಕರ್ ಅವರನ್ನು ಉತ್ತರ ಕನ್ನಡದ ಎಸ್‌ಪಿಯಾಗಿ ಎತ್ತಂಗಡಿ ಮಾಡಲಾಗಿದೆ.
ಮಂಡ್ಯ ನೂತನ ಎಸ್‌ಪಿಯಾಗಿ ಎನ್. ಯತೀಶ್, ಉತ್ತರ ಕನ್ನಡ ಎಸ್‌ಪಿಯಾಗಿ ಸುಮನ್ ಡಿ. ಪನ್ನೇಕರ್, ಕಲಬುರಗಿ ಎಸ್‌ಪಿಯಾಗಿ ಇಷಾ ಪಂತ್, ಗದಗದ ಎಸ್‌ಪಿಯಾಗಿ ಎಸ್.ಪಿ. ದೇವರಾಜ್, ಮೈಸೂರಿನ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿಯಾಗಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಚರ್ಚೆಗೆ ಗ್ರಾಸವಾಗಿದ್ದ ಮಂಡ್ಯ ಎಸ್ಪಿ
ಅ. 20ರಂದು ಮಂಡ್ಯ ಎಸ್ಪಿ ಡಾ.ಎಂ. ಅಶ್ವಿನಿ ಅವರನ್ನು ವರ್ಗಾವಣೆಗೊಳಿಸಿದ್ದ ಸರ್ಕಾರ ಆ ಜಾಗಕ್ಕೆ ಸುಮನ್ ಡಿ. ಪನ್ನೇಕರ್ ಅವರನ್ನು ನೇಮಕ ಮಾಡಿತ್ತು. ಆದರೆ, ಸುಮನ್ ಡಿ. ಪನ್ನೇಕರ್ ಅವರಿಗೆ ಎಸ್ಪಿ ಆಗಿ ಚಾರ್ಜ್ ತೆಗೆದುಕೊಳ್ಳದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದರು.
ಇದರಿಂದ ಸುಮಾರು 10 ದಿನಗಳಿಂದ ಮಂಡ್ಯ ಎಸ್ಪಿ ಸ್ಥಾನ ಖಾಲಿಯಿತ್ತು. ಈ ಹಿನ್ನೆಲೆಯಲ್ಲಿ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರವೇ ವರ್ಗಾವಣೆ ಮಾಡಿ ಬಳಿಕ ಅಧಿಕಾರ ವಹಿಸಿಕೊಳ್ಳುವುದನ್ನ ತಡೆಹಿಡಿದಿದ್ಯಾಕೆ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದವು.
ಅಲ್ಲದೇ ರಾಜಕೀಯ ಒತ್ತಡದಿಂದ ಮಂಡ್ಯದ ನೂತನ ಮಹಿಳಾ ಎಸ್ಪಿ ಸುಮನ್ ಡಿ. ಪನ್ನೇಕರ್ ಅಧಿಕಾರ ವಹಿಸಿಕೊಳ್ಳದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ. ಮಂಡ್ಯ ಎಸ್ಪಿ ನೇಮಕ ವಿಚಾರದಲ್ಲಿ ಯಾವುದೇ ಒತ್ತಡವಿಲ್ಲ. ಅನೇಕ ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಅವರಿಗೆ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವುದಕ್ಕೆ ಸಮಯ ಇರುತ್ತದೆ ಸ್ಪಷ್ಟನೆ ಕೊಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ