ಪುನೀತ್ ನಿಧನ: ಕೊಪ್ಪಳ, ಬೆಳಗಾವಿಯಲ್ಲಿ ಅಭಿಮಾನಿಗಳು ಸಾವು, ರಾಯಚೂರಲ್ಲಿ ಫ್ಯಾನ್ಸ್ ಆತ್ಮಹತ್ಯೆಗೆ ಯತ್ನ

By Suvarna News  |  First Published Oct 30, 2021, 4:51 PM IST

* ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ಸಾವು
* ಪುನೀತ್ ಸಾವಿನಿಂದ ಹೆಚ್ಚುತ್ತಲೇ ಇವೆ ವಿದ್ರಾವಕ ಘಟನೆಗಳು
* ಮತ್ತೊಬ್ಬ ಅಪ್ಪು ಅಭಿಮಾನಿ ಹೃದಯಾಘಾತದಿಂದ ಸಾವು


ಕೊಪ್ಪಳ/ಬೆಳಗಾವಿ, (ಅ.30): ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​  (Pneeth Rajkumar)ಅವರ ಸಾವಿನಿಂದ  ರಾಜದ ವಿವಿಧ ಜಿಲ್ಲೆಗಳಲ್ಲಿ ವಿದ್ರಾವಕ ಘಟನೆಗಳು ಹೆಚ್ಚುತ್ತಲೇ ಇವೆ. 

ಹೌದು... ಪುನೀತ್ ​ ಸಾವಿನಿಂದ (Puneeth Death) ಆಘಾತಕ್ಕೆ ಒಳಗಾಗಿ ಕೊಪ್ಪಳ(Koppal), ಬೆಳಗಾವಿಯಲ್ಲಿ (Belagavi) ಅಭಿಮಾನಿಗಳಿಗೆ ಹೃದಯ ಒಡೆದು ಹೋಗಿದೆ. ಮತ್ತೊಂದೆಡೆ ರಾಯಚೂರು ಜಿಲ್ಲೆಯಲ್ಲಿ ಪುನೀತ್ ಅಭಿಮಾನಿಗಳು (fans) ಆತ್ಮಹತ್ಯೆ (suicide)ಯತ್ನಿಸಿರುವ ಘಟನೆ ನಡೆದಿದೆ. 

Tap to resize

Latest Videos

ಪುತ್ರಿಯಿಂದಲ್ಲ ಅಭಿಮಾನಿಗಳಿಗೋಸ್ಕರ ನಾಳೆ ಅಂತ್ಯಕ್ರಿಯೆ ಮಾಡುತ್ತೇವೆ: ರಾಕ್‌ಲೈನ್‌ ವೆಂಕಟೇಶ್

ಕೊಪ್ಪಳದ ಅಭಿಮಾನಿ
ಜ್ಞಾನಮುರ್ತಿ ತಿಮ್ಮಣ್ಣ, ಮೃತ ದುರ್ದೈವಿ. ಕೊಪ್ಪಳದ ಚಿಕ್ಕ ಬಗನಾಳ ಗ್ರಾಮದಲ್ಲಿ  ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಜ್ಞಾನಮೂರ್ತಿ ಪುನೀತ್ರ ಅಪ್ಪಟ ಅಭಿಮಾನಿಯಾಗಿದ್ದರು. ನಿನ್ನೆ(ಅ.29) ನೆಚ್ಚಿನ ನಟನ ಅಗಲಿಕೆಯ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದರು. 

ಅದೇ ದುಃಖದಲ್ಲೇ ಮಲಗಿದ್ದ ಅಭಿಮಾನಿ ಇಂದು (ಅ.30) ಬೆಳಗಿನ ಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.  ಕಿರಾಣಿ ಅಂಗಡಿಯಲ್ಲಿ ಸದಾ ಪುನೀತ್ ರಾಜ್‍ಕುಮಾರ್ ಹಾಡುಗಳನ್ನು ಕೇಳುತ್ತಿದ್ದರು. ಪುನೀತ್ ರಾಜ್‍ಕುಮಾರ್ ರ ಬಹುತೇಕ ಸಿನಿಮಾಗಳನ್ನು‌ ಫಸ್ಟ್ ಶೋ ನೋಡುತ್ತಿದ್ದರು. ನಮ್ಮ ನೆಚ್ಚಿನ ನಟ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದಂತೆ ಹೃದಯ ಬಡಿತವೇ ನಿಂತು ಹೋಗಿದೆ. 

ರಾಯಚೂರಿನಲ್ಲಿ ಆತ್ಮಹತ್ಯೆಗೆ ಯತ್ನ
ನಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಯಿಂದ ನೊಂದ ಅಭಿಮಾನಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಂಧನೂರು ತಾಲೂಕಿನ ಅರಾಪುರದ ಬಸನಗೌಡ (22) ಹಾಗೂ ಯಾಪಲಪರ್ವಿಯ ಮೊಹಮ್ಮದ್ ರಫಿ (25) ಶುಕ್ರವಾರ ರಾತ್ರಿ ವಿಷ ಸೇವಿಸಿ ಆತ್ನಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಇಬ್ಬರನ್ನು ಸಿಂಧನೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಮರಾಜನಗರದ ಅಭಿಮಾನಿ ಸಾವು
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾವಿನ ಸುದ್ದಿ ನಿಜಕ್ಕೂ ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಅಕ್ಟೋಬರ್ 29 ಅವರ ದಿಢೀರ್ ಸಾವಿನ ಸುದ್ದಿ ಕೇಳಿ ಚಾಮರಾಜನಗರದಲ್ಲಿ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದರು.

ಬೆಳಗಾವಿಯಲ್ಲಿ ಇಬ್ಬರು ಸಾವು
ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಅಭಿಮಾನಿಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ.   ಅಥಣಿ ಪಟ್ಟಣದ ರಾಹುಲ್ ಗಾಡಿವಡ್ಡರ (26), ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದ ಉಂಟಾದ ತೀವ್ರ ದುಃಖದಿಂದ ಶುಕ್ರವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುಂಚೆ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದ ರಾಹುಲ್, ಅವರ ಸಾವಿನಿಂದ ಮನನೊಂದಿದ್ದರು ಎನ್ನಲಾಗಿದೆ.

ಬೆಳಗಾವಿಯ ಪರಶುರಾಮ್
ಬೆಳಗಾವಿಯ ಶಿಂದೋಳ್ಳಿ ಗ್ರಾಮದಲ್ಲಿ ಪುನೀತ್ ಅವರ ಮತ್ತೊಬ್ಬ ಅಭಿಮಾನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪರಶುರಾಮ್ ದೇಮಣ್ಣನವರ್ ಅವರು ಪುನೀತ್ರ ಕಟ್ಟಾ ಅಭಿಮಾನಿಯಾಗಿದ್ದು, ಪುನೀತ್ರ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡಿ ಅಳುತ್ತಿದ್ದರು. ಈ ವೇಳೆ ತೀವ್ರ ಹೃದಯಾಘಾತಕ್ಕೊಳಗಾಗಿ ಅಕ್ಟೋಬರ್ 29ರ ಶುಕ್ರವಾರ ರಾತ್ರಿ 11 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.

ಭಾನುವಾರ ಅಂತ್ಯಕ್ರಿಯೆ
ಸರ್ಕಾರ ಹಾಗೂ ಡಾ.ರಾಜ್​ ಕುಟುಂಬದ ತೀರ್ಮಾನದಂತೆ ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್​ ಅವರ ಅಂತ್ಯಕ್ರಿಯೆ Last Rites) ನಾಳೆ (ಭಾನುವಾರ) ನೆರವೇರಲಿದೆ. ಕಂಠೀರವ ಸ್ಟುಡಿಯೋನಲ್ಲಿರುವ ಡಾ.ರಾಜ್ ಹಾಗೂ ಪಾರ್ವತಮ್ಮ ರಾಜ್​ಕುಮಾರ್​ ಸಮಾಧಿ ಪಕ್ಕದಲ್ಲೇ ಅಪ್ಪುವಿನ ಅಂತ್ಯಕ್ರಿಯೆ ನಡೆಯಲಿದೆ.

 ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ(Basavaraj Bommai).. ಈಗಷ್ಟೇ ನಾನು ರಾಘಣ್ಣ ಹಾಗೂ ಶಿವರಾಜ್​ಕುಮಾರ್​ ಜೊತೆ ಮಾತನಾಡಿದೆ. ಪುನೀತ್​ ಅವರ ಅಭಿಮಾನಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ(ಅ.31) ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ ಅಂತಾ ಮಾಹಿತಿ ನೀಡಿದರು.

ಅಂತ್ಯಕ್ರಿಯೆಯಲ್ಲಿ ಕುಟುಂಸ್ಥರು ಹಾಗೂ ಗಣ್ಯರಿಗೆ ಮಾತ್ರ ಅವಕಾಶ ನಿಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿರು ಕಂಠೀರವ ಕಂಠೀರವ ಸ್ಟುಡಿಯೋಗೆ ಬರದಂತೆ ಸಿಎಂ ಮನವಿ ಮಾಡಿದ್ದಾರೆ.

 

click me!