ಅಯೋಧ್ಯ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ 12 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡ ಸರ್ಕಾರ!

By Sathish Kumar KHFirst Published Jan 27, 2024, 1:49 PM IST
Highlights

ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತನೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಕರ್ನಾಟಕ ಸರ್ಕಾರ ಕಳೆದ 8 ವರ್ಷಗಳಿಂದ 12 ಲಕ್ಷ ರೂ. ಹಣ ಪಾವತಿಸದೇ ಬಾಕಿ ಉಳಿಸಿಕೊಂಡಿದೆ.

ಮೈಸೂರು (ಜ.27): ಆಯೋಧ್ಯೆಯ ರಾಮ ಮಂದಿರಲ್ಲಿ ಪ್ರತಿಷ್ಠಾಪನೆಗೊಂಡ ಜಗಮೆಚ್ಚಿದ ರಾಮಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡಿದ ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರಿಗೆ ಕಳೆದ ಎಂಟು ವರ್ಷಗಳಿಂದ ಕರ್ನಾಟಕ ಸರ್ಕಾರವು 12 ಲಕ್ಷ ರೂ. ಹಣವನ್ನು ನೀಡದೇ ಬಾಕಿ ಉಳಿಸಿಕೊಂಡಿದೆ. 

ಹೌದು, ಅರುಣ್ ಯೋಗಿರಾಜ್ ಅವರು ರಾಮನ ವಿಗ್ರಹ ಕೆತ್ತನೆಯ ಮೂಲಕ ವಿಶ್ವಶ್ರೇಷ್ಠ ಶಿಲ್ಪಿಗಳ ಸಾಲಿನಲ್ಲಿ ಒಬ್ಬರಾಗಿ ನಿಂತಿದ್ದಾರೆ. ಅವರ ಈ ಸಾಧನೆಗೆ ಇಡೀ ಜಗತ್ತೇ ತಲೆ ಬಾಗುತ್ತಿದೆ. ಇನ್ನು ಅರುಣ್ ಯೋಗಿರಾಜ್ ಅವರು ಯಾವುದೇ ಮೂರ್ತಿ ಕೆತ್ತನೆ ಮಾಡಿ ಕೊಡುತ್ತೇವೆಂದರೆ ಲಕ್ಷಾಂತರ ರೂ. ಹಣವನ್ನು ಕೊಡುವವರು ಸಾಕಷ್ಟು ಜನರಿದ್ದಾರೆ. ಆದರೆ, ದೀಪದ ಕೆಳಗೆ ಕತ್ತಲೆಂಬಂತೆ ಮೈಸೂರಿನಲ್ಲಿಯೇ ಶ್ರೇಷ್ಠ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಸೂಕ್ತ ಗೌರವ ಕೊಡದೇ ಸರ್ಕಾರ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದೇ ಘಟನೆ ಸಾಕ್ಷಿಯಾಗಿದೆ.

ಮೂರ್ತಿ ಕೆತ್ತನೆ ವೇಳೆ ರಾಮಲಲ್ಲಾನ ನೋಡಲು ದಿನವೂ ಬರುತ್ತಿದ್ದ ಹನುಮ: ಶಿಲ್ಪಿ ಅರುಣ್ ಯೋಗಿರಾಜ್

12 ಲಕ್ಷ ರೂ. ಬಾಕಿ ಘಟನೆಯ ವಿವರ ಇಲ್ಲಿದೆ ನೋಡಿ:  ಮೈಸೂರಿನ ಅರುಣ್ ಯೋಗಿರಾಜ್ ಅವರು 2016 ರಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ಥಳಿಯನ್ನು ಕೆತ್ತಿದ್ದರು. ಆದರೆ, ಈ ಮೂರ್ತಿ ಕತ್ತನೆಯಾಗಿ ಹಾಗೂ ಪ್ರತೊಷ್ಠಾಪನೆಗೊಂಡು 8 ವರ್ಷಗಳು ಕಳೆದರೂ ಸಹ, ಇವರಿಗೆ ಸರ್ಕಾರದಿಂದ ಇನ್ನೂ ಹಣವನ್ನೇ ಕೊಟ್ಟಿಲ್ಲ. ಅರುಣ್ ಯೋಗಿರಾಜ್ ಅವರಿಗೆ ಮೂರ್ತಿ ಕೆತ್ತನೆ ಮಾಡಿಕೊಡುಂತೆ ಸ್ವತಃ ಮೈಸೂರು ಮಹಾನಗರ ಪಾಲಿಕೆಯಿಂದ ಆದೇಶ ಕೊಡಲಾಗಿತ್ತು. ಆದರೆ, ಮೂರ್ತಿ ಕೆತ್ತನೆಯಾಗಿ ಪ್ರತಿಷ್ಠಾಪನೆಗೊಂಡ ನಂತರ ಇವರ ಕಾರ್ಯವನ್ನೇ ಮರೆತಿದೆ. ಬರೋಬ್ಬರಿ 8 ವರ್ಷಗಳಾದರೂ ಅರುಣ್ ಅವರಿಗೆ ಹಣ ಕೊಡದೆ ಸತಾಯಿಸುತ್ತಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, 'ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ಥಳಿಯನ್ನು ಅರುಣ್ ಯೋಗಿರಾಜ್ ಅವರು 2016 ರಲ್ಲೇ ಕೆತ್ತಿದ್ದರು. 8 ವರ್ಷಗಳು ಆದರೂ ಸಹ, ಮೈಸೂರು ಮಹಾನಗರ ಪಾಲಿಕೆಯವರು ಇವರಿಗೆ ಹಣ ಕೊಡದೆ ಸತಾಯಿಸುತ್ತಿರುವುದು ತರವಲ್ಲ. ಇದು ಒಬ್ಬ ಶಿಲ್ಪಿಗೆ ಅಲ್ಲದೆ, ಮೈಸೂರನ್ನು ಬೆಳಗಿದ ಯದುವಂಶದ ಅರಸರಿಗೆ ಮಾಡುವ ಅವಮಾನ. ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇದೆ ಜಿಲ್ಲೆಯವರೇ ಆದ ಸನ್ಮಾನ್ಯ ಮುಖ್ಯ ಮಂತ್ರಿಗಳು ಕೂಡಲೇ ಅರುಣ್ ಯೋಗಿರಾಜರಿಗೆ ಕೊಡಬೇಕಾದ ಮೊತ್ತವನ್ನು ಗೌರವಯುತವಾಗಿ ಹಾಗೂ ತುರ್ತಾಗಿ ಕೊಡಬೇಕು' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರಾಣಪ್ರತಿಷ್ಠಾಪನೆ ಆದ ಬಳಿಕ ಬಾಲಕರಾಮನ ಜೀವಕಳೆ ನೋಡಿ ಅಚ್ಚರಿ ಪಟ್ಟಿದ್ದ ಅರುಣ್‌ ಯೋಗಿರಾಜ್‌!

ಅಯೋಧ್ಯೆಯಲ್ಲಿ ಬಾಲಕ ರಾಮ 500 ವರ್ಷಗಳ ಬಳಿಕ ನೆಲೆಗೊಂಡಿದ್ದಾನೆ. ಈ ರಾಮಲಲ್ಲಾನ ವಿಗ್ರಹ ನೋಡಿದರೆ ಸಾಕ್ಷಾತ್‌ ರಾಮನೇ ಎದ್ದು ಬಂದಂತೆ ಕಾಣುತ್ತದೆ. ಇನ್ನು ರಾಮಲಲ್ಲಾನ ಕಣ್ಣುಗಳನ್ನು ನೋಡಿದರೆ ಮಂತ್ರಮುಗ್ಧರಾಗಿಬಿಡುತ್ತೇಬೆ. ಈ ಕಣ್ಣುಗಳ ಕೆತ್ತನೆಯ ಬಗ್ಗೆ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಮಾಹಿತಿ ಹಂಚಿಕೊಂಡಿದ್ದಾರೆ. ರಾಮಲಲ್ಲಾ ಕಣ್ಣಗಳನ್ನು ಗರ್ಭಗುಡಿಯ ಹೊರಗಡೆ ಕೆತ್ತಲಾಗಿದೆ. ಅದಕ್ಕಂತಲೇ ನೇತ್ರಮಿಲನ ಎಂಬ ಕಾರ್ಯಕ್ರಮದ ಮೂಲಕ ಮುಹೂರ್ತ ಫಿಕ್ಸ್‌ ಮಾಡಿದ್ದರು. ಇದಕ್ಕೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮಾಡಿಸಿ ಮುಖ ಕ್ಲೋಸ್‌ ಮಾಡಿದೆವು. ನಂತರ ಅವರು ಜೇನುತಪ್ಪ, ಹಳದಿ ಎಲ್ಲಾ ಹಾಕಿ ಕಣ್ಮುಚ್ಚಿ ಬಿಡುತ್ತಿದ್ದರು. ಈ ಕಣ್ಣುಗಳನ್ನು ಚಿನ್ನದ ಉಳಿ ಮತ್ತು ಬೆಳ್ಳಿ ಸುತ್ತಿಗೆಯಲ್ಲಿ ಮಾಡಿರುತ್ತೇನೆ ಎಂದು ಹೇಳಿದರು.

ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ಥಳಿಯನ್ನು ಅರುಣ್ ಯೋಗಿರಾಜ್ ಅವರು 2016 ರಲ್ಲೇ ಕೆತ್ತಿದ್ದರು. 8 ವರ್ಷಗಳು ಆದರೂ ಸಹ, ಮೈಸೂರು ಮಹಾನಗರ ಪಾಲಿಕೆಯವರು ಇವರಿಗೆ ಹಣ ಕೊಡದೆ ಸತಾಯಿಸುತ್ತಿರುವುದು ತರವಲ್ಲ. ಇದು ಒಬ್ಬ ಶಿಲ್ಪಿಗೆ ಅಲ್ಲದೆ, ಮೈಸೂರನ್ನು ಬೆಳಗಿದ ಯದುವಂಶದ ಅರಸರಿಗೆ ಮಾಡುವ ಅವಮಾನ pic.twitter.com/siC5Ai8MCY

— Basanagouda R Patil (Yatnal) (@BasanagoudaBJP)
click me!