ಬಿಟ್ ಕಾಯಿನ್ ಹಗರಣ: ಇನ್ನಷ್ಟು ಜನರು ವಶಕ್ಕೆ, ಆರೋಪಿತ ಪೊಲೀಸ್ ಸಂಪರ್ಕಿತರಿಗೆ ಎಸ್‌ಐಟಿ ಗ್ರಿಲ್

By Kannadaprabha NewsFirst Published Jan 27, 2024, 7:33 AM IST
Highlights

ಪ್ರಕರಣದ ತನಿಖೆ ಸರಿಯಾದ ಮಾರ್ಗದಲ್ಲಿ ಸಾಗಿದೆ. ಆದರೆ ಹೊಸದಾಗಿ ಯಾರನ್ನು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ ಎಸ್‌ಐಟಿ ಮುಖ್ಯಸ್ಥ ಮನೀಷ್ ಕರ್ಬೀಕರ್ 

ಬೆಂಗಳೂರು(ಜ.27):  ಬಿಟ್ ಕಾಯಿನ್ ಹಗರಣ ಸಂಬಂಧ ತನಿಖೆ ಚುರುಕುಗೊಳಿಸಿ ರುವ ಎಸ್‌ಐಟಿ, ಮತ್ತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ಕೃತ್ಯದ ರೂವಾರಿ ಎನ್ನಲಾದ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಪ್ರಕರಣದಲ್ಲಿ ಸಿಲುಕಿರುವ ಆರೋಪಿತ ಪೊಲೀಸ್ ಅಧಿಕಾರಿಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಎಸ್‌ಐಟಿ ಗ್ರಿಲ್ ಮಾಡಿದೆ ಎನ್ನಲಾಗಿದೆ. ಅಲ್ಲದೆ ಪ್ರಕರಣದಲ್ಲಿ ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು ಬಂಧನ ಬಳಿಕ ತಲೆಮರೆಸಿಕೊಂಡಿರುವ ಇನ್ನುಳಿದ ಮೂವರು ಪೊಲೀಸ್ ಅಧಿಕಾರಿಗಳಿಗೆ ಎಸ್‌ಐಟಿ ತೀವ್ರ ಶೋಧ ನಡೆಸಿದೆ.

ಈ ಸಂಬಂಧ 'ಕನ್ನಡಪ್ರಭ'ಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಎಸ್‌ಐಟಿ ಮುಖ್ಯಸ್ಥ ಮನೀಷ್ ಕರ್ಬೀಕರ್ ಅವರು, ಪ್ರಕರಣದ ತನಿಖೆ ಸರಿಯಾದ ಮಾರ್ಗದಲ್ಲಿ ಸಾಗಿದೆ. ಆದರೆ ಹೊಸದಾಗಿ ಯಾರನ್ನು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Latest Videos

Bitcoin case: ಬಿಟ್ ಕಾಯಿನ್ ಹಗರಣದಲ್ಲಿ ಭಾರೀ ಬೆಳವಣಿಗೆ: ಎಸ್ಐಟಿ ತಂಡದಿಂದ ಇಬ್ಬರು ಇನ್‌ಸ್ಪೆಕ್ಟರ್‌ಗಳು ವಶಕ್ಕೆ !

ಜಾಮೀನು ಕೋರಿ ಅರ್ಜಿ ಸಾಧ್ಯತೆ: ಬಿಟ್ ಕಾಯಿನ್ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಸೋಮವಾರ ನ್ಯಾಯಾಲಯಕ್ಕೆ ಆರೋಪಿತ ಮೂವರು ಪೊಲೀಸರು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಅಷ್ಟರಲ್ಲಿ ಆ ಮೂವರನ್ನು ಬಂಧಿಸಲು ಸಹ ಎಸ್‌ಐಟಿ ಕಾರ್ಯಾಚರಣೆ ನಡೆಸಿದೆ.

click me!