
ಮಂಡ್ಯ (ಜ.27): ತಾನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸಂಬಂಧಿ ಹೇಳಿಕೊಂಡು ಟೋಲ್ ಕೇಳಿದ ಮಹಿಳಾ ಸಿಬ್ಬಂದಿ ಮೇಲೆ ಪ್ರಭಾವಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಪ್ಲಾಜಾದಲ್ಲಿ ನಡೆದಿದೆ.
ಟೋಲ್ ಕಟ್ಟಿ ಮುಂದೆ ಹೋಗುವಂತೆ ತಿಳಿಸಿದ ಮಹಿಳಾ ಸಿಬ್ಬಂದಿ. ಈ ವೇಳೆ ಟೋಲ್ ಕಟ್ಟಲು ನಿರಾಕರಿಸಿರುವ ಪ್ರಭಾವಿ ವ್ಯಕ್ತಿ. ಎಲ್ಲರೂ ಟೋಲ್ ಕಟ್ಟಬೇಕು ಎಂದು ತಿಳಿಸಿರುವ ಟೋಲ್ ಸಿಬ್ಬಂದಿ ಸುಜಾತ. ಈ ವೇಳೆ ಕಾರಿನಿಂದ ಕೆಳಗೆ ಇಳಿದು ಬಂದಿರೋ ಪುಢಾರಿ ಮಹಿಳೆ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ ನಾನು ಡಿಕೆ ಶಿವಕುಮಾರ ಸಂಬಂಧಿ ಎಂದು ಅವಾಜ್ ಹಾಕಿದ್ದಾನೆ.
ವಾಹನ ಸವಾರರೇ ಎಚ್ಚರ, 1.5 ವರ್ಷದಿಂದ ಕೋಟಿ ಕೋಟಿ ಬಾಚಿದ ನಕಲಿ ಟೋಲ್ ಪ್ಲಾಜಾ!
ಮಹಿಳಾ ಸಿಬ್ಬಂದಿ ಮೇಲೆ ನಡೆಸಿದ ದೃಶ್ಯ ಸಿಸಿಟಿಟಿಯಲ್ಲಿ ಸೆರೆಯಾಗಿದೆ. ವಿಡಿಯೋ ಸಾಕ್ಷಿಯೊಂದಿಗೆ ಪ್ರಭಾವಿ ವ್ಯಕ್ತಿಯ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿರುವ ಪೊಲೀಸರು.
ರಾಜಕಾರಣಿಗಳು ಗಣ್ಯರು ಹೆಸರೇಳಿಕೊಂಡು ಟೋಲ್ ಸಿಬ್ಬಂದಿ ಮೇಲೆ ಅವಾಜ್ ಹಾಕುವುದು, ಹಲ್ಲೆ ಮಾಡುವಂತಹ ಘಟನೆಗಳು ಹೆಚ್ಚುತ್ತಿವೆ. ಇತ್ತೀಚೆಗೆ ವ್ಯಕ್ತಿಯೊಬ್ಬ ನಾನು ಪೊಲೀಸ್ ಇಲಾಖೆಯಲ್ಲಿದ್ದೇನೆಂದು ಹೇಳಿಕೊಂಡು ಟೋಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದರು. ರಾಜಕಾರಣಿ, ಮಂತ್ರಿಗಳ ಮಕ್ಕಳು, ಸಬ್ಬಂದಿಗಳಿಗೆ ಟೋಲ್‌ನಿಂದ ವಿನಾಯತಿ ಇದೆಯೇ? ಪ್ರತಿಯೊಬ್ಬರು ಟೋಲ್ ಕಟ್ಟಬೇಕಲ್ಲವೇ?
ಬಳ್ಳಾರಿ: ರಾತ್ರೋ ರಾತ್ರಿ ಟೋಲ್ ಗೇಟ್ ನಿರ್ಮಾಣ, ಗ್ಯಾರಂಟಿ ಹಣ ಸರಿದೂಗಿಸಲು ಸರ್ಕಾರದ ಪ್ಲಾನ್?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ