ಅನ್ಯ ರಾಜ್ಯದ ಕಾರ್ಮಿಕರು ತೆರಳುವುದಕ್ಕೆ ಬ್ರೇಕ್, ಬಿಬಿಎಂಪಿ ವಿಚಾರದಲ್ಲಿಯೂ ಒಂದು ಸುದ್ದಿ ಇದೆ

By Suvarna NewsFirst Published May 4, 2020, 10:24 PM IST
Highlights

ವಲಸೆ ಕಾರ್ಮಿಕರು ಊರಿಗೆ ತೆರಳಲು ವ್ಯವಸ್ಥೆ/ ಸಚಿವ ಆರ್.ಅಶೋಕ ಹೇಳಿಕೆ/ ಯಾವ ರಾಜ್ಯದ ಕಾರ್ಮಿಕರು ಎಷ್ಟಿದ್ದಾರೆ ಎಂಬ ಸ್ಪಷ್ಟನೆ ಸಿಕ್ಕಿಲ್ಲ/ ಬಿಬಿಎಂಪಿ ವಲಯದ ಎಲ್ಲ ಕಾಮಗಾರಿಗೆ ಚಾಲನೆ

ಬೆಂಗಳೂರು(ಮೇ 04)  ಎಲ್ಲ‌ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದಾರೆ.  ಆದರೆ ಯಾವ ರಾಜ್ಯದ ಕಾರ್ಮಿಕರು ಎಂಬ ಸ್ಪಷ್ಟನೆ ಸಿಕ್ಕಿಲ್ಲ.  ಹೀಗಾಗಿ ಅಲ್ಲಿಂದ ಸ್ಪಷ್ಟನೆ ಬಂದ ತಕ್ಷಣ ನಾವು ಕಾರ್ಮಿಕರನ್ನು ಕಳುಹಿಸುವ ವ್ಯವಸ್ಥೆ ಮಾಡ್ತೇವೆ. ಸದ್ಯಕ್ಕೆ ಅನ್ಯ ರಾಜ್ಯದ ಕಾರ್ಮಿಕರು ತೆರಳುವುದನ್ನು ತಡೆ ಹಿಡಿಯಲಾಗಿದೆ ಎಂದು  ಸಚಿವ ಆರ್. ಅಶೋಕ ಹೇಳಿದ್ದಾರೆ.

ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್, ಮದ್ಯ ಪ್ರಿಯರ ಕೊಡುಗೆ

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿನ ಸಭೆ ನಂತರ ಮಾತನಾಡಿ,  ನಾಳೆಯಿಂದ ಬಿಬಿಎಂಪಿ ವಲಯದಲ್ಲಿ ಇರುವ ಎಲ್ಲ ಕಾಮಗಾರಿಗಳನ್ನು ಶುರು ಮಾಡಲು ಸೂಚನೆ ನೀಡಿದ್ದೇವೆ.. ತುಮಕೂರು ರಸ್ತೆಯ ಮೈದಾನದಲ್ಲಿ ಇರುವ ಎಲ್ಲ ಕಾರ್ಮಿಕರನ್ನ ವಾಪಸ್ ಕಳುಹಿಸುವ ಪ್ರಯತ್ನ ಮಾಡುತ್ತೇವೆ.  ಯಾರಿಗೆ ಇನ್ನೂ ಟಿಕೆಟ್ ಬುಕ್ ಆಗಿಲ್ಲ ಅವರನ್ನು ವಾಪಸ್ ಬೆಂಗಳೂರಿಗೆ ಕರೆಸುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು. 

ಕಾರ್ಮಿಕರನ್ನು ಊರಿಗೆ ಕಳಿಸುವ ವಿಚಾರ ದೊಡ್ಡ ಸುದ್ದಿಯಾಗಿತ್ತು. ಹಣ ಮತ್ತು ಆಹಾರ ಇಲ್ಲದೇ ಬೆಂಗಳೂರಿನಿಂದ ಕಾರ್ಮಿಕರು ತೆರಳಲು ಪರದಾಟ ಮಾಡುತ್ತಿದ್ದರು. ಸುವರ್ಣ ನ್ಯೂಸ್ ವರದಿ ನಂತರ ಎಚ್ಚೆತ್ತ ಸರ್ಕಾರ ಮಾರ್ಮಿಕರನ್ನು ಉಚಿತವಾಗಿ ಊರಿಗೆ ಕಳಿಸುವ ವ್ಯವಸ್ಥೆ ಮಾಡಿತ್ತು. 

 

click me!