ಇಂದಿನಿಂದ ಮದ್ಯ ಮಾರಾಟ ರಾಜ್ಯದ್ಯಂತ ಆರಂಭವಾಗಿದೆ. ಕೊರೋನಾ ವೈರಸ್‌ಗೆ ಅಂಜದೆ ಸರತಿ ಸಾಲಿನಲ್ಲಿ ನಿಂತು ಎಣ್ಣೆ ಖರೀದಿಸುತ್ತಿದ್ದಾರೆ ಮದ್ಯ ಪ್ರಿಯರು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಮೇ.04): ಲಾಕ್‌ಡೌನ್‌ನಿಂದಾಗಿ ಎಣ್ಣೆ ಸಿಗದೆ ಒಂದು ತಿಂಗಳಿನಿಂದ ಕಂಗಾಲಾಗಿದ್ದ ಕುಡುಕರು ಇಂದು ಕೊನೆಗೂ ಎಣ್ಣೆ ಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ. ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಚ್ 24ರಿಂದಲೇ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಎಣ್ಣೆ ಅಂಗಡಿಗಳು ಬಾಗಿಲು ಹಾಕಿಕೊಂಡಿದ್ದವು.
ಇಂದಿನಿಂದ ರಾಜ್ಯಾದ್ಯಂತ ಮೂರನೇ ಹಂತದ ಲಾಕ್‌ಡೌನ್ ಜಾರಿಯಾಗಿದೆ. ಇದರ ಬೆನ್ನಲ್ಲೇ ಲಾಕ್‌ಡೌನ್‌ಗೆ ಕೆಲ ವಿನಾಯ್ತಿಗಳನ್ನು ನೀಡಲಾಗಿದೆ. 41 ದಿನಗಳ ಬಳಿಕ ಮದ್ಯ ಮಾರಾಟ ಆರಂಭವಾಗಿದೆ. ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಆದೇಶ ನೀಡಲಾಗಿದೆ. ಈಗಾಗಲೇ ಜನರು ಕ್ಯೂ ನಿಂತು ಎಣ್ಣೆ ಖರೀದಿಸುತ್ತಿದ್ದಾರೆ.
undefined
ಹಲವೆಡೆ ಕುಡುಕರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಈಗಾಗಲೇ ಹಲವು ಮಂದಿ ತಮ್ಮ ಸ್ಥಾನಗಳನ್ನು ಭದ್ರಮಾಡಿಕೊಂಡಿದ್ದಾರೆ. ಎಣ್ಣೆ ಖರೀದಿಯ ಭರಾಟೆಯ ನಡುವೆಯೂ ಶಿಸ್ತು ಕಾಯ್ದುಕೊಳ್ಳುವಲ್ಲಿ ಕುಡುಕರು ತಮ್ಮ ಬದ್ಧತೆ ಮೆರೆದಿದ್ದಾರೆ.
ಬೆಂಗಳೂರಿನಲ್ಲಿ ಎಣ್ಣೆ ಮಾರಾಟ ಹೀಗಿದೆ ನೋಡಿ:
ಮಂಡ್ಯದ ಗ್ರೌಂಡ್ ರಿಪೋರ್ಟ್:
ಬೀದರ್‌ನಲ್ಲಿ ಕಿಕ್ ಬಲು ಜೋರು
ಬಿಸಿಲಿಗೂ ಕ್ಯಾರೇ ಎನ್ನದ ಚಿತ್ರದುರ್ಗ ಮಂದಿ
ರೆಡ್ ಝೋನ್ ಮೈಸೂರಲ್ಲೂ ಮದ್ಯ ಖರೀದಿಸಲು ಭರ್ಜರಿ ಕ್ಯೂ
ಯಾರಿಗೂ ಕಮ್ಮಿಯಿಲ್ಲ ಮಂಗಳೂರು ಖದರ್