ಕಾಂಗ್ರೆಸ್ ಸರ್ಕಾರದ್ದು ಕಳಪೆ ಬೀಜ; ನಮ್ಮ ತೊಗರಿ ಬೆಳೆ ಕಾಯಿ ಬಿಡ್ತಿಲ್ಲ ಸ್ವಾಮೀ ಎಂದ ರೈತ!

By Sathish Kumar KH  |  First Published Dec 6, 2024, 1:42 PM IST

ರಾಜ್ಯ ಸರ್ಕಾರ ವಿತರಿಸಿದ ತೊಗರಿ ಬಿತ್ತನೆ ಬೀಜ ಕಳಪೆಯಾಗಿದ್ದು, ವಿಜಯಪುರ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಆಳೆತ್ತರಕ್ಕೆ ಬೆಳೆದ ತೊಗರಿ ಗಿಡದಲ್ಲಿ ಕಾಯಿಗಳೇ ಬಿಡುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಕೃಷಿ ಅಧಿಕಾರಿಗಳು ಬೀಜದ ಕಂಪನಿಗಳೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.


ವಿಜಯಪುರ (ಡಿ.06): ರಾಜ್ಯ ಸರ್ಕಾರದಿಂದ ವಿತರಣೆ ಮಾಡಿದ ತೊಗರಿ ಬಿತ್ತನೆ ಬೀಜದಲ್ಲಿ ಭಾರೀ ಗೋಲ್ಮಾಲ್ ನಡೆದಿದೆ. ಸರ್ಕಾರದಿಂದ ತೊಗರಿ ಬೀಜ ಪಡೆದ ರೈತರು ಈಗ ಕಂಗಾಲಾಗಿದ್ದಾರೆ. ಸರ್ಕಾರದಿಂದ ಸಬ್ಸಿಡಿ ದರದಲ್ಲಿ ವಿತರಣೆ ಮಾಡಲಾದ GRG 152, 811 ತೊಗರೆ ಬೀಜಗಳು ಕಳಪೆಯಾಗಿದ್ದು, ಆಳೆತ್ತರಕ್ಕೆ ಬೆಳೆದ ತೊಗರಿ ಗಿಡದಲ್ಲಿ ಕಾಯಿಗಳೇ ಬಿಡುತ್ತಿಲ್ಲ ಎಂದು ರೈತರು ಅವಲತ್ತುಕೊಂಡಿದ್ದಾರೆ.

ಹೌದು, ರೈತರಿಗೆ ಕಳಪೆ‌ ಬೀಜ ವಿತರಿಸಿ ಸರ್ಕಾರದಿಂದಲೇ ಅನ್ನದಾತರಿಗೆ ಮಹಾಮೋಸ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾದ ತೊಗರಿ ಬೀಜಗಳು ಕಳಪೆ ಆಗಿವೆ ಎಂಬುದು ಇದೀಗ ಬಹಿರಂಗವಾಗಿದೆ. ಸರ್ಕಾರದಿಂದ ವಿಜಯಪುರ ಜಿಲ್ಲೆಯ ರೈತ ಸಂಪರ್ಕ ಕೇಂದ್ರದಿಂದ GRG 152, 811 ತೊಗರಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿತ್ತು. ಆದರೆ, ಈ ಬೀಜ ಬಿತ್ತನೆ ಮಾಡಿದ ರೈತರ ತೊಗರಿ ಬೆಳೆಗಳು ಉತ್ತಮ ಮಳೆಯಿಂದಾಗಿ ಆಳೆತ್ತರಕ್ಕೆ ಬೆಳೆದು ನಿಂತಿವೆ. ಆದರೆ, ಇದೀಗ ರೈತರಿಗೆ ಆದಾಯ ತಂದುಕೊಡುವ ತೊಗರಿ ಕಾಯಿಯೇ ಬಿಡುತ್ತಿಲ್ಲ ಎಂಬುದು ರೈತರ ಅಳಲು ಆಗಿದೆ.

Tap to resize

Latest Videos

ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು: ಸಾವಿನ ಸಂಖ್ಯೆ 5ಕ್ಕೇರಿಕೆ

ನಮ್ಮ ಕರ್ನಾಟಕ ರಾಜ್ಯದಲ್ಲಿ ಕಲಬುರಗಿ ಬಿಟ್ಟರೆ ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆ ವಿಜಯಪುರ. ವಿಜಯಪುರದಲ್ಲಿ ಒಟ್ಟು 469 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ‌ ತೊಗರಿ ಬಿತ್ತನೆ ಮಾಡಲಾಗಿದೆ. ಆಳೆತ್ತರಕ್ಕೆ ಬೆಳೆದಿರುವ ತೊಗರಿ ಗಿಡಿದಲ್ಲಿ ಕಾಯಿಯೇ ಇಲ್ಲ. ಏಷ್ಯಾನೆಟ್ ಸುವರ್ಣ ನ್ಯೂಸ್ ಮೂಲಕ ರೈತರ ಜಮೀನುಗಳಲ್ಲಿ ರಿಯಾಲಿಟಿ ಚೆಕ್ ಮಾಡಲಾಗಿದ್ದು, ಜಿಲ್ಲೆ ಮುದ್ದೇಬಿಹಾಳ, ತಾಳಿಕೋಟೆ, ಬಸವನ ಬಾಗೇವಾಡಿ, ದೇವರಹಿಪ್ಪರಗಿ ಸೇರಿ‌ ವಿಜಯಪುರ ತಾಲೂಕುಗಳಲ್ಲಿ ತೊಗರೆ ಬೆಳೆದು ರೈತರು ಕಂಗಾಲಾಗಿರುವ ಘಟನೆ ಬಹಿರಂಗವಾಗಿದೆ.

ಈ ವರ್ಷ ಉತ್ತಮ ಮಳೆ ಆಗಿದ್ದರಿಂದ ತೊಗರಿ ಗಿಡಗಳು ಭಾರೀ ಎತ್ತರಕ್ಕೆ ಬೆಳೆದಿದ್ದು, ಉತ್ತಮ ಇಳುವರಿ ಬರುತ್ತದೆ ಎಂದು ರೈತರು ಸಂತಗೊಂಡಿದ್ದರು. ಆದರೆ, ಇದೀಗ ತೊಗರಿ ಬೆಳೆ ಕಟಾವಿಗೆ ಬರುವ ಸಮಯವಾದರೂ ಇನ್ನೂ ತೊಗರಿ ಕಾಯಿಯೇ ಬಿಟ್ಟಿಲ್ಲ. ತೊಗರಿ ಗಿಡದ ಪ್ರತಿ ಗೊನೆಯಲ್ಲಿಯೂ ಕನಿಷ್ಠ 40 ರಿಂದ ಗರಿಷ್ಠ 50 ಕಾಯಿಗಳು ಇರಬೇಕಿತ್ತು. ಆದರೆ, ಸರ್ಕಾರ ವಿತರಣೆ ಮಾಡಿದ ಸಬ್ಸಿಡಿ ದರದ ತೊಗರಿ ಬೀಜದಿಂದ ಬೆಳೆದ ತೊಗರಿ ಗಿಡದ ಗೊನೆಯಲ್ಲಿ ಕೇವಲ 2-3 ಕಾಯಿಗಳು ಮಾತ್ರ ಬಿಟ್ಟಿವೆ ಎಂದು ರೈತರು ನೋವು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪುಷ್ಪ-2 ಸಿನಿಮಾ ಗಲ್ಲಾ ಪೆಟ್ಟಿಗೆಗೆ ಮೊದಲ ದಿನವೇ ₹18 ಕೋಟಿ ಹಾಕಿದ ಕನ್ನಡಿಗರು!

ತೊಗರಿ ಬೆಳೆ ಪ್ರತಿ ಏಕರೆಗೆ 10 ರಿಂದ 13 ಚೀಲ ಇಳುವರಿ ಬರೋ ಜಾಗದಲ್ಲಿ ಕೇವಲ 1 ರಿಂದ2 ಚೀಲ ಇಳುವರಿ ಬರುತ್ತಿದೆ. ಸರ್ಕಾರದಿಂದ ವಿತರಣೆ ಮಾಡಲಾದ ಸಬ್ಸಿಡಿ ದರದ ಬೀಜವನ್ನು ಪಡೆದ ರೈತರು ಕಂಗಾಲಾಗಿ ಹೋಗಿದ್ದಾರೆ. ಸರ್ಕಾರ ಮಟ್ಟದಲ್ಲಿ ಬೀಜ ಕಂಪನಿಗಳಿಂದ ಒಡಂಬಡಿಕೆ ಮಾಡಲಾಗಿದ್ದು, ಕಂಪನಿಗಳು ಕಳಪೆ ಬೀಜ ವಿತರಣೆ ಮಾಡಿವೆ. ಇಲ್ಲಿ ಕೃಷಿ ಅಧಿಕಾರಿಗಳು ಬೀಜದ ಕಂಪನಿಗಳೊಂದಿಗೆ ಶಾಮೀಲಾಗಿ ಬೀಜದ ಗುಣಮಟ್ಟ ಪರಿಶೀಲನೆ ಮಾಡದೇ ರೈತರಿಗೆ ವಿತರಣೆ ಮಾಡಲು ಅನುಮತಿ ನೀಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!