ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ಬೆಂಕಿ ಪ್ರಕರಣ! ಬಂಡೀಪುರ ಪ್ರಭಾರ ಅರಣ್ಯ ಸಂರಕ್ಷಣಾಧಿಕಾರಿದ್ದ ಅಂಬಾಡಿ ಮಾಧವನ್ ಗೆ ಕೊಕ್! ಟಿ.ಬಾಲಚಂದ್ರ ನೂತನ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕ.
ಬೆಂಗಳೂರು, (ಫೆ.26): ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೆಂಕಿ ತಗುಲಿ ಅರಣ್ಯ ನಾಶವಾಗಿದೆ. ಇದ್ರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹೊಸ ಅಧಿಕಾರಿಯನ್ನು ನೇಮಿಸಿದೆ.
ಬಂಡೀಪುರದ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಟಿ.ಬಾಲಚಂದ್ರ ಅವರನ್ನ ನೇಮಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಕೆ.ನಾಗವೇಣಿ ಆದೇಶ ಹೊರಡಿಸಿದ್ದಾರೆ.
ಬಂಡೀಪುರ ರೋದನೆ: ಇದು ಕಾಡ್ಗಿಚ್ಚು ಅಲ್ಲ? ಫೋಟೋದಲ್ಲಿ ಬಯಲಾಯ್ತು ಕರಾಳ ಸತ್ಯ
ಕಳೆದ ನಾಲ್ಕಾರು ದಿನಗಳಿಂದ ಬಂಡೀಪುರದಲ್ಲಿ ಕಾಡ್ಗಿಚ್ಚು ಉಂಟಾಗಿ ಅರಣ್ಯ ಹೊತ್ತಿ ಉರಿಯುತ್ತಿದೆ. ಆದ್ರೆ ಇದರ ನಿರ್ವಹಣೆಗೆ ಪೂರ್ಣ ಪ್ರಮಾಣದ ಅರಣ್ಯ ಸಂರಕ್ಷಣಾಧಿಕಾರಿ ಇಲ್ಲ. ತಾತ್ಕಾಲಿಕವಾಗಿ ಅಂಬಾಡಿ ಮಾಧವನ್ ಅವರು ಕಾರ್ಯನಿರ್ವಹಿಸುತ್ತಿದ್ದರು.
ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣ ಅರಣ್ಯ ನಾಶವಾಗಿದ್ದು, ಸೇನಾ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.