ಪುಲ್ವಾಮಾ ಪ್ರತೀಕಾರ : ಸಿಹಿ ಹಂಚಿ ಸಂಭ್ರಮಿಸಿದ ಹುಬ್ಬಳ್ಳಿ-ಧಾರವಾಡದ ಜನ

By Web Desk  |  First Published Feb 26, 2019, 2:13 PM IST

ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದೆ. ಈ ದಾಳಿಯ ಯಶಸ್ಸಿಗೆ ವಿವಿಧೆಡೆ ಜನರು ಸಿಹಿ ಹಂಚಿ ಸಂಭ್ರಮವನ್ನಾಚರಿಸುತ್ತಿದ್ದಾರೆ. 


ಹುಬ್ಬಳ್ಳಿ  :  ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ  ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿರುವುದನ್ನು ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಆಚರಿಸಲಾಗಿದೆ. 

ಇಲ್ಲಿನ ದುರ್ಗದ ಬೈಲ್ ವ್ಯಾಪಾರಸ್ಥರು ಸಿಹಿ ಹಂಚಿ, ಪಟಾಕಿ ಸಿಡಿಸಿ IAF ನಡೆಸಿದ ಈ ದಾಳಿಗೆ ವಿಜಯಯೋತ್ಸವ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.

Tap to resize

Latest Videos

ಹೀಗಿತ್ತು ಜೋಷ್: ದಾಳಿಗೆ ಹೊರಟಾಗ ಎಲ್ಲಿದ್ರು ಪ್ರಧಾನಿ ಮೋದಿ?

ಫೆಬ್ರವರಿ 14ರಂದು ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ 44 ಯೋಧರು ಹುತಾತ್ಮರಾದರು. ದಾಳಿ ನಡೆಸಿದ ಜೈಶ್ ಇ ಮೊಹಮ್ಮದ್​ ಸಂಘಟನೆಯನ್ನು ಪಾಕಿಸ್ತಾನ ಪೋಷಿಸುತ್ತಿದೆ.  ಆದರೆ ಈ ವಿಚಾರವನ್ನು ಪಾಕ್​ ತಳ್ಳಿಹಾಕುತ್ತಿದೆ. ಆದ್ದರಿಂದ ಪಾಕ್ ಇದಕ್ಕೆ ಉತ್ತರ ನೀಡಬೇಕಿದೆ ಎಂದರು. 

ಪಾಕ್​ ಹಾಗೂ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ  ತರಬೇತಿ ನೀಡಲಾಗುತ್ತಿದೆ ಎಂದು ಸಂಘಟನಾಕಾರರು ಆರೋಪಿಸಿದರು.

ವಾಯುಪಡೆಯ ನಮ್ಮೀ ಹೀರೋ: ಸಪ್ತ ಸಾಮರ್ಥ್ಯಗಳ 'ಮಿರಾಜ್ 2000'!

ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಸೇನೆ ಪಾಕ್​ ಗಡಿಯೊಳಗಿನ ಬಾಲಕೋಟ್​ನಲ್ಲಿ ಉಗ್ರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. 

300  ಉಗ್ರರನ್ನು  ಹೊಡೆದರುಳಿಸಿದೆ. ಈ ಉಗ್ರರು ಪುಲ್ವಾಮದಂತಹ ಮತ್ತೊಂದು ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದರಿಂದ ಭಾರತ ಇಂತಹ  ದಿಟ್ಟ ನಿರ್ಧಾರ ಕೈಗೊಂಡಿರುವುದು  ಸಂತಸದ ವಿಚಾರ ಎಂದು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇತ್ತ ಧಾರವಾಡದಲ್ಲಿಯೂ ಕೂಡ  ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಏರ್‌ಸ್ಟ್ರೈಕ್‌ ಯಶಸ್ವಿಯಾಗಿರುವುದಕ್ಕೆ ಸಿಹಿ ವಿತರಿಸಿ ಸಂಭ್ರಮಿಸಲಾಗಿದೆ. 

click me!