ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಿಸಿದ ಸರ್ಕಾರ!

By Sathish Kumar KH  |  First Published Dec 1, 2024, 4:53 PM IST

ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆಗೆ ಡಿಸೆಂಬರ್ 30ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ. 1.45 ಕೋಟಿ ವಾಹನಗಳಿಗೆ ಇನ್ನೂ HSRP ಅಳವಡಿಕೆ ಬಾಕಿ ಇದೆ. ಸರ್ಕಾರದಿಂದ ಜಾಗೃತಿ ಕಾರ್ಯಕ್ರಮಗಳ ಕೊರತೆ ಕಂಡುಬಂದಿದೆ.


ಬೆಂಗಳೂರು (ಡಿ.01): ದೇಶದ ಎಲ್ಲ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (High Security Registration Plate-HSRP) ಅಳವಡಿಕೆ ಮಾಡುವಂತೆ ಆದೇಶ ಹೊರಡಿಸಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಜೊತೆಗೆ, ಈಗಾಗಲೇ ನಾಲ್ಕೈದು ಬಾರಿ ಗಡುವು ವಿಸ್ತರಣೆಯನ್ನೂ ಮಾಡಲಾಗಿದೆ. ಇದೀಗ ಪುನಃ ರಾಜ್ಯ ಸರ್ಕಾರದಿಂದ ಡಿ.30ರವರೆಗೆ ಎಲ್ಲ ಕರ್ನಾಟಕದ ಎಲ್ಲ ವಾಹನ ಸವಾರರಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವಂತೆ ಗಡುವು ವಿಸ್ತರಣೆ ಮಾಡಲಾಗಿದೆ.

ಹೌದು, ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಣೆ ಮಾಡುವ ಮೂಲಕ ರಾಜ್ಯ ಸರ್ಕಾರದಿಂದ ಎಲ್ಲ ವಾಹನ ಸವಾರರಿಗೆ ಮತ್ತೆ ಬಿಗ್ ರಿಲೀಫ್ ನೀಡಿದೆ. ಇದೀಗ ರಾಜ್ಯ ಸರ್ಕಾರದಿಂದ ಮತ್ತೆ ಒಂದು ತಿಂಗಳವರೆಗೆ (ನವೆಂಬರ್ 30 ರಿಂದ ಡಿಸೆಂಬರ್ 30ರವರೆಗೆ) ಗಡುವು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದಿಂದ ಈಗಾಗಲೇ ನಾಲ್ಕೈದು ಬಾರಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆ ಮಾಡಲಾಗಿತ್ತು. ಆದರೆ, ಇನ್ನೂ ಶೇ.45ಕ್ಕೂ ಅಧಿಕ ವಾಹನ ಸವಾರರು ತಮ್ಮ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿಲ್ಲ. ಆದ್ದರಿಂದ ಪುನಃ ಗಡುವು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

Tap to resize

Latest Videos

ರಾಜ್ಯದಲ್ಲಿ ಇನ್ನೂ 1.45 ಕೋಟಿ ವಾಹನ ಸವಾರರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳವುದು ಬಾಕಿಯಿದೆ. ಹೀಗಾಗಿ, ಜನರಿಗೆ ಅನುಕೂಲ ಆಗುವಂತೆ ರಾಜ್ಯ ಸರ್ಕಾರದಿಂದ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರದ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಒಂದು ಅರ್ಜಿಯಿದ್ದು, ಅದು ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ, ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಮುಂದಕ್ಕೆ ಹಾಕುತ್ತಿದ್ದಂತೆ ಸರ್ಕಾರದಿಂದಲೂ ಗಡುವು ವಿಸ್ತರಣೆ ಮಾಡಿಕೊಂಡು ಹೋಗಲಾಗುತ್ತಿದೆ.

ಇದನ್ನೂ ಓದಿ: ವಾಹನಕ್ಕೆ HSRP ಅಳವಡಿಸಿಲ್ವಾ? ದಂಡ ತಪ್ಪಿಸಲು ಕೊನೆ ಅವಕಾಶ- ಆನ್​ಲೈನ್​ನಲ್ಲೂ ಸಲ್ಲಿಕೆ: ಡಿಟೇಲ್ಸ್ ಇಲ್ಲಿದೆ...

ಸರ್ಕಾರದಿಂದ ಜಾಗೃತಿಯಿಲ್ಲ: ರಾಜ್ಯದ ಎಲ್ಲ ವಾಹನ ಸವಾರರು ತಾವು 2019ರ ಏಪ್ರಿಲ್ 1ಕ್ಕಿಂತ ಮುಂಚೆ ಖರೀದಿ ಮಾಡಿದ ಎಲ್ಲ ವಾಹನಗಳಿಗೆ ಈ ಹೆಚ್‌ಎಸ್‌ಆರ್‌ಪಿ ಸಂಖ್ಯೆಯನ್ನು ಅಳವಡಿಕೆ ಮಾಡಿಸಬೇಕು ಎಂಬ ನಿಯಮ ಮಾಡಲಾಗಿದೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಈಗಲೂ ಗ್ರಾಮೀಣ ಜನತೆಗೆ ತಮ್ಮ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಬೇಕು ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ಇನ್ನು ಹಲವರಿಗೆ ಇದನ್ನು ಎಲ್ಲಿ ಮಾಡಬೇಕು ಎಂಬುದು ಗೊತ್ತಿಲ್ಲ. ಇನ್ನು ಕೆಲವರಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವುದು ಗೊತ್ತಾಗದೇ ಸುಮ್ಮನಿದ್ದಾರೆ. ಒಟ್ಟಾರೆ, ಸರ್ಕಾರ ಇದಕ್ಕೆ ಸೂಕ್ತ ಕಾರ್ಯಕ್ರಮ ರೂಪಿಸದೇ ಶೇ.100 ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಆಗುವುದಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!