ಬಸವಣ್ಣನವರ 'ಅನುಭವ ಮಂಟಪ' ಈಗ ವಕ್ಫ್ ಆಸ್ತಿ: ಯತ್ನಾಳ್ ಸ್ಫೋಟಕ ಹೇಳಿಕೆ!

By Ravi Janekal  |  First Published Dec 1, 2024, 4:51 PM IST

ಯಾರನ್ನೋ ಸಿಎಂ, ರಾಜ್ಯಾಧ್ಯಕ್ಷರನ್ನಾಗಿ ಮಾಡಲು ನಾವು ಇಲ್ಲಿ ಸೇರಿಲ್ಲ. ರೈತರ ಭೂಮಿ ಉಳಿಸಲು ಹೋರಾಟ ಮಾಡಲು ಸೇರಿದ್ದೇವೆ‌ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನುಡಿದರು.


ಬೆಳಗಾವಿ (ಡಿ.1): ಯಾರನ್ನೋ ಸಿಎಂ, ರಾಜ್ಯಾಧ್ಯಕ್ಷರನ್ನಾಗಿ ಮಾಡಲು ನಾವು ಇಲ್ಲಿ ಸೇರಿಲ್ಲ. ರೈತರ ಭೂಮಿ ಉಳಿಸಲು ಹೋರಾಟ ಮಾಡಲು ಸೇರಿದ್ದೇವೆ‌ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನುಡಿದರು.

ಇಂದು ಬೆಳಗಾವಿಯಲ್ಲಿ ವಕ್ಫ್ ವಿರೋಧಿ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಯತ್ನಾಳ್ ಅವರು,ಎಲ್ಲ‌ ಸಮಾಜದ ಮುಖಂಡರು ಇಲ್ಲಿ ಸೇರಿದ್ದೇವೆ. ಇದು ರಮೇಶ ಜಾರಕಿಹೊಳಿ ಅವರ ತಾಕತ್ತಿನ ಟ್ರೈಲರ್. ದಾವಣಗೆರೆಯಲ್ಲಿ ಪಿಚ್ಚರ್ ಅಭಿ ಬಾಕಿ ಹೈ. ನಾವೇಲ್ಲ ವೇದಿಕೆ ಕುಳಿತವರು ಮೂರು, ನಾಲ್ಕು ಐದು ಸಲ ಶಾಸಕರಾದವರು. ನಮ್ಮಲ್ಲಿ ಹಾಲಿ ಶಾಸಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕರ್ನಾಟಕವನ್ನು ರಾಮರಾಜ್ಯ ಮಾಡಲು ನಾವು ತೀರ್ಮಾನ ಮಾಡಿದ್ದೇವೆ ಎಂದರು.

Tap to resize

Latest Videos

ಯಾರನ್ನೋ ಅಪ್ಪಾಜಿ ಎಂದು ಕಾಲು ಬಿಳುವ ಮಕ್ಕಳು ನಾವಲ್ಲ. ಬೀದರ್ ನಲ್ಲಿ ವಕ್ಫ್ ಅದಾಲತ್ ಮಾಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶ ವಕ್ಪ್ ಗೆ ಸೇರಿದ್ದು ಅಂತ ಹೇಳಿತ್ತಾನೆ. ಇದು ಹಿಂದು ಸಮಾಜದ ಭೂಮಿ.ಹಿಂದೂಗಳ ಭೂಮಿ ಕಬಳಿಸಿ ಜಮೀರಾ ನಮಗೆ ಸೈತಾನ್ ಅಂತಾನೆ. ನಮ್ಮಲ್ಲಿಯೂ ವೀರ ನಾಯಕರ ರಕ್ತ ಹರಿಯುತ್ತಿದೆ. ನಮ್ಮನ್ನು ಸೈತಾನ್ ಅಂತಿಯಾ? ನಮ್ಮ ಅಪ್ಪನ ಅಪ್ಪನೂ ಬಸಪ್ಪನೇ ಇದ್ದ‌, ಆದರೆ ನಿಮ್ಮ ಅಪ್ಪನ ಅಪ್ಪ ಮಲ್ಲಪ್ಪ ಆಗಿದ್ದ ಅನ್ನೋದರ ಅರಿವಿರಲಿ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ಭುಗಿಲೆದ್ದ ಕಿಚ್ಚು: ಯತ್ನಾಳ್ ಉಚ್ಚಾಟನೆ ಫಿಕ್ಸ್?

ಅನುಭವ ಮಂಟಪ ವಕ್ಫ್ ಆಸ್ತಿ:

ಬಸವಣ್ಣನವರ ಅನುಭವ ಮಂಟಪವೇ ಈಗ ವಕ್ಫ್ ಜಮೀನು ಆಗಿದೆ. ಪೀರ್ ಪಾಷಾ ದರ್ಗಾ ಆಗಿದ್ದು, ಯಾರೂ ಈ ಬಗ್ಗೆ ಮಾತನಾಡ್ತಿಲ್ಲ. ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುತ್ತೇವೆ. ರಾಜ್ಯ ಅಲ್ಲ, ದೇಶಾದ್ಯಂತ ಎಲ್ಲಾ ಮಸೀದಿ ತೆಗೆದು ನೋಡಿದ್ರೆ ಅಲ್ಲಿ ದೇವಾಲಯದ ಕುರುಹುಗಳೇ ಇವೆ. ಸ್ವಂತದ್ದು ಅನ್ನೋ ಮಸೀದಿ ಎಲ್ಲಿದೆ? ಎಲ್ಲಿ ನೋಡಿದ್ರೂ ಹಿಂದೂ ದೇವಾಲಯಗಳ ಮೇಲೆ ಮಸೀದಿ ಕಟ್ಟಲಾಗಿದೆ. ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲಿಯೂ ವಕ್ಫ್ ಇಲ್ಲ. ಇದು ನೆಹರು ಮಾಡಿರುವ ಕುತಂತ್ರ. ಅಂಬೇಡ್ಕರ್‌ರನ್ನ ನೆಹರು ಯಾವ ರೀತಿ ನಡೆಸಿಕೊಂಡರು ಅನ್ನೋದು ಅಂಬೇಡ್ಕರ್ ರಾಜೀನಾಮೆ ನೀಡಿದ ಬಳಿಕ ಬರೆದ ಪತ್ರಗಳು ಓದಿದ್ರೆ ಗೊತ್ತಾಗುತ್ತದೆ. ನಾವು ವಕ್ಫ್ ಬೋರ್ಡ್ ಕಿತ್ತು ಹಾಕುವ ಕೆಲಸ ಮಾಡ್ತೀವಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಅದನ್ನೇ ಮಾಡಿಯೇ ತೀರುತ್ತೇವೆ ಎಂದರು.

ಭವಿಷ್ಯದಲ್ಲಿ ಹಿಂದೂಗಳಿಗೆ ಸಂಕಷ್ಟ:

ರಾಯಚೂರಿನಲ್ಲಿ ರೈಲ್ವೆಗೆ ರೈತರ ಜಮೀನು ಕೊಟ್ಟಿದ್ದಾರೆ. ರೈತರಿಗೆ ಸಿಗಬೇಕಿದ್ದ ಪರಿಹಾರಕ್ಕೂ ವಕ್ಫ್ ಅಡ್ಡಿಪಡಿಸಿದೆ. ದೇಶದಲ್ಲಿ 38 ಲಕ್ಷ ಎಕರೆ ಭೂಮಿ ವಕ್ಫ್ ಭೂಮಿ ಎಂದು ಹೇಳಿದೆ. ಹಿಂದೂಗಳು ಜಾತಿ ಜಾತಿ ಅನ್ನೋದು ಬಿಟ್ಟು ಒಂದಾಗಬೇಕು. ಇಲ್ಲಿದಿದ್ರೆ ಭವಿಷ್ಯದಲ್ಲಿ ಯಾವ ಜಾತಿಯೂ ಉಳಿಯುವುದಿಲ್ಲ, ನೀವು ಉಳಿಯುವುದಿಲ್ಲ. ರೈತರ, ದೇವಾಲಯಗಳ ಭೂಮಿ ಕಬಳಿಸುತ್ತಿದ್ದರು ಹಿಂದೂಗಳು, ರೈತರು ಎಚ್ಚೆತ್ತು ಕೊಳ್ಳಲಿಲ್ಲವೆಂದರೆ ಈ ದೇಶದಲ್ಲಿ ಹಿಂದೂಗಳಿಗೆ ಭವಿಷ್ಯ ಇಲ್ಲದಂತಾಗುತ್ತದೆ. ಹಿಂದುಗಳು ಅಲ್ಪಸಂಖ್ಯಾತರಾದ್ರೆ ಕೇರಳ, ಪಶ್ಚಿಮ ಬಂಗಾಲ ರೀತಿ ಆಗಲಿದೆ‌ ಎಂದು ಎಚ್ಚರಿಸಿದರು.

ನಾನು, ಜಾರಕಿಹೊಳಿ ಯಾರಿಗೂ ಬಗ್ಗಲ್ಲ:

ರೈತರ, ಸನಾತನ ಹಿಂದು ಧರ್ಮಕ್ಕಾಗಿ ಪ್ರಾಣ ಹೋದ್ರು ಪರವಾಗಿಲ್ಲ. ನಾನು ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳಲ್ಲ. ಅತ್ಯಂತ ಹಿಂದುಳಿದ ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಮಾಡಿದ್ದೆ. ಈ ಸರ್ಕಾರ ಬಂದಮೇಲೆ ನನಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದಾರೆ. ದಲಿತರು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳಿದ್ದೇನೆ ಹೊರತು ಮಂತ್ರಿಗಿರಿಗಾಗಿ ನಾನು ಯಾರ ಬಳಿ ಹೋಗಿಲ್ಲ. ನನ್ನ, ರಮೇಶ ಜಾರಕಿಹೊಳಿ ಮೇಲೆ ಬ್ಲ್ಯಾಕ್ ಮೇಲ್ ಮಾಡಿದ್ರೂ ನಾವು ಬಗ್ಗಿಲ್ಲ. ನಾವಿಬ್ಬರು ಯಾರಿಗೂ ಬಗ್ಗಲ್ಲ. ರಮೇಶ ಜಾರಕಿಹೊಳಿ ಬಂದ್ರು ಅಂತ ಸರ್ಕಾರ ಆಯಿತು. ಪಕ್ಷದಲ್ಲಿ ಏನೇನು ನಡೀತಿದೆ ಅಂತಾ ನಮಗೂ ಎಲ್ಲಾ ಗೊತ್ತಿದೆ, ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಗಟ್ಟಿಯಾಗಿ ಹೋರಾಟ ಮಾಡ್ತಿವಿ ಎಂದರು.

ಯತ್ನಾಳ್‌ ಸ್ವಿಚ್‌ ಬೇರೆ ಕಡೆ ಇದೆ, ಇನ್ನೆಲ್ಲೋ ಲೈಟ್ ಉರಿಯುತ್ತಿದೆ: ಪಿ. ರಾಜೀವ್

ದಾವಣಗೆರೆಯಲ್ಲಿ ಹಿಂದೂಗಳ ತಾಕತ್ತು ತೋರಿಸ್ತೀವಿ:

ದಾವಣಗೆರೆಯಲ್ಲಿ ಸಮಸ್ತ ಹಿಂದೂಗಳ ತಾಕತ್ತು ಪ್ರದರ್ಶನ ಮಾಡೋ ಸಮಾವೇಶ ಮಾಡುತ್ತೇವೆ. ನಾವು ವಕ್ಪ್ ವಿರುದ್ಧ ಹೋರಾಟ ಮಾಡ್ತೀವಿ‌. ಮುಂದಿನ ಬಜೆಟ್ ನಲ್ಲಿ ವಕ್ಪ್ ಕಾನೂನಿಗೆ ತಿದ್ದುಪಡಿ ಬರಲಿದೆ. ರಮೇಶ, ಲಿಂಬಾವಳಿ ಒಂದು ಕೋಟಿ ಘೋಷಣೆ ಮಾಡಿದ್ದಾರೆ. ನಾನು ವಿಜಯಪುರದಿಂದ ಒಂದು ಕೋಟಿ ರೂಪಾಯಿ ಘೋಷಣೆ ಮಾಡ್ತಿವಿ‌. ರೈತರಿಗಾಗಿ ನಾವೆಲ್ಲರೂ ಹೋರಾಟ ಮಾಡೋಣ. ವಕ್ಫ್ ಕಾನೂನು ರದ್ದು ಆದರೆ ನನಗೆ ಪ್ರಧಾನಿ ಆದಷ್ಟೇ ಸಂತೋಷ ಆಗಲಿದೆ ಎಂದರು.

click me!