ಬನ್ನೇರುಘಟ್ಟ ಉದ್ಯಾನದಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. 10 ಕೆಜಿ ಜಿಂಕೆ ಮಾಂಸ, ಬಂದೂಕು, ಬಲೆ, ಚಾಕು, ಚೂರಿ, ಹರಿತ ಆಯುಧಗಳು ಮತ್ತು ಸಿಡಿಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು/ಆನೇಕಲ್ (ಡಿ.01): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1.5 ಕೋಟಿಗೂ ಅಧಿಕ ಜನಸಂಖ್ಯೆಯಿದ್ದರೂ ಕಾಡು ಪ್ರಾಣಿಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸೀಮಿತ ಪ್ರದೇಶದಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ. ಇಲ್ಲೊಬ್ಬ ಅಸಾಮಿ ಬನ್ನೇರುಘಟ್ಟ ಉದ್ಯಾನದ ಕಾಡಿನಲ್ಲಿನ ಜಿಂಕೆಯನ್ನು ಬೇಟೆಯಾಡಿ ಅದರ ಮಾಂಸವನ್ನು ಮಾರಾಟ ಮಾಡುತ್ತಾ ಶ್ರೀಮಂತನಾಗಲು ಮುಂದಾಗಿದ್ದಾನೆ. ಇದೀಗ ಜಿಂಕೆ ಮಾಂಸದ ಸಮೇತ ಅರಣ್ಯ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಹೌದು, ಬೆಂಗಳೂರಿನ ಜನಸಂಖ್ಯೆಗೆ 1.5 ಕೋಟಿ ಹತ್ತಿರದಲ್ಲಿದೆ. ಇಲ್ಲಿ ಮಾಂಸಾಹಾರ ಪೂರೈಕೆಗೆ ನಿತ್ಯವೂ ಸಾವಿರಾರು ಪ್ರಾಣಿಗಳನ್ನು (ಕೋಳಿ, ಕುರಿ, ಆಡು, ಮೇಕೆ) ವಧೆ ಮಾಡಲಾಗುತ್ತಿದೆ. ಬೆಂಗಳೂರಿನ ಜನರಿಗೆ ಕಾಡಿನ ಪ್ರಾಣಿಗಳನ್ನು ವೀಕ್ಷಿಸಲು ಅನುಕೂಲ ಆಗುವಂತೆ ಇಡೀ ದೇಶದಲ್ಲಿ ಮೊದಲ ಬಾರಿಗೆ ಮಾನವ ನಿರ್ಮಿತ ರಾಷ್ಟ್ರೀಯ ಉದ್ಯಾನವನ್ನು ಬನ್ನೇರುಘಟ್ಟ ಅರಣ್ಯ ವಲಯದಲ್ಲಿ ನಿರ್ಮಿಸಿ ಸರ್ಕಾರದಿಂದ ಕೋಟ್ಯಂತರ ರೂ. ಖರ್ಚು ಮಾಡಿ ಇಲ್ಲಿದೆ ಪ್ರಾಣಿಗಳನ್ನು ತಂದು ಬಿಟ್ಟು ಸಂತತಿಯನ್ನು ಹೆಚ್ಚಳ ಮಾಡಲು ಮುಂದಾಗಿದೆ. ಹೀಗಾಗಿ, ಇಲ್ಲಿ ಕ್ರೂರ ಪ್ರಾಣಿಗಳಾದ ಸಿಂಹ, ಹುಲಿ, ಚಿರತೆ ಸೇರಿದಂತೆ ಹಲವು ಪ್ರಾಣಿಗಳಿಗೆ ಪಕ್ಕದಲ್ಲಿಯೇ ಇರುವ ಜಿಂಕೆಗಳು ಸಿಗದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಆದರೆ, ಇಲ್ಲೊಬ್ಬ ಕ್ರೂರಿ ಬನ್ನೇರುಘಟ್ಟ ಜೈವಿನ ಉದ್ಯಾನದ ಕಾಡಂಚಿನ ಪ್ರದೇಶದ ಹಳ್ಳಿಯಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುವ ಖಯಾಲಿ ಬೆಳೆಸಿಕೊಂಡಿದ್ದಾನೆ. ತಾನು ದುಡಿದು ತಿನ್ನುವುದಕ್ಕೆ ಬೆಂಗಳೂರಿನಲ್ಲಿ ನೀರೆಂಟು ಉದ್ಯೋಗಗಳು ಲಭ್ಯವಿದ್ದರೂ, ಕಾಡಿಮ ಅಮಾಯಕ ಜೀವಿ ಜಿಂಕೆಯನ್ನು ಬಲಿಕೊಟ್ಟು ಅದರ ಮಾಂಸ ಮಾರಾಟ ಮಾಡಿ ಜೀವನ ನಡೆಸುವ ಅಗತ್ಯವಾದರೂ ಏನಿತ್ತು ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇಲ್ಲಿನ ನೈಸರ್ಗಿಕವಾಗಿ ಜಿಂಕೆ ಬೇಟೆಯಾಡಿ ತಿನ್ನುವ ಪ್ರಾಣಿಗಳಿಗೇ ಜಿಂಕೆಯ ಮಾಂಸ ಕೊಡದಿರುವಾಗ ಈತ ಅರಣ್ಯ ಇಲಾಖೆ ನಿಯಮ ಮೀರಿ ಬೆಂಗಳೂರಿನ ಜನತೆಗೆ ಜಿಂಕೆ ಮಾಂಸ ಮಾರಾಟಕ್ಕೆ ಮುಂದಾಗಿ ವಿಕೃತಿ ಮೆರೆದಿದ್ದಾನೆ.
ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಿಂದ ಲಾಡ್ಜ್‌ಗೆ ಬರೋವರೆಗೂ ಚಿನ್ನಾ, ರನ್ನ; ಗರ್ಭಿಣಿಯಾದ್ಮೇಲೆ ಕೊಡ್ತಾನೆ ಕೈಯನ್ನ!
ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾಡಿನಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಬನ್ನೇರುಘಟ್ಟ ಸಮೀಪದ ರಾಗಿಹಳ್ಳಿ ಅರಣ್ಯ ಪ್ರದೇಶದ ಕಸವನಕುಂಟೆ ಗ್ರಾಮದ ಮನೆಯೊಂದರಲ್ಲಿ ಜಿಂಕೆ ಮಾಂಸದ ಸಮೇತವಾಗಿ ಆರೋಪಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಸಂತೋಷ್ (36) ಎಂದು ಗುರುತಿಸಲಾಗಿದೆ. ಈತ ಹಣದ ಆಸೆಗಾಗಿ ಜಿಂಕೆ ಬೇಟೆಯಾಡಿ ಅದರ ಮಾಂಸ ಮಾರಾಟಕ್ಕೆ ಮುಂದಾಗಿದ್ದನು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಅಧಿಕಾರಿಗಳಿಗೆ 10 ಕೆಜಿ ಜಿಂಕೆ ಮಾಂಸದೊಂದಿಗೆ ಬೇಟೆಗಾರ ಸಿಕ್ಕಿ ಬಿದ್ದಿದ್ದಾನೆ. ಇನ್ನು ಆರೋಪಿಯ ಬಳಿ ಜಿಂಕೆ ಬೇಟೆಯಾಡಲು ಬಂದೂಕು, ಬಲೆ, ಚಾಕು, ಚೂರಿ, ಹರಿತ ಆಯುಧಗಳು, ಸಿಡಿಮದ್ದುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್‌ಐಆರ್: ಬಂಧನ ಭೀತಿ