
ಬೆಂಗಳೂರು(ಜ.19): ಕೋವಿಡ್ ಮೂರನೇ ಅಲೆಯಲ್ಲಿ(Covid 3rd Wave) ಹೆಚ್ಚಿನ ಸೋಂಕಿತರು ಹೋಮ್ ಐಸೊಲೇಷನ್‌ನಲ್ಲಿದ್ದು(Home Isolation), ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗುತ್ತಿರುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಈ ನಿಟ್ಟಿನಲ್ಲಿ ಹೋಮ್ ಐಸೊಲೇಷನ್‌ನಲ್ಲಿ ಇರುವವರಿಗೆ ಕೋವಿಡ್ ಐಸೋಲೇಷನ್ ಕಿಟ್(Covid Isolation Kit) ನೀಡಲು ಸರ್ಕಾರ ನಿರ್ಧರಿಸಿದೆ. ಈ ಕಿಟ್‌ನಲ್ಲಿ ಐದು ಬಗೆಯ ಮಾತ್ರೆ, ಒಂದು ಬಗೆಯ ಸಿರಪ್ ಇರಲಿದೆ.
ಕಿಟ್‌ನಲ್ಲಿ ಏನೇನು ವಸ್ತುಗಳು?:
ಪ್ಯಾರಾಸಿಟಮಲ್ (20 ಗುಳಿಗೆ) ಮತ್ತು ವಿಟಮಿನ್ ಸಿ (10 ಗುಳಿಗೆ) ತಲಾ 500 ಎಂಜಿ, ಝಿಂಕ್ ಸಲ್ಪೈಟ್ 50 (5 ಗುಳಿಗೆ) ಎಂಜಿ, ಪಾಂಟಾಪ್ರೋಜೋಲ್ (5 ಗುಳಿಗೆ) 40 ಎಂಜಿ, ಲೆವೋಟ್ರಐಸಐನ್ (5 ಗುಳಿಗೆ) 10 ಎಂಜಿ ಮತ್ತು ಆ್ಯಂಟಿ ಟುಸಿವ್ ಕಾಫ್ ಸಿರಪ್. ಇದರ ಜೊತೆಗೆ ಕಿಟ್‌ನಲ್ಲಿ 10 ಮೂರು ಪದರದ ಮಾಸ್ಕ್ ಮತ್ತು 50 ಮಿಲೀ ಲೀಟರ್ ನ ಒಂದು ಹ್ಯಾಂಡ್ ಸ್ಯಾನಿಟೈಸರ್(Sanitizer) ಇರಲಿದೆ. ಐದು ದಿನಗಳ ಅವಧಿಗೆ ಈ ಔಷಧಿಯನ್ನು(Medicine) ಇಲಾಖೆ ನೀಡಲಿದೆ. ಕ್ಲಿನಿಕಲ್ ಸಮಿತಿಯ ಶಿಫಾರಸಿನ ಮೇರೆಗೆ ಆರೋಗ್ಯ ಇಲಾಖೆ(Department of Health) ಈ ಕಿಟ್ ನೀಡುತ್ತಿದೆ.
ರಾಜ್ಯದಲ್ಲಿ ಕೊರೋನಾ ಮಹಾಸ್ಫೋಟ, 41457 ಕೇಸ್
ಕೋವಿಡ್ ತಪ್ಪು ಮಾಹಿತಿ ನೀಡುವ ವೈದ್ಯರ ಮೇಲೆ ಕ್ರಮ
ಕೋವಿಡ್(Covid-19) ಬಗ್ಗೆ ಕೆಲ ವೈದ್ಯರು ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ(Social Media) ತಪ್ಪು ಮಾಹಿತಿ ನೀಡುವ ಮೂಲಕ ಜನರಲ್ಲಿ ಅನಗತ್ಯ ಗೊಂದಲ ಉಂಟು ಮಾಡುವ, ಆಧಾರ ರಹಿತ ಮಾಹಿ ಹಂಚಿಕೊಳ್ಳುತ್ತಿರುವ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಕೆಲವು ವೈದ್ಯರು ಮಾಧ್ಯಮಗಳಲ್ಲಿ(Media) ಅಪೂರ್ಣ, ಆಧಾರರಹಿತ, ತಪ್ಪು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಜನರಲ್ಲಿ ಗೊಂದಲ ಸೃಷ್ಟಿ ಆಗುವುದು ಮಾತ್ರವಲ್ಲದೇ ಸರ್ಕಾರ ಹೊರಡಿಸುವ ವಿವಿಧ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪ್ರೇರಣೆ ನೀಡುತ್ತದೆ.
ವೈದ್ಯರು ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ, ಮಾರ್ಗಸೂಚಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಗರಿಷ್ಠ ಪ್ರಮಾಣದ ಎಚ್ಚರಿಕೆ ವಹಿಸಬೇಕು. ಅದು ಬಿಟ್ಟು ತಪ್ಪು ಮಾಹಿತಿ, ಅ ವಾಸ್ತವ ದತ್ತಾಂಶವನ್ನು ಮಾಧ್ಯಮಗಳ ಮುಂದೆ ನೀಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಿ ವಿಪತ್ತು ನಿರ್ವಹಣಾ ಕಾಯ್ದೆ, ಕರ್ನಾಟಕ(Karnataka) ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.
Booster Dose: 3ನೇ ಡೋಸ್ ಅಭಿಯಾನ ನಿರೀಕ್ಷೆಯಂತೆ ಸಾಗುತ್ತಿಲ್ಲ: ಸುಧಾಕರ್
ಕೋವಿಡ್‌ನಿಂದ ಮೃತಪಟ್ಟ ತಾಯಿ ಅಂತ್ಯಕ್ರಿಯೆಗೂ ಮಗಳ ನಕಾರ..!
ಬೆಂಗಳೂರು: ಕೊರೋನಾ(Coronavirus) ಸೋಂಕಿನಿಂದ ಮೃತಪಟ್ಟ(Death) ತಾಯಿಯ(Mother) ಅಂತಿಮ ಸಂಸ್ಕಾರಕ್ಕೆ ಮಗಳು ಹಿಂದೇಟು ಹಾಕಿದ್ದರಿಂದ ಸ್ಥಳೀಯರು ಮತ್ತು ಹಿಂದು ಪರ ಸಂಘಟನೆಯಿಂದ(Pro Hindu Organization) ಮೃತರ ಅಂತಿಮ ಸಂಸ್ಕಾರಕ್ಕೆ ಮುಂದಾಗಿದ್ದ ಘಟನೆ ನಗರದ ಹೆಬ್ಬಾಳದಲ್ಲಿ ನಡೆದಿದೆ.
ವಾಯುಸೇನೆ(Air Force) ಕಚೇರಿಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭಾಗ್ಯಲಕ್ಷ್ಮಿ (52) ಮೃತ ದುರ್ದೈವಿ. ಪತಿಯ ಮರಣಾನಂತರ ಒಂಟಿಯಾಗಿ ವಾಸಿಸುತ್ತಿದ್ದರು. ಕಳೆದ ಒಂದು ವಾರದಿಂದ ಕೊರೋನಾ ಸೋಂಕು ತಗುಲಿ ಅನಾರೋಗ್ಯಕ್ಕೀಡಾಗಿದ್ದ ಕಾರಣ ಸ್ಥಳೀಯರು ಆಸ್ಪತ್ರೆಗೆ(Hospital) ದಾಖಲಿಸಿದ್ದರು. ಚಿಕಿತ್ಸೆ(Treatment) ಫಲಕಾರಿಯಾಗದೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದರು. ಇವರಿಗೆ ಒಬ್ಬಳು ಪುತ್ರಿ ಇದ್ದು, ಹತ್ತು ವರ್ಷದ ಹಿಂದೆ ಜಗಳ ಮಾಡಿಕೊಂಡು ಬೇರೆಯಾಗಿ ರಾಜರಾಜೇಶ್ವರಿ ನಗರದಲ್ಲಿ ವಾಸವಿದ್ದರು.
ತಾಯಿ ಭಾಗ್ಯಲಕ್ಷ್ಮಿ ಮೃತಪಟ್ಟದ್ದಾರೆ ಎಂದು ಸ್ಥಳೀಯ ವಿಷಯ ತಿಳಿಸಿದರೂ ಆಗಮಿಸುವುದಾಗಿ ತಿಳಿಸಿ ಒಂದು ದಿನವಾದರೂ ಬಂದಿಲ್ಲ. ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದಾಗ ಬರುತ್ತೇನೆ ಎಂದು ಫೋನ್ ಕಟ್ ಮಾಡಿದ್ದಾರೆ. ಈ ಹಿನ್ನೆಲೆ ಸ್ಥಳೀಯರು ಮತ್ತು ವಿಶ್ವ ಹಿಂದೂ ಪರಿಷತ್(Vishwa Hindu Parishad) ಕಾರ್ಯಕರ್ತರು ಹೆಬ್ಬಾಳದ ಚಿರಶಾಂತಿ ಧಾಮದಲ್ಲಿ ಅಂತಿಮ ಸಂಸ್ಕಾರಕ್ಕೆ(Funeral) ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಸಂಜಯ್ ನಗರ ಪೊಲೀಸರು(Police) ಮಗಳ ಮನವೊಲಿಸಿದ ಬಳಿಕ ನೇರವಾಗಿ ಹೆಬ್ಬಾಳದ ಚಿತಾಗಾರಕ್ಕೆ ಆಗಮಿಸಿ, ಅಂತಿಮ ದರ್ಶನ ಪಡೆದರು. ಆ್ಯಂಬುಲೆನ್ಸ್‌ನಲ್ಲಿಯೇ(Ambulance) ತಾಯಿಯ ಮುಖ ನೋಡಿದ ನಂತರ ಅಂತ್ಯಕ್ರಿಯೆ ಮಾಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ