Booster Dose: 3ನೇ ಡೋಸ್‌ ಅಭಿಯಾನ ನಿರೀಕ್ಷೆಯಂತೆ ಸಾಗುತ್ತಿಲ್ಲ: ಸುಧಾಕರ್‌

By Kannadaprabha News  |  First Published Jan 19, 2022, 5:45 AM IST

*   ಶೇ.39ರಷ್ಟು ಮಂದಿಗೆ ಮಾತ್ರ 3ನೇ ಡೋಸ್‌
*   ದಿನಕ್ಕೆ 1.2 ಲಕ್ಷ ಪ್ರಕರಣಗಳು
*   ಬೆಂಗಳೂರಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಪಿಡಿ
 


ಬೆಂಗಳೂರು(ಜ.19): ರಾಜ್ಯದಲ್ಲಿ(Karnataka) ಮುಂಚೂಣಿ ಕಾರ್ಯಕರ್ತರ ಮುನ್ನೆಚ್ಚರಿಕೆ ಲಸಿಕೆ ಅಭಿಯಾನಕ್ಕೆ(Vaccine Drive) ನಿರೀಕ್ಷೆ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮುಂಚೂಣಿ ಕಾರ್ಯಕರ್ತರು ತಪ್ಪದೇ ಈ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ಮನವಿ ಮಾಡಿದರು.

ಮಂಗಳವಾರ ಮುಖ್ಯಮಂತ್ರಿಗಳು ಜಿಲ್ಲಾ​ಧಿಕಾರಿಗಳೊಂದಿಗೆ ನಡೆಸಿದ ಸಭೆ ಬಳಿಕ ಮಾತನಾಡಿದ ಅವರು, ಮುನ್ನೆಚ್ಚರಿಕೆ ಲಸಿಕೆ(Vaccine) ಡೋಸ್‌ ಅನ್ನು ಮುಂಚೂಣಿ ಕಾರ್ಯಕರ್ತರು ಎಲ್ಲರೂ ಪಡೆಯಬೇಕು. ಸದ್ಯ ರಾಜ್ಯದಲ್ಲಿ ಶೇ.39ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. ಆದ್ದರಿಂದ ಮುನ್ನೆಚ್ಚರಿಕೆ ಡೋಸ್‌ ಲಸಿಕಾರಣವನ್ನು(Vaccination) ದೊಡ್ಡ ಅಭಿಯಾನದಂತೆ ಮಾಡಲು ತೀರ್ಮಾನಿಸಲಾಗಿದ್ದು, ಅರ್ಹ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟಸಹ ಅಸ್ವಸ್ಥತೆ ಹೊಂದಿರುವವರು ಲಸಿಕೆ ಪಡೆಯಬೇಕು ಎಂದರು.

Tap to resize

Latest Videos

undefined

Corona ಸೋಂಕಿತರ ನಿಗಾಕ್ಕೆ 10 ಸಾವಿರ ವೈದ್ಯ ವಿದ್ಯಾರ್ಥಿಗಳು: ಡಾ.ಸುಧಾಕರ್‌

ಕೊರೋನಾ(Coronavirus) ಲಸಿಕೆ ನೀಡಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಪರೀಕ್ಷೆಯನ್ನು ಇದೇ ರೀತಿ ಮುಂದುವರಿಸಬೇಕು. 60 ವರ್ಷ ಮೇಲ್ಪಟ್ಟವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಜೊತೆಗೆ ಅವರಿಗೆ ಹೆಚ್ಚು ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಎಲ್ಲ ಜಿಲ್ಲೆ, ಗ್ರಾಮೀಣ ಪ್ರದೇಶಗಳಲ್ಲಿ ವಾರ್‌ ರೂಮ್‌ ನಿರ್ಮಿಸಿ, ಅದರ ಮೂಲಕ ಟೆಲಿ ಟ್ರಯಾಜಿಂಗ್‌ ಮಾಡಬೇಕು. ಪಾಸಿಟಿವ್‌ ಆದವರು ನೇರವಾಗಿ ಆಸ್ಪತ್ರೆಗೆ ಹೋಗುವಂತಾಗಬಾರದು. ಚಿಕಿತ್ಸೆ ಅಗತ್ಯವಿಲ್ಲದಿದ್ದರೂ ಆತಂಕದಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬೇಕು. ಅಗತ್ಯವಿರುವವರಿಗೆ ಮಾತ್ರ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಹೋಮ್‌ ಐಸೋಲೇಶನ್‌ ಕಿಟ್‌(Home Isolation Kit) ಗಳನ್ನು ಪ್ರತಿ ರೋಗಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ. ಜಿಲ್ಲೆಗಳಿಗೆ ಕಿಟ್‌ಗಳನ್ನು ಕಳುಹಿಸಲಿದ್ದು, ಅಲ್ಲಿಂದ ಪ್ಯಾಕ್‌ ಮಾಡಿ ಮನೆಗೆ ಕಳುಹಿಸಲಾಗುವುದು. ರಾಜ್ಯದಲ್ಲಿ ಆಕ್ಸಿಜನ್‌ಗೂ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಸದ್ಯ 264 ಆಕ್ಸಿಜನ್‌ ಘಟಕಗಳಿದ್ದು(Oxygen unit), ಈ ಪೈಕಿ 222 ಘಟಕ ಕಾರ್ಯಾರಂಭವಾಗಿದೆ. ಇನ್ನೂ 17 ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ ಸ್ಥಾಪಿಸುವ ಪ್ರಸ್ತಾಪವಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಪಿಡಿ

ಬೆಂಗಳೂರಿನಲ್ಲಿ(Bengaluru) ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಘಟಕ (OPD) ಬಲಪಡಿಸಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಹೊಸ ಒಪಿಡಿಗಳನ್ನು ತೆರೆಯಲು ಸೂಚಿಸಲಾಗಿದ್ದು, ಕೆಲಸಕ್ಕಾಗಿ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ರಾಜ್ಯದ ಕೈಗಾರಿಕೆಗಳಿಗೆ ಕಾರ್ಮಿಕರ ಲಸಿಕೆ ಹಾಗೂ ಚಿಕಿತ್ಸೆ ಕುರಿತು ವಿಶೇಷ ಮಾರ್ಗಸೂಚಿ ರೂಪಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ದಿನಕ್ಕೆ 1.2 ಲಕ್ಷ ಪ್ರಕರಣಗಳು

2ನೇ ಅಲೆಗೆ ಹೋಲಿಕೆ ಮಾಡಿದರೆ 3ನೇ ಅಲೆ(Covid 3rd Wave) ವೇಗವಿದೆ. ನಾಲ್ಕರಿಂದ ಐದು ಪಟ್ಟು ವೇಗವಾಗಿ ಹರಡುತ್ತದೆ. ಫೆಬ್ರವರಿ ಎರಡೂ ಅಥವಾ ಮೂರನೇ ವಾರದಲ್ಲಿ ಕಡಿಮೆ ಆಗಲಿದೆ. ದಿನಕ್ಕೆ 1.2 ಲಕ್ಷ ಪ್ರಕರಣ ಬರಬಹುದು. ಫೆಬ್ರವರಿ ಎರಡೂ ಅಥವಾ ಮೂರನೇ ವಾರದಲ್ಲಿ ಕಡಿಮೆ ಆಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿದೆ(Technical Advisory Committee Report) ಎಂದು ಸಚಿವರು ತಿಳಿಸಿದರು.

Weekend Curfew ಬಿಜೆಪಿ ನಾಯಕರಿಂದಲೇ ಆಕ್ಷೇಪ, ಕುತೂಹಲ ಮೂಡಿಸಿದ ಬೊಮ್ಮಾಯಿ ತೀರ್ಮಾನ?

ರಾಜ್ಯದ 99% ಮಂದಿಗೆ ಮೊದಲ ಡೋಸ್‌

ರಾಜ್ಯದಲ್ಲಿ ಶೇ.99ರಷ್ಟು ಜನರು ಮೊದಲ ಡೋಸ್‌(First Dose) ತೆಗೆದುಕೊಂಡಿದ್ದು, ಲಸಿಕೆ(Vaccine) ನೀಡಿಕೆ ಅಭಿಯಾನದಲ್ಲಿ ಕರ್ನಾಟಕ(Karnataka)  ಮುಂಚೂಣಿಯಲ್ಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊರೋನಾ(Coronavirus)  ಲಸಿಕೆ ಅಭಿಯಾದಲ್ಲಿ ಭಾರತ(India) ವಿಶ್ವಕ್ಕೆ(World) ಮಾದರಿಯಾಗುವಂತೆ ಸಾಧನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಲಸಿಕಾ ಅಭಿಯಾನಕ್ಕೆ(Vaccine Drive) ಚಾಲನೆ ನೀಡಿ ಒಂದು ವರ್ಷವಾಗಿದ್ದು, ದೇಶದಲ್ಲಿ 156 ಕೋಟಿ ಡೋಸ್‌ ಲಸಿಕೆಗಳನ್ನು ನೀಡಿ ಸಾಧನೆ ಮಾಡಿದೆ.ರಾಜ್ಯದಲ್ಲಿ ಶೇ.99 ರಷ್ಟು ಜನರು ಮೊದಲ ಡೋಸ್‌, ಶೇ.83 ಜನರು ಎರಡೂ ಡೋಸ್‌ ತೆಗೆದುಕೊಂಡಿದ್ದಾರೆ ಎಂದರು.
 

click me!