ಇನ್ಮುಂದೆ ಸರ್ಕಾರ ರೆಮ್‌ಡೆಸಿವಿರ್‌ ಪೂರೈಸಲ್ಲ..!

Kannadaprabha News   | Asianet News
Published : Jun 04, 2021, 07:29 AM ISTUpdated : Jun 04, 2021, 07:44 AM IST
ಇನ್ಮುಂದೆ ಸರ್ಕಾರ ರೆಮ್‌ಡೆಸಿವಿರ್‌ ಪೂರೈಸಲ್ಲ..!

ಸಾರಾಂಶ

* ಆಸ್ಪತ್ರೆ, ರೋಗಿಗಳೇ ನೇರವಾಗಿ ಖರೀದಿಸಬೇಕು * ಆಸ್ಪತ್ರೆಗಳು, ರೋಗಿಗಳೇ ನೇರವಾಗಿ ಖರೀದಿಸಬೇಕು * ಮಾರುಕಟ್ಟೆಯಲ್ಲಿ ಸಾಕಷ್ಟು ಲಭ್ಯವಿರುವುದರಿಂದ ಈ ನಿರ್ಧಾರ   

ಬೆಂಗಳೂರು(ಜೂ.04): ರಾಜ್ಯ ಸರ್ಕಾರ ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ಖರೀದಿಸಿ ಆಸ್ಪತ್ರೆಗಳಿಗೆ ಹಂಚುವುದನ್ನು ಕೈಬಿಟ್ಟಿದ್ದು, ಮಾರುಕಟ್ಟೆಯಿಂದ ನೇರ ಖರೀದಿ ನಡೆಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. 

ಈ ಬಗ್ಗೆ ಹೇಳಿಕೆ ನೀಡಿರುವ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ರೆಮ್‌ಡೆಸಿವಿರ್‌ ದಾಸ್ತಾನು ಇರುವುದರಿಂದ ಸರ್ಕಾರ ಈ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 

ಕೇಂದ್ರದಿಂದ ರೆಮ್‌ಡಿಸಿವಿರ್ ಪೂರೈಕೆ ಸ್ಥಗಿತ : ಸ್ಪಷ್ಟನೆ ನೀಡಿದ ಸಚಿವ ಸುಧಾಕರ್

ಔಷಧ ವಿರತಕರು ರೆಮ್‌ಡೆಸಿವಿರ್‌ ತಯಾರಿಕ ಸಂಸ್ಥೆಗಳಿಂದ ನಿಯಮಾನುಸಾರ ಪಡೆದು ಮಾರಾಟ ಮಾಡಬೇಕು. ಆಸ್ಪತ್ರೆಗಳು, ಸಾರ್ವಜನಿಕರು ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ಔಷಧ ವಿತರಕರಿಂದ ನಿಯಮಕ್ಕೆ ಅನುಗುಣವಾಗಿ ನೇರವಾಗಿ ಪಡೆಯಬಹುದು. ಔಷಧ ಬೆಲೆ ನಿಯಂತ್ರಣ ಆದೇಶ ಉಲ್ಲಂಘಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ. 

ರೆಮ್‌ಡೆಸಿವಿರ್‌ ಚುಚ್ಚುಮದ್ದು ಕೋವಿಡ್‌ ಗುಣಪಡಿಸುವಲ್ಲಿ ಉಪಯುಕ್ತ ಎಂದು ಇದಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿ ಕಾಳಸಂತೆಯಲ್ಲಿ ಬಿಕರಿಯಾಗುವ ಸ್ಥಿತಿ ನಿರ್ಮಾಣವಾಗಿತ್ತು. ಇತ್ತ ಚುಚ್ಚುಮದ್ದನ್ನು ಪೂರೈಸಲು ಸರ್ಕಾರ ಹರಸಾಹಸವೇ ಪಡಬೇಕಾಯಿತು. ಅಂತಿಮವಾಗಿ ಕಳೆದ 15 ದಿನಗಳಿಂದ ಸಕ್ರಿಯ ಪ್ರಕರಣಗಳ ಕುಸಿತ ಮತ್ತು ಅವಶ್ಯಕ ಪ್ರಮಾಣದಲ್ಲಿ ರೆಮ್‌ಡೆಸಿವಿರ್‌ ಉತ್ಪಾದನೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಅಗತ್ಯಗಳಿಗೆ ಬೇಕಾದಷ್ಟುರೆಮ್‌ಡೆಸಿವಿರ್‌ ದಾಸ್ತಾನು ಇರಿಸಿಕೊಂಡಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ