
ವರದಿ. ಸುರೇಶ್ ಎ ಎಲ್.
ಬೆಂಗಳೂರು(ಮಾ.17): ಹುಕ್ಕಾಬಾರ್ (Hookah Bar) ಮತ್ತು ಡ್ಯಾನ್ಸ್ ಬಾರ್ (Dance Bar) ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಗೃಹ ಸಚಿವರೇ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ (Legislative Council) ಹುಕ್ಕಾಬಾರ್ ಗಳನ್ನು ನಿಯಂತ್ರಣ ಮಾಡಲು ಸರ್ಕಾರದ ಕ್ರಮಗಳೇನು,? ಇದು ಶಾಲಾ ಮಕ್ಕಳ (School children) ಮೇಲೆ ಪ್ರಭಾವ ಬೀರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಕಾಂಗ್ರೆಸ್ (congress) ಸದಸ್ಯ ಪಿ ಆರ್ ರಮೇಶ್ (PR Ramesh) ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra), ಹುಕ್ಕಾಬಾರ್ ಮತ್ತು ಡ್ಯಾನ್ಸ್ ಬಾರ್ ಗಳನ್ನು ನಡೆಸಲು ಪೋಲೀಸ್ ಇಲಾಖೆ ವತಿಯಿಂದ ಲೈಸನ್ಸ್ ನೀಡಲಾಗುವುದಿಲ್ಲ, ಆದರೆ ಅವು ಬಿಬಿಎಂಪಿ ಯಿಂದ ಟ್ರೇಡ್ ಲೈಸನ್ಸ್ ಪಡೆದಿರುತ್ತವೆ. ಅಲ್ಲದೇ ಈ ಬಾರ್ ಗಳನ್ನು ನಡೆಸುವವರು ಕೋರ್ಟ್ ನಿಂದ ಕೆಲವು ಆದೇಶ ಗಳನ್ನು ತಂದಿದ್ದಾರೆ.
ಹುಕ್ಕಾಬಾರ್ ಗಳನ್ನು ಸ್ಮೋಕಿಂಗ್ ಜೋನ್ ಎಂದು ಪರಿಗಣಿಸಿ ನ್ಯಾಯಾಲಯ ಆದೇಶ ನೀಡಿದೆ. ಪದೇಪದೇ ಪೋಲೀಸರು ಈ ಸ್ಥಳಗಳಿಗೆ ತೆರಳಿ ತನಿಖೆ ನೆಪದಲ್ಲಿ ತೊಂದರೆ ಕೊಡಬಾರದೆಂದೂ ನ್ಯಾಯಾಲಯವು ಸೂಚಿಸಿದೆ.
ಶಿಕ್ಷಣ, ಧರ್ಮ ಎರಡು ಕಣ್ಣುಗಳಿದ್ದಂತೆ: ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ತಂದೆ ಹೇಳಿಕೆ
ಹಾಗಾಗಿ ಇವುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ, ಅದಾಗ್ಯೂ ಸಿಸಿಬಿ (CCB) ಯಿಂದ ಕೆಲವು ಹುಕ್ಕಾಬಾರ್ ಗಳ ಮೇಲೆ ದಾಳಿ ನಡೆಸಿ ಅಲ್ಲಿ ಬಳಸುವ ಕೆಲವು ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಇರುವ ಕಂಟೆಂಟ್ ಗಳನ್ನು ಪರಿಶೀಲಿಸಲಾಗ್ತಿದೆ.
ಒಂದು ವೇಳೆ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುವ ಅಂಶಗಳು ಇದ್ದರೆ ಖಂಡಿತಾ ಇವುಗಳ ಮೇಲೆ ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
ಹಿಜಾಬ್ ತೀರ್ಪಿಗೆ ವಿರೋಧ : ಬಂದ್‌ಗೆ ಮಂಗಳೂರು ಮುಸ್ಲಿಮರ ಬೆಂಬಲ: ಹಲವೆಡೆ ಸ್ತಬ್ಧ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ