ಭ್ರೂಣ ಲಿಂಗಪತ್ತೆ ಬಗ್ಗೆ ಮಾಹಿತಿ ನೀಡುವವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

By Sathish Kumar KH  |  First Published Jun 20, 2024, 7:09 PM IST

ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಮಾಡುವ ಬಗ್ಗೆ ಮಾಹಿತಿ ನೀಡುವವರಿಗೆ ಆರೋಗ್ಯ ಇಲಾಖೆಯಿಂದ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.


ಬೆಂಗಳೂರು (ಜೂ.20): ರಾಜ್ಯದಲ್ಲಿ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ (ಭ್ರೂಣ ಲಿಂಗಪತ್ತೆ) ಮಾಡುವ ಆಸ್ಪತ್ರೆಗಳು, ಸ್ಕ್ಯಾನಿಂಗ್ ಸೆಂಟರ್ ಸೇರಿ ಇತರೆಡೆ ಭ್ರೂಣ ಲಿಂಗಪತ್ತೆ ಮಾಡುವ ಬಗ್ಗೆ ಗುಪ್ತ ಕಾರ್ಯಾಚರಣೆ ಮೂಲಕ ಮಾಹಿತಿ ನೀಡುವವರಿಗೆ ಆರೋಗ್ಯ ಇಲಾಖೆಯಿಂದ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಸರ್ಕಾರ ಆದೇಶಿಸಿದೆ.

ಈವರೆಗೆ ರಾಜ್ಯದಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವವಾಗಿ ಭ್ರೂಣಲಿಂಗ ಪತ್ತೆ ಮಾಡುವ ಗುಪ್ತ ಕಾರ್ಯಾಚರಣೆ ಅಥವಾ ಮಾಹಿತಿ ನೀಡುವವರಿಗೆ 50 ಸಾವಿರ ರೂ. ಬಹುಮಾನ ನೀಡಲಾಗುತ್ತಿತ್ತು. ಆದರೆ, ಈ ಬಹುಮಾನದ ಮೊತ್ತವನ್ನು ಸದರಿ 2024-25ನೇ ಆರ್ಥಿಕ ಸಾಲಿನಿಂದ 1,00,000 ರೂ.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಅದರಂತೆ ಭ್ರೂಣಲಿಂಗ ಪತ್ತೆ ಯಶ್ವಸಿಗೊಂಡ ಗುಪ್ತಕಾರ್ಯಚಾರಣೆ / ಮಾಹಿತಿ ನೀಡುವವರಿಗೆ ನೀಡುವ ಬಹುಮಾನ ರೂ. 50,000 ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದಲೂ ಹಾಗೂ ಇನ್ನುಳಿದ ರೂ. 50,000 ಮೊತ್ತವನ್ನು ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗಿರುವ ಪಿ.ಸಿ & ಪಿ.ಎನ್.ಡಿ.ಟಿ. ಶುಲ್ಕದಿಂದ ನೀಡಲು ಆದೇಶಿಸಿದೆ.

Latest Videos

undefined

ಸರ್ಕಾರಿ ಶಾಲೆ, ಪಿಯು ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರು ಪೂರೈಕೆ

ಸರ್ಕಾರಿ ಆದೇಶದಲ್ಲಿ ಏನಿದೆ?
ಈ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರವಿಧಾನಗಳು (ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994 ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಯಶ್ವಸಿಗೊಂಡ ಗುಪ್ತಕಾರ್ಯಾಚರಣೆಗೆ / ಮಾಹಿತಿ ನೀಡುವ ಮಾಹಿತಿದಾರರಿಗೆ ಈಗಾಗಲೇ 2024-25 ನೇ ಸಾಲಿನ ಆರ್.ಓ.ಪಿ. Sl.No. 19.13 ರಲ್ಲಿ ಅನುಮೋದನೆಯಾಗಿರುವಂತೆ ರೂ. 50,000/- (ರೂ. ಐವತ್ತು ಸಾವಿರಗಳು) ಬಹುಮಾನವಾಗಿ ನೀಡಲಾಗುತ್ತಿದೆ.

ಆದರೆ, 2023ರ ಡಿಸೆಂಬರ್‌ನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮೇಲ್ವಿಚಾರಣಾ ಮಂಡಳಿಯ ಸಭೆಯಲ್ಲಿ ಪಿ.ಸಿ & ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೀಡುವ ರೂ. 50,000 ಮೊತ್ತವನ್ನು 1,00,000 ರೂ.ಗಳಿಗೆ ಏರಿಕೆ ಮಾಡಲು ನಿರ್ಧಾರಿಸಲಾಯಿತು. ಅದರಂತೆ, ಯಶ್ವಸಿಗೊಂಡ ಗುಪ್ತಕಾರ್ಯಚಾರಣೆ / ಮಾಹಿತಿ ನೀಡುವವರಿಗೆ ನೀಡುವ ಬಹುಮಾನ ರೂ. 50,000 ವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದಲೂ , ಇನ್ನುಳಿದ ರೂ. 50,000 ಮೊತ್ತವನ್ನು ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗಿರುವ ಪಿ.ಸಿ & ಪಿ.ಎನ್.ಡಿ.ಟಿ. ಶುಲ್ಕದಿಂದ ನೀಡಲು ಆದೇಶಿಸಿದೆ.

click me!