ರಾಜ್ಯದಲ್ಲಿ ಎಲೆಕ್ಷನ್ ಬೇಟೆ: ಬರೋಬ್ಬರಿ 12 ಕೋಟಿ ನಗದು, 16 ಕೋಟಿ ಮದ್ಯ, 6 ಕೋಟಿ ಮೌಲ್ಯದ ಚಿನ್ನ ವಶಕ್ಕೆ!

Published : Apr 03, 2023, 10:19 PM IST
ರಾಜ್ಯದಲ್ಲಿ ಎಲೆಕ್ಷನ್ ಬೇಟೆ: ಬರೋಬ್ಬರಿ 12 ಕೋಟಿ ನಗದು, 16 ಕೋಟಿ ಮದ್ಯ, 6 ಕೋಟಿ ಮೌಲ್ಯದ ಚಿನ್ನ ವಶಕ್ಕೆ!

ಸಾರಾಂಶ

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ. ಆದಾಯ ತೆರಿಗೆ ಇಲಾಖೆ , ಪೋಲಿಸ್ ಇಲಾಖೆ, ವಿಚಕ್ಷಣ ದಳ, ಸ್ಥಿರ ಕಣ್ಗಾವಲು ಸೇರಿದಂತೆ ವಿವಿಧ ತಂಡಗಳಿಂದ ಜಪ್ತಿ ಮಾಡಿದ ವಿವರ ಕೇಳಿದ್ರೆ ಶಾಕ್ ಆಗ್ತೀರಾ!  ಒಟ್ಟು 47 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು (ಏ.3): ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ. ಆದಾಯ ತೆರಿಗೆ ಇಲಾಖೆ , ಪೋಲಿಸ್ ಇಲಾಖೆ, ವಿಚಕ್ಷಣ ದಳ, ಸ್ಥಿರ ಕಣ್ಗಾವಲು ಸೇರಿದಂತೆ ವಿವಿಧ ತಂಡಗಳಿಂದ ಜಪ್ತಿ ಮಾಡಿದ ವಿವರ ಕೇಳಿದ್ರೆ ಶಾಕ್ ಆಗ್ತೀರಾ! ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯ ತನಕ ಅಂದರೆ 12 ದಿನಗಳಲ್ಲಿ ಲೆಕ್ಕವಿಲ್ಲದಷ್ಟು ಹಣ, ಚಿನ್ನ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ. ಎಲ್ಲಾ ತಂಡಗಳಿಂದ ಒಟ್ಟು 47,43,85,902 ಮೌಲ್ಯದ  ನಗದು ಸೇರಿದಂತೆ ಮಧ್ಯ, ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

ಸಭೆಗೆ ತಡವಾಗಿ ಬಂದ ಕುಮಾರಣ್ಣ, ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮುಂದೂಡಿಕೆ!

ಮಾರ್ಚ್ 23, 2023 ರಿಂದ ಇಲ್ಲಿಯ ತನಕ ಜಪ್ತಿ ಮಾಡಿದ ವಿವರ ಇಂತಿದೆ:

  • ರಾಜ್ಯದಲ್ಲಿ ಒಟ್ಟು 12,82,94,736/- ನಗದು ವಶಪಡಿಸಿಕೊಳ್ಳಲಾಗಿದೆ. 
  • 16,02,76,775/- ಮೌಲ್ಯದ 2,78,798 ಲೀಟರ್ ಮಧ್ಯ ವಶಪಡಿಸಿಕೊಳ್ಳಲಾಗಿದೆ. 
  • 41,26,155 ಮೌಲ್ಯದ 79.44 ಕೆ.ಜಿ ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ. 
  • ಅಬಕಾರಿ ಇಲಾಖೆ 450 ಗಂಭೀರ ಪ್ರಕರಣ ಹಾಗೂ ಮಧ್ಯದ ಪರವಾನಗಿ ಉಲ್ಲಂಘಿಸಿದ 305 ಪ್ರಕರಣಗಳು ಸೇರಿ ಒಟ್ಟು 1,238 ಪ್ರಕರಣ ದಾಖಲಿಸಿದೆ ಮತ್ತು 270 ವಿವಿಧ ಮಾದರಿಯ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
  • 6,72,96,733  ಮೌಲ್ಯದ  13.575 ಕೆ.ಜಿ ಬಂಗಾರ ವಶಕ್ಕೆ ಪಡೆಯಲಾಗಿದೆ.
  • 63,98,560 ಮೌಲ್ಯದ 88.763 ಕೆ.ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
  • 10,79,92,943 ಮೌಲ್ಯದ ಉಚಿತ ಕೊಡುಗೆ, ಉಡುಗೊರೆಗಳನ್ನ ವಶಕ್ಕೆ ಪಡೆಯಲಾಗಿದೆ.
  • ನಗದು, ಮಧ್ಯ, ಮಾದಕ ದ್ರವ್ಯ, ಉಡುಗೊರೆ, ಅಮೂಲ್ಯ ಲೋಹಗಳನ್ನ ವಶಪಡಿಸಿಕೊಂಡಿರುವ ಬಗ್ಗೆ ಪೊಲೀಸ್  ಇಲಾಖೆ  ಒಟ್ಟು 316 FIR ದಾಖಲಿಸಿದೆ.

ರಾಜಕೀಯ ಸೇರ್ತಾರಾ ನಟ RISHABH SHETTY? ಗೆಳೆಯ ನಟ ರಕ್ಷಿತ್ ಏನಂದ್ರು?

ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದ ವಿವರ:

  • ಒಟ್ಟು 31,486 ಶಸ್ತ್ರಾಸ್ತ್ರಗಳನ್ನ ಜಮೆ ಮಾಡಿಸಿಕೊಳ್ಳಲಾಗಿದೆ..
  • 10 ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ.
  • 7 ಶಸ್ತ್ರಾಸ್ತ್ರ ಪರವಾನಗಿ ರದ್ದು.
  • CRPC ಕಾಯ್ದೆಯಡಿ‌ 1,416 ಪ್ರಕರಣಗಳು ದಾಖಲು.
  • 1,869 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ.
  • 3554 ಜಾಮೀನು ರಹಿತ ವಾರೆಂಟ್ ಜಾರಿ.

ನಗದು, ಮಧ್ಯ, ಮಾದಕ ದ್ರವ್ಯ, ಉಡುಗೊರೆ, ಅಮೂಲ್ಯ ಲೋಹಗಳನ್ನ ವಶಪಡಿಸಿಕೊಂಡಿರುವ ಬಗ್ಗೆ ಪೊಲೀಸ್  ಇಲಾಖೆ  ಒಟ್ಟು 316 FIR ದಾಖಲಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!