ನಿಮ್ಮಪ್ಪ 2009ರಲ್ಲಿ ಸಿಎಂ ಆದ್ರೆ, ನಮ್ಮಪ್ಪ 1990ರಲ್ಲೇ ಸಿಎಂ ಆಗಿದ್ದರು. ಆದರೆ, ನಾವು ಚೋಟಾ ಸಹಿ ಹಾಕಿ ಜೈಲಿಗೆ ಕಳಿಸಲಿಲ್ಲ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಮಾ.20): ಶಿವಮೊಗ್ಗದಲ್ಲಿ ಸಂಸದರಾಗುವ ಮೊದಲು ರಾಘವೇಂದ್ರ ಏನು ಕಡಿದು ಕಟ್ಟೆಹಾಕಿ ಬಂದಿದ್ದಾರೆ. ನಿಮ್ಮ ಮಾಡಿದ ಭ್ರಷ್ಟಾಚಾರದ ಹಣದಿಂದ ಸಂಸದರಾಗಿದ್ದೀರಾ? ನಿಮ್ಮಪ್ಪ 2009ರಲ್ಲಿ ಮುಖ್ಯಮಂತ್ರಿಯಾಗಿದ್ದರೆ, ನಮ್ಮಪ್ಪ 1990ರಲ್ಲಿಯೇ ಮುಖ್ಯಮಂತ್ರಿ ಆಗಿದ್ದರು. ಆದರೂ ನಮ್ಮಪ್ಪ ಭ್ರಷ್ಟಾಚಾರದಿಂದ ಹಣ ಮಾಡಿಲ್ಲ. ನಮ್ಮಪ್ಪನನ್ನು ಯಾರೂ ಜೈಲಿಗೆ ಕಳುಹಿಸಲಿಲ್ಲ ಎಂದು ಸಂಸದ ಬಿ.ವೈ. ವಿಜಯೇಂದ್ರ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಶಿವಮೊಗ್ಗದ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಶಿವಮೊಗ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವ ರಾಜ್‌ಕುಮಾರ್ ಅವರ ಪರವಾಗಿ ಮಾತನಾಡಿದ ಅವರು, ಗೀತಾ ಶಿವರಾಜ್ ಕುಮಾರ್ ನನ್ನ ಅಕ್ಕ ಇರಬಹುದು. ಆದರೆ, ಮಧು ಬಂಗಾರಪ್ಪ ಗೀತಾ ಶಿವರಾಜ್ ಕುಮಾರ್ ಅವರಿಗೆ ಮೀಡಿಯೇಟರ್ ಅಲ್ಲ. ಬಂಗಾರಪ್ಪ ಅವರ ಧ್ವನಿಯಾಗಿ ಕೆಲಸ ಮಾಡ್ತಾರೆ. ಶಿವಮೊಗ್ಗದಲ್ಲಿ ಸಂಸದರಾಗುವ ಮೊದಲು ರಾಘವೇಂದ್ರ ಏನು ಕಡಿದು ಕಟ್ಟೆಹಾಕಿ ಬಂದಿದ್ದರು. ನಿಮ್ಮಪ್ಪ ಮಾಡಿದ ಭ್ರಷ್ಟಾಚಾರದ ಹಣದಿಂದ ಸಂಸದರಾಗಿದ್ದೀರಾ? ಎಂದು ಪ್ರಶ್ನೆ ಮಾಡಿದರು.
undefined
ಬೆಂಗಳೂರು: ಜೆ.ಪಿ.ನಗರದಲ್ಲಿ ಉಡುಪಿ ಉದ್ಯಮಿ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ರೋಚಕ ತಿರುವು!
ಮುಂದುವರೆದು, ನಿಮ್ಮಪ್ಪ 2009 ರಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ನಮ್ಮಪ್ಪ 1990 ರಲ್ಲೇ ಮುಖ್ಯಮಂತ್ರಿ ಆಗಿದ್ದರು. ನಾವು 1990ರಲ್ಲೇ ಮುಖ್ಯಮಂತ್ರಿ ಮಕ್ಕಳು. ನಮ್ಮಪ್ಪ ಭ್ರಷ್ಟಾಚಾರದ ಹಣ ಮಾಡಿಲ್ಲ. ನಾವು ಯಾರೂ ಕೂಡ ಚೋಟಾ ಸಹಿ ಹಾಕಿ ನಮ್ಮಪ್ಪನನ್ನು ಜೈಲಿಗೆ ಕಳುಹಿಸಲಿಲ್ಲ. ಬಂಗಾರಪ್ಪ ಸೋಲಿಲ್ಲದ ಸರದಾರ ಆಗಿದ್ದರು. ಹಲವು ಜನಪರ ಕಾರ್ಯಕ್ರಮ ಬಂಗಾರಪ್ಪ ಕೊಟ್ಟಿದ್ದರು. ಆದರೂ, 2009ರಲ್ಲಿ ನಮ್ಮ ತಂದೆ ಸೋಲು ಅನುಭವಿಸಿದರು. ಆ ಸೋಲು ನಮಗೆ ತುಂಬಾ ನೋವು ಆಯ್ತು ಎಂದು ನೋವು ಹಂಚಿಕೊಂಡರು.
ನಮ್ಮಕ್ಕ ಗೀತಾ ಶಿವರಾಜ್ ಕುಮಾರ್ 100ಕ್ಕೆ 100 ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗಿ ನಿಲ್ತಾರೆ. ರಾಘವೇಂದ್ರ ಕಳೆದ 15 ವರ್ಷದಲ್ಲಿ ಶರಾವತಿ ಸಂತ್ರಸ್ಥರ ಬಗ್ಗೆ ಮಾತನಾಡಲಿಲ್ಲ. ರಾಘವೇಂದ್ರ ಅವರ ಹೆಸರಿನಲ್ಲಿ ಗೆದ್ದಿಲ್ಲ. ರಾಜ್ಯದಲ್ಲಿ ಗೆದ್ದ ಎಲ್ಲಾ ಸಂಸದರು ನರೇಂದ್ರ ಮೋದಿ ಅವರ ಹೆಸರಿನಲ್ಲಿ ಗೆದ್ದಿದ್ದರು. ಈ ಬಾರಿ ನರೇಂದ್ರ ಮೋದಿ ಅವರ ಹೆಸರಿನಲ್ಲೇ ಸೋಲುತ್ತಾರೆ. ಯಾಕೆಂದರೆ ನರೇಂದ್ರ ಮೋದಿ ಅವರು ಸುಳ್ಳು ಹೇಳ್ತಾರೆ. ಸುಳ್ಳಿನಿಂದಾಗಿಯೇ ಬಿಜೆಪಿ ಸಂಸದರು ಸೋಲ್ತಾರೆ ಎಂದು ಟೀಕೆ ಮಾಡಿದರು.
ಜಾತಿ ಗಣತಿಗಾಗಿ ಯಾರೂ ನನ್ನ ಮನೆಗೆ ಬಂದಿಲ್ಲ: ಸಚಿವ ಈಶ್ವರ್ ಖಂಡ್ರೆ
ಪತ್ನಿ ಗೀತಾ ಶಿವರಾಜ್ ಕುಮಾರ್ ಪರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ನಟ ಶಿವ ರಾಜ್‌ಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಥ್ಯಾಂಕ್ಸ್ ಹೇಳ್ತೇನೆ. ನನ್ನ ಪತ್ನಿಗೆ ಟಿಕೇಟ್ ಕೊಟ್ಟಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳ್ತೇನೆ. ನಮಗೂ ಕನಸು ಇತ್ತು. 2014ರಲ್ಲಿ ಸೋಲು ಅನುಭವಿಸಿದ್ದೆವು. ಜೀವನದಲ್ಲಿ ಸೋಲು-ಗೆಲುವು ಸಾಮಾನ್ಯ. ಅದನ್ನೆಲ್ಲಾ ಸ್ವೀಕಾರ ಮಾಡಬೇಕು. ಜನರ ಮನೆ ಬಳಿ ಹೋಗಿ ಮತ ಕೇಳಿದ್ದೆವು. ಆಗ ಒಂದು ಭಾಂಧವ್ಯ ಬೆಳೆಯುತ್ತದೆ. ನನ್ನ ಹೆಂಡ್ತಿ ಮಗಳಾಗಿ, ತಾಯಿಯಾಗಿ, ಪತ್ನಿಯಾಗಿ ಕೆಲಸ ಮಾಡಿರುವ ಅನುಭವ ಇದೆ. ಜೀವನದಲ್ಲಿ ಸಾಕಷ್ಟು ನೋಡಿದ್ದಾಳೆ. ಇವತ್ತು ನಾನು ಇಷ್ಟು ಸ್ಟ್ರಾಂಗ್ ಆಗಿದ್ದೇನೆ ಅಂದ್ರೆ ಅವಳೇ ಕಾರಣ. ಈ ಬಾರಿ ಗೀತಾ ಅವರನ್ನು ಗೆಲ್ಲಿಸುವ ಭರವಸೆ ಇದೆ. ನಾನು ಚುನಾವಣಾ ಪ್ರಚಾರಕ್ಕೆ ಬರುತ್ತಾ ಇರುತ್ತೇನೆ. ಒಂದು ಬಾರಿ ಅವಕಾಶ ಕೊಡಿ. ಅವಳು ಕೆಲಸ ಮಾಡ್ತಾಳೋ ಇಲ್ವಾ ನೋಡಿ. ಆಮೇಲೆ ನಾನು ಏನು ಹೇಳಿದ್ದೇನೆ ಎಂಬುದನ್ನು ನೋಡಿ ಎಂದು ತಿಳಿಸಿದರು.