ತ್ಯಾಜ್ಯ ನಿರ್ವಹಣೆ ಅಧ್ಯಯನಕ್ಕೆ ಚೆನ್ನೈಗೆ ಡಿಕೆಶಿ ಭೇಟಿ, ಸ್ಟಾಲಿನ್ ಸರ್ಕಾರ ಹಾಡಿಹೊಗಳಿದೆ ಡಿಸಿಎಂ!

By Chethan KumarFirst Published Sep 3, 2024, 4:27 PM IST
Highlights

ತ್ಯಾಜ್ಯ ನಿರ್ವಹಣೆ ಅಧ್ಯಯನಕ್ಕೆ ಡಿಕೆ ಶಿವಕುಮಾರ್ ಚೆನ್ನೈಗೆ ಬೇಟಿ ನೀಡಿದ್ದಾರೆ. ಈ ವೇಳೆ ಚೆನ್ನೈ ನಗರದಲ್ಲಿನ ತ್ಯಾಜ್ಯ ನಿರ್ವಹಣೆಗೆ ಡಿಕೆಶಿ ಮನಸೋತಿದ್ದಾರೆ. ಇದೀಗ ಚೆನ್ನೈ ಮಾಡೆಲ್ ಬೆಂಗಳೂರಿನಲ್ಲೂ ಆರಂಭಗೊಳ್ಳು ಸೂಚನೆ ನೀಡಿದ್ದಾರೆ.
 

ಚೆನ್ನೈ(ಸೆ.03) ಬೆಂಗಳೂರಿನಲ್ಲ ತ್ಯಾಜ್ಯ ನಿರ್ವಹಣೆ ಅತೀ ದೊಡ್ಡ ಸಮಸ್ಯೆ. ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತದೆ. ಕಸ ವಿಲೇವಾರಿ ಮಾಡಿದರೂ  ಪ್ರತಿ ದಿನ ಸಮಸ್ಯೆ ತಪ್ಪಿದ್ದಲ್ಲ. ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡರೂ ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಸಂಗ್ರಹಿಸುವ ಕಸವನ್ನು ಹಾಕಲು ಗುರುತಿಸಿದ ಸ್ಥಳಗಳ ಸುತ್ತ ಮುತ್ತ ವಾಸಿಸಲು ಯೋಗ್ಯವಲ್ಲ. ಇದೀಗ ಕೋಲಾರಕ್ಕೆ ಕಸ ರವಾನಿಸಲು ನಿರ್ಧರಿಸಲಾಗಿದೆ. ಇದರ ನಡುವೆ ಬೆಟ್ಟದಂತೆ ಬೆಳೆಯುತ್ತಿರುವ ತ್ಯಾಜ್ಯಕ್ಕೆ ಮುಕ್ತಿ ನೀಡಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚೆನ್ನೈಗೆ ತೆರಳಿದ್ದಾರೆ. ಚೆನ್ನೈ ತ್ಯಾಜ್ಯ ನಿರ್ವಹಣೆ ಅಧ್ಯಯನ ಮಾಡಿದ್ದಾರೆ. ಚೆನ್ನೈ ಮಾಡೆಲ್ ಮೆಚ್ಚಿಕೊಂಡಿರುವ ಡಿಕೆ ಶಿವಕುಮಾರ್ , ತಮಿಳುನಾಡು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಡಿಕೆ ಶಿವಕುಮಾರ್ ಹಾಗೂ 15 ಅಧಿಕಾರಿಗಳು ಚೆನ್ನೈಗೆ ತೆರಳಿ ತಾಜ್ಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಚೆನ್ನೈ ನಗರದಲ್ಲಿ ಸಂಗ್ರಹಿಸುವ ತ್ಯಾಜ್ಯದಿಂದ ಸಿಎನ್‌ಜಿ ಅನಿಲ ಉತ್ಪಾದಿಸಲಾಗುತ್ತಿದೆ. ತಾಜ್ಯವನ್ನು ಸಂಗ್ರಹಿಸಿ ಅದರಿಂದ ಸಿಎನ್‌ಜಿ ಅನಿಲ್ ಉತ್ಪಾದನೆ ಸರ್ಕಾರಕ್ಕೆ ಲಾಭದಾಯಕವಾಗಿದೆ. ಕಸ ವೇಲೇವಾರಿಗೆ ತಗುಲುವ ಆರ್ಥಿಕ ಹೊರೆಯನ್ನು ಸಿಎನ್‌ಜಿ ಅನಿಲದ ಮೂಲಕ ನಿರ್ವಹಿಸಲು ಸಾಧ್ಯವಿದೆ ಅನ್ನೋದು ಚೆನ್ನೈ ತ್ಯಾಜ್ಯ ನಿರ್ವಹಣೆ ಸಾರಾಂಶವಾಗಿದೆ. ಇದೀಗ ಡಿಕೆ ಶಿವಕುಮಾರ್ ಈ ಚೆನ್ನೈ ಮಾಡೆಲ್ ಅಧ್ಯಯನ ಮಾಡಿದ್ದಾರೆ.

Latest Videos

ಸ್ಕೈಡೆಕ್‌ ನಿರ್ಮಾಣ, ಸುರಂಗ ರಸ್ತೆ ಸೇರಿದಂತೆ ಬೆಂಗಳೂರು ಅಭಿವೃದ್ಧಿ ವಿಚಾರಗಳ ಬಗ್ಗೆ ಸಿಎಂ ಸಭೆ!

ಚೆನ್ನೈನಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಅಧ್ಯಯನ ನಡೆಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ಡಿಕೆ ಶಿವಕುಮಾರ್, ಚೆನ್ನೈ ಮಾಡೆಲ್ ಪರಿಶೀಲನೆ ಹಾಗೂ ಅಧ್ಯಯನ ಉಪಯುಕ್ತವಾಗಿದೆ. ತ್ಯಾಜ್ಯದಿಂದ ಸಿಎನ್‌ಜಿ ಉತ್ಪಾದಿಸುವ ಚೆನ್ನೈ ಮಾಡೆಲ್ ಮಾದರಿಯಾಗಿದೆ. ಚೆನ್ನೈ ನಗರ ತಾಜ್ಯದಿಂದ ಮುಕ್ತವಾಗಿದೆ. ಶುಚಿತ್ವಕ್ಕೆ ಮಹತ್ವ ನೀಡಲಾಗಿದೆ. ಹೊಸ ಉಪಕ್ರಮದ ಮೂಲಕ ಚೆನ್ನೈ ನಗರದ ಶುಚಿತ್ವ, ಆರ್ಥಿಕ ಹೊರೆಯನ್ನು ತಗ್ಗಿಸಿರುವ ತಮಿಳುನಾಡು ಸರ್ಕಾರ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 

 

|
Karnataka Deputy CM DK Shivakumar says, "I came to Chennai with a team of more than 15 officials to inspect the solid waste management and see how the gas is produced, CNG is produced... We are very impressed with the cleaning facility running in Chennai. So I want… pic.twitter.com/WOO6Nc5Qfn

— We Dravidians (@WeDravidians)

 

ತ್ಯಾಜ್ಯ ನಿರ್ವಹಣೆಯಲ್ಲಿ ಕಲಿಯಲು ತುಂಬಾ ಇದೆ. ಈ ನಿಟ್ಟಿನಲ್ಲಿ ಚೆನ್ನೈಗೆ ಭೇಟಿ ನೀಡಿದ್ದೇನೆ. ಚೆನ್ನೈ ಮಾಡೆಲ್ ಅಧ್ಯಯನ ಮಾಡಿದ್ದೇನೆ. ಅಧಿಕಾರಿಗಳ ತಂಡದೊಂದಿಗೆ ಆಗಮಿಸಿ ತ್ಯಾಜ್ಯ ನಿರ್ವಹಣೆಯಲ್ಲಿರುವ ಕೆಲ ಪ್ರಮುಖ ವಿಚಾರಗಳನ್ನು ಇಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಹೊಸ ಮಾದರಿ ಹೆಚ್ಚು ಉಪಯುಕ್ತವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Kodagu: ಮಂಜಿನ ನಗರಿಯಲ್ಲಿ ಸಂಗ್ರಹವಾಗುವ ಕೊಳೆತ ಕಸದಿಂದ ಉತ್ಪತ್ತಿಯಾಗುತ್ತೆ ಸಾವಯವ ಗೊಬ್ಬರ!
 

click me!