
ಬೆಂಗಳೂರು, (ಅ.22): ಭಾರತದಲ್ಲಿ 100 ಕೋಟಿ ಕೋವಿಡ್ ಲಸಿಕೆ (Corona Vaccine) ನೀಡಿಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ, ದೇಶವನ್ನು ಉದ್ದೇಶಿಸಿ ಇಂದು (ಅ.೨೨) ಪ್ರಧಾನಿ ನರೇಂದ್ರ ಮೋದಿ (Narendra Moid) ಭಾಷಣ ಮಾಡಿದರು.
ಇತ್ತ ಬೆಂಗಳೂರು ಬಿಜೆಪಿ (Bengaluur BJP) ಘಟಕದಿಂದ ಸಚಿವ ಅಶ್ವಥ್ ನಾರಾಯಣ (Dr CN Ashwath Narayan) ಸಹ ಸುದ್ದಿಗೋಷ್ಠಿ ನಡೆಸಿದ್ದು, 100 ಕೋಟಿ ಲಸಿಕೆ ನೀಡಿರುವ ಬಗ್ಗೆ ಮಾತನಾಡಿದರು.
Narendra Modi Speech Highlights: ಭಾರತದ ಶಕ್ತಿಗೆ ವಿಶ್ವವೇ ನಿಬ್ಬೆರಗು: ಮೋದಿ ಮಾತು
ನಮ್ಮ ದೇಶದ ಸಾಧನೆ ಹೆಮ್ಮೆ ಮತ್ತು ಸಂತೋಷ ಪಡವಂತ ವಿಷಯ. ಜನರ ಜೀವ ಉಳಿಸುವ ಸಂಜೀವಿನ ಲಸಿಕೆ. ಆ ಲಸಿಕೆ ಭಾರತದ 100 ಕೋಟಿಲಸಿಕೆಯನ್ನ ನೀಡಲಾಗಿದೆ. ಬೇರೆ ದೇಶಗಳಿಗಿಂತಲೂ ಉತ್ತಮ ಸಾಧನೆಯನ್ನ ಭಾರತ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಸಾಧನೆ ಮಾಡಿದೆ ಎಂದರು.
ಬೇರೆ ಬೇರೆ ದೇಶಗಳಲ್ಲಿ 20% ಇನ್ನೂ ಲಸಿಕೆ ನೀಡಿಲ್ಲ. ಭಾರತದಲ್ಲಿ ನೂರು ಕೋಟಿ ಲಸಿಕೆ ನೀಡಿದೆ. ಇನ್ನೂ ನಮ್ಮಲ್ಲಿ ಇನ್ನೂ ಅನೇಕರು ಲಸಿಕೆ ತಗೆದುಕೊಂಡಿಲ್ಲ . ಎಲ್ಲರೂ ಲಸಿಕೆ ತೆಗದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.
100 ಕೋಟಿ ಡೋಸ್ ಸಂಭ್ರಮಕ್ಕೆ ಲೇವಡಿ ಮಾಡಿದ ಸಿದ್ದರಾಮಯ್ಯಗೆ ಅಶೋಕ್ ತಿರುಗೇಟು
ಯಾವುದೇ ತಾರತಮ್ಯವಿಲ್ಲದೇ ಭಾರತದಲ್ಲಿ ಲಸಿಕೆಯನ್ನನೀಡಲಾಗಿದೆ. ಇಡೀ ವಿಶ್ವವೇ ಭಾರತದ ನಿರ್ವಹಣೆ ಮಾಡಿದ್ದನ್ನ ಗಮನಸಿದೆ. ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಹಾಗೇ ಭಾರತ ಮಾಡಿದೆ. ಜೀವದ ಹಂಗು ತೊರೆದು ವೈದ್ಯರು ವೈದ್ಯಕೀಯ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಅವರ ಕೆಲಸಕ್ಕೆ ನಾವು ಅಭಿನಂದನೆ ಸಲ್ಲಿಸಬೇಕಿದೆ ಎಂದರು.
ಸಿದ್ದರಾಮಯ್ಯ ಟೀಕೆಗೆ ತಿರುಗೇಟು
100 ಕೋಟಿ ಲಸಿಕೆ ನೀಡಿಕೆ ಸಂಭ್ರಮಕ್ಕೆ ಲೇವಡಿ ಮಾಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದರು.
ಲಸಿಕೆ ವಿಚಾರದಲ್ಲಿ ಟೀಕೆ ಮಾಡಬಾರದು. ಮೊದಲು ಲಸಿಕೆ ತಗೊಬಾರದು ಅಂತ ಕಾಂಗ್ರೆಸ್‌ನವರು ಹೇಳಿದ್ದರು. ಈಗ 100 ಕೋಟಿ ಲಸಿಕೆ ಕೊಟ್ಟಿರುವುದು ಸಣ್ಣ ಸಾಧನೆಯಲ್ಲ. ಇಡೀ ವಿಶ್ವವೇ ಬೆಚ್ಚೆ ಬೆರಗಾಗಿದೆ. ಇಂತಹ ಸಮಯದಲ್ಲಿ ಎಲ್ಲರೂ ಒಗ್ಗೂಡಬೇಕು. ಆದರೆ ಟೀಕೆ ಮಾಡಬಾರದು. ಸಿದ್ದರಾಮಯ್ಯ ವಿಶ್ವಾಸಮೂಡಿಸುವ ಕೆಲಸ ಮಾಡಬೇಕು. ನಾಯಕರಾದವರಿಗೆ ಮತ್ಸರ ಗುಣಗಳಿಬಾರದು. ಸಿದ್ದರಾಮಯ್ಯಗೆ ಕೀಳುಮಟ್ಟದ ರಾಜಕಾರಣಮಾಡುವುದು ಅವರ ಯೋಗ್ಯತೆಗೆ ತರವಲ್ಲ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ