ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು ತಾಯಿ ಗಂ**ರು-ಯತ್ನಾಳ್; ಸೂ**ಮಗ, ಬೋ** ಮಗ- ರಾಯರೆಡ್ಡಿ

By Sathish Kumar KH  |  First Published Feb 28, 2024, 1:04 PM IST

ಪಾಕಿಸ್ತಾನ ಪರ ಘೋಷಣೆ ಮಾಡಿದವರನ್ನು ತಾಯಿ ಗಂ**ರು ಎಂದರೆ, ಬಸವರಾಜ ರಾಯರೆಡ್ಡಿ ಅವರು ಹಾಗಾದರೆ ಸೂ** ಮಗ - ಬೋ** ಮಗ ಅಂತ ಹೇಳಬಹುದಾ ಎಂದು ಕೇಳಿದರು.


ಬೆಂಗಳೂರು (ಫೆ.28): ರಾಜ್ಯಸಭಾ ಚುನಾವಣೆ ಮುಕ್ತಾಯದ ನಂತರ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಮಾಡಿದವರನ್ನು ತಾಯಿ ಗಂ**ರು ಎಂದರೆ, ಬಸವರಾಜ ರಾಯರೆಡ್ಡಿ ಅವರು ಹಾಗಾದರೆ ಸೂ** ಮಗ - ಬೋ** ಮಗ ಅಂತ ಹೇಳಬಹುದಾ ಎಂದು ಕೇಳಿದರು.

ರಾಜ್ಯಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲಿಯೇ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್ ಹುಸೇನ್‌ ಗೆಲುವು ಸಾಧಿಸಿದ ಸಂಭ್ರಮದಲ್ಲಿದ್ದರು. ಈ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ. ಈ ವಿಚಾರವನ್ನು ಬುಧವಾರ ವಿಧಾನಸಭೆಯಲ್ಲಿ ಚರ್ಚೆಗೆ ತಂದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು 'ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಗೂಗಿದವರು ತಾಯಿ ಗಂ**ರು ಎಂದು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ಮಾಡಿದಾಗ ಸ್ಪೀಕರ್ ಅವರು ಪಾಕಿಸ್ತಾನದ ವಿರುದ್ಧ ಏನೇ ಪದ ಪ್ರಯೋಗ ಮಾಡಲು ನಿಮಗೆ ಅನುಮತಿ ಇದೆ ಎಂದು ಅನುಮತಿ ಕೊಟ್ಟರು. ಇದರ ಬೆನ್ನಲ್ಲಿಯೇ ಶಾಸಕ ಬಸವರಾಜ ರಾಯರೆಡ್ಡಿ ಅವರು ಹಾಗಾದರೆ ಸೂ** ಮಗ - ಬೋ** ಮಗ ಅಂತ ಹೇಳಬಹುದಾ ಎಂದು ಶಾಸಕ ಬಸವರಾಜ ರಾಯರೆಡ್ಡಿ ಪ್ರಶ್ನಿಸಿದರು.

Tap to resize

Latest Videos

ಯಾವ ಮಗನೂ ಹುಟ್ಟಿಲ್ಲ ನನ್ನ ಹೆದರಿಸೋದಕ್ಕೆ, 3 ವರ್ಷದಲ್ಲಿ ಇವರ ಆಟಗಳನ್ನೆಲ್ಲ ನೋಡಿದ್ದೇನೆ: ಸೋಮಶೇಖರ್

ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡುತ್ತಾ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರ ಬಗ್ಗೆ ಮಾತನಾಡುತ್ತಾ, ಇಂತಹ ಘಟನೆ ಯಾರೇ ಮಾಡಿದರೂ ಕ್ರಮ ಆಗಲಿ. ಅಂತಹವನು ತಾಯಿ ಗಂ**. ಅಂದರೆ ಪಾಕಿಸ್ತಾನ ಪರವಾಗಿ ಘೋಷಣೆ ಹಾಕಿದವನು ತಾಯಿ ಗಂ**ರು.. ದೇಶದ ಅನ್ನ ತಿಂದು ಈ ರೀತಿಯ ಹೇಳಿಕೆ ಕೊಟ್ಟವರು ತಾಯಿ ಗಂ**ರು ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಶಾಸಕ ಯತ್ನಾಳ್ ಅವರ ಪದ ಪ್ರಯೋಗಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ತಿರುಗೇಟು ನೀಡಿದ ಯತ್ನಾಳ್ 'ಅವರನ್ನು ಮುತ್ತೈದೆ ಮಕ್ಕಳು ಅನ್ನಬೇಕಾ..? ಬ್ರದರ್ ಅನ್ನಬೇಕಾ' ಎಂದು ಪ್ರಶ್ನೆ ಮಾಡಿದರು.
ಮುಂದುವರೆದು 'ಅವರು ನಿಮಗೆ ವೋಟ್ ಹಾಕೋದು. ಈ ಹಿಂದೆ ಸ್ವಲ್ಪ ಕುಮಾರಣ್ಣನಿಗೆ ಹಾಕ್ತಾ ಇದ್ದರು.. ಈಗ ಅವರು (ಕುಮಾರಣ್ಣ) ನಮ್ಮ ಜೊತೆಗೆ ಬರ್ತಿದ್ದ ಹಾಗೆ, ಎಲ್ಲಾ ಓಟುಗಳು ನಿಮಗೆ ಬರ್ತಿದೆ' ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕಿಡಿಕಾರಿದರು.

ಆಗ ಮಧ್ಯಸ್ಥಿಕೆವಹಿಸಿ ಮಾತನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು, ಪಾಕಿಸ್ತಾನ ವಿರುದ್ಧ ಏನೇ ಪದ ಪ್ರಯೋಗ ಮಾಡಲು ನಿಮಗೆ ಅನುಮತಿ ಇದೆ ಎಂದು ಹೇಳಿದರು.
ಆಗ ಯತ್ನಾಳ್ ಅವರು.. 'ಅಲ್ಲಲ್ಲಿ ನಿಮ್ಮಂತ ದೇಶಪ್ರೇಮಿಗಳು ಇದ್ದಾರೆ' ಎಂದರು.
ಇದರ ನಡುವೆ ಮಾತನಾಡಿದ ಶಾಸಕ ರಾಯರೆಡ್ಡಿ ಅವರು 'ಹಾಗಾದರೆ ಸೂ** ಮಗ - ಬೋ** ಮಗ ಅಂತ ಹೇಳಬಹುದಾ'..  ಸದನದಲ್ಲಿ ಇಂತಹ ಪದ ಪ್ರಯೋಗ ಮಾಡಬೇಕು ಅನ್ನೋ ಸ್ಪಷ್ಟನೆ ಇರಬೇಕು ಎಂದರು. 

ಪರಿಷತ್‌ ಗದ್ದಲ ತಾರಕ್ಕಕ್ಕೆ, ರವಿಕುಮಾರ್-ಜಬ್ಬರ ನಡುವಿನ ಗಲಾಟೆ ನಿಲ್ಲಿಸಲು ಮಾರ್ಷಲ್‌ಗಳ ಎಂಟ್ರಿ!

ಈ ಘೋಷಣೆ ಕೇವಲ ಮೊದಲನೆಯ ಮಹಡಿಯಲ್ಲಿ ಆಗಿಲ್ಲ. ಕೆಳ ಮಹಡಿಯಲ್ಲಿ ಸಹ ಆಗಿದೆ. ಯಾವುದೇ ಒಂದು ಸಮೂದಾಯದವರು ಮಾತ್ರ ಬಂದಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಒಂದು ನಿರ್ಣಯ ಮಾಡಬೇಕು. ಇಂತಹ ಘೋಷಣೆ ಹಾಕೋದನ್ನು ಸಹಿಸಬಾರದು. ನೀವು ಹೀಗೆ ಮಾಡಿಯೇ ಲೋಕಸಭಾ ಚುನಾವಣೆ ಬಳಿಕ ಪ್ರತಿಪಕ್ಷ ನಾಯಕ ಸ್ಥಾನ ಸಿಕ್ಕಿಲ್ಲ. ಮುಂದೆ ಸಹ ಕಾಂಗ್ರೆಸ್ ನಾಮಾವಶೇಷ ಆಗಲಿದೆ ಎಂದು ಶಾಸಕ ಯತ್ನಾಳ್ ಆಗ್ರಹಿಸಿದರು.

click me!