ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಿಂದ ಬೇಸತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 17 ಕ್ಷೇತ್ರಗಳ ಪೈಕಿ 15ಕ್ಕೆ ಉಪ ಚುನಾವಣೆ ನಡೆದಿತ್ತು. ಅರ್ಹತೆ ಹಾಗೂ ಅನರ್ಹತೆ ನಡುವೆ ನಡೆದ ಪೈಪೋಟಿಯಲ್ಲಿಯೇ ಅನರ್ಹ ಶಾಸಕರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಕಾಂಗ್ರೆಸ್ ಅಂತೂ ಇಂತು ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರೆ, ಜೆಡಿಎಸ್ ಸಾಧಿಸಿದ್ದು ಶೂನ್ಯ.

04:53 PM (IST) Dec 09
ಉಪ ಚುನಾವಣೆಯಲ್ಲಿ ಗೆದ್ದವರಿಗೆಲ್ಲ ಮಂತ್ರಿ ಸ್ಥಾನ ಪಕ್ಕಾ. ವಿರೋಧ ಪಕ್ಷಗಳ ಆರೋಪದ ವಿಶ್ಲೇಷಣೆಯ ಮಾಡುವ ಅಗತ್ಯವಿಲ್ಲ, ನಮ್ಮ ಜಿಲ್ಲೆಗೆ ಇನ್ನೊಂದು ಡಿಸಿಎಮ್ ಸ್ಥಾನ ಕೊಟ್ಟರೆ ಸಂತೋಷದಿಂದ ಸ್ವಾಗತಿಸುತ್ತೇವೆ.
- ಲಕ್ಷ್ಣಣ ಸವದಿ, ಡಿಸಿಎಂ
04:39 PM (IST) Dec 09
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
04:37 PM (IST) Dec 09
ಪರೋಕ್ಷವಾಗಿ ಬಿಜೆಪಿ ಬೆಂಬಲಿಸುವ ಚಾಮುಂಡೇಶ್ವರಿ ಶಾಸಕ ಜಿಟಿಡಿ ಉಪು ಚುನಾವಣೆ ಫಲಿತಾಂಶದ ಬಗ್ಗೇ ಹೇಳಿದ್ದಿಷ್ಟು...
04:34 PM (IST) Dec 09
ಕೈ-ಜೆಡಿಎಸ್ ಮೈತ್ರಿ ಸರಕಾರದಿಂದ ಬೇಸತ್ತ ಜನರು ಇದೀಗ ಬಿಜೆಪಿಗೆ ಬಹುಮತ ನೀಡಿದೆ.
ಬಿಜೆಪಿ ರಾಜೀವ್ ಚಂದ್ರಶೇಕರ್ ಹೇಳಿದ್ದೇನು?
03:59 PM (IST) Dec 09
ಇವರು ಹೇಳಿದ್ದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ.
03:48 PM (IST) Dec 09
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅತೀವ ಕಳಪೆ ಪ್ರದರ್ಶನ ತೋರಿದ್ದು, ಶಾಸಕಾಂಗ ಪಕ್ಷದ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
03:33 PM (IST) Dec 09
ಉಪ ಚುನಾವಣೆಗೂ ಮೊದಲೇ ಬಿಜೆಪಿಯೊಂದಿಗೆ ಕೈ ಜೋಡಿಸುವ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹೀಗ್ಯಾಕೆ ಟ್ವೀಟ್ ಮಾಡಿದರು?
03:14 PM (IST) Dec 09
ಶರತ್ ಬೆಂಬಲಿಗ ರಿಯಾಜ್ ಬೇಗ್ (50) ಸಾವನ್ನಪ್ಪಿದ್ದಾನೆ. ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಸಂಭ್ರಮಾಚರಣೆ ವೇಳೆ ಹೃದಯಾಘಾತ ಸಂಭವಿಸಿ ಈತ ಮೃತಪಟ್ಟಿದ್ದಾನೆ.
02:20 PM (IST) Dec 09
ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿದೆ. ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಿಷ್ಟು...
ಮಂಡ್ಯದಲ್ಲಿ ಖಾತೆ ತೆರೆದಿದ್ದೇ ಬಿಜೆಪಿಯ ದೊಡ್ಡ ಸಾಧನೆ
01:43 PM (IST) Dec 09
ಉಪ ಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12ರಲ್ಲಿ ಅನರ್ಹರು ಎಂದೆನಸಿಕೊಂಡ ಶಾಕರು ಗೆದ್ದಿದ್ದಾರೆ. ಇದಕ್ಕೇನು ಕಾರಣ.
01:35 PM (IST) Dec 09
2018ರ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಈ ಉಪ ಚುನಾವಣೆಯಲ್ಲಿ ಒಂದೂ ಕ್ಷೇತ್ರವನ್ನೂ ಗೆದ್ದಿಲ್ಲ.
01:29 PM (IST) Dec 09
ಕಾಂಗ್ರೆಸ್ ಭದ್ರಕೋಟೆ ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಜಯ ಸಾಧಿಸಿದ್ದಾರೆ. ಅವರು ಹೇಳಿದ್ದೇನು?
ನಮ್ಮ ಗೆಲುವಿಗೆ ಕೈ ನಾಯಕರ ವರ್ತನೆಯೇ ಕಾರಣ
01:21 PM (IST) Dec 09
ಶಿವಮೊಗ್ಗ: ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಇದೊಂದು ಐತಿಹಾಸಿಕ ಜಯ. ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಕುತಂತ್ರದಿಂದ ಬಿಎಸ್ವೈ ಅವರನ್ನು ಅಧಿಕಾರದಿಂದ ವಂಚಿತರನ್ನಾಗಿಸಿದ್ದಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ದೂಳಿಫಟವಾಗಿದೆ. ಜೆಡಿಎಸ್ ಜೀರೋ ಆಗಿದೆ. ಇವರಿಬ್ಬರ ಕುತಂತ್ರಕ್ಕೆ ಜನತೆ ತಕ್ಕ ಫಲಿತಾಂಶದ ಉತ್ತರ ನೀಡಿದೆ. ಚುನಾವಣಾ ಫಲಿತಾಂಶದ ಮೂಲಕ ಬಿಜೆಪಿ ಪಕ್ಷ ಮತ್ತು ಬಿಎಸ್ ವೈ ಪ್ರಭಾವಳಿಗೆ ಉತ್ತರ ಸಿಕ್ಕಿದೆ, ಎಂದಿದ್ದಾರೆ ಎಂಎಲ್‌ಸಿ ಆಯನೂರು ಮಂಜುನಾಥ್.
01:06 PM (IST) Dec 09
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾದಾಗಲೇ ವಿರೋಧಿಸಿದ್ದ ಕೈ ಮುಖಂಡ ಜನಾರ್ದನ ಪೂಜಾರಿ ರಿಯಾಕ್ಟ್ ಮಾಡಿದ್ದು ಹೀಗೆ...
01:00 PM (IST) Dec 09
2018ರ ಚುನಾವಣೆಯಲ್ಲಿ ಸೋತರೂ ಡಿಸಿಎಂ ಸ್ಥಾನ ಗಿಟ್ಟಿಸಿಕೊಂಡವರು ಬಿಜೆಪಿ ಮುಖಂಡ ಲಕ್ಷಣ ಸವದಿ. ಇದೀಗ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆದ್ದಿರುವುದಕ್ಕೆ ಸವದಿ ಹೇಳಿದ್ದಿಷ್ಟು...
12:38 PM (IST) Dec 09
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಹೀರೇಕೆರೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಅಲ್ಲದೇ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕೆಜೆವಿಪಿ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಇದೀಗ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರಿಂದ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾಗಿದೆ.
ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಹೇಳಿದ್ದಿಷ್ಟು...
ಅನರ್ಹತೆಯ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ತೀರ್ಪು ಸಿಕ್ಕಿದೆ. ಎರಡೂ ಕ್ಷೇತ್ರಗಳ ಗೆಲುವಿನ ಮೂಲಕ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾದಂತಾಯಿತು. ಇನ್ನು ರಾಜ್ಯ ಮತ್ತು ದೇಶ ಕೂಡ ಕಾಂಗ್ರೆಸ್ ಮುಕ್ತವಾಗಲಿದೆ. ಬಣಕಾರ ಮತ್ತು ನಾನು ಒಂದಾದ ಪರಿಣಾಮ ಗೆಲುವು ಸುಲಭವಾಯಿತು. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ. ಹಣ, ಅಧಿಕಾರ ದುರುಪಯೋಗದ ಕುರಿತ ಬನ್ನಿಕೋಡ ಆರೋಪಕ್ಕೆ ಉತ್ತರಿಸಿದ ಬಿಸಿಪಿ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ತಿರುಗೇಟು ನೀಡಿದರು.
12:32 PM (IST) Dec 09
ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳನ್ನು ಹೊರತುಪಡಿಸಿ, ಬಿಜೆಪಿ ಎಂದಿಗೂ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಗೆದ್ದಿರಲೇ ಇಲ್ಲ. ಆದರೆ, ಅಲ್ಲಿಯೂ ಇತಿಹಾಸ ಸೃಷ್ಟಿಸಿದೆ.
ಗೋಪಾಲಯ್ಯ ಗೆಲುವಿಗೆ ಕಾರಣವಾಗಿದ್ದೇನು?
12:30 PM (IST) Dec 09
ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?
ಸತ್ಯ ಬಿಟ್ಟ ಸಿಎಂ ಪುತ್ರ
12:17 PM (IST) Dec 09
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರೂರಾದ ಬೂಕನಕೆರೆ ಇರೋ ಮಂಡ್ಯದ ಕೆ.ಆರ್.ಪೇಟೆ ವಿಧಾನಸಬಾ ಕ್ಷೇತ್ರದಲ್ಲಿಯೂ ಇದೇ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದೆ. ಅದಕ್ಕೆ ಡಿಸಿಎಂ ಅಶ್ವಥ ನಾರಾಯಣ್ ಹೇಳಿದ್ದಿಷ್ಟು.
12:14 PM (IST) Dec 09
ಉಪ ಚುನಾವಣೆಯಲ್ಲಿ ಮೈಸೂರಿನ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಶಾಸಕ ವಿಶ್ವನಾಥ್ ರಾಜೀನಾಮೆ ನೀಡಿ, ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ, ಜನರ ವಿಶ್ವಾಸ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಸಚಿವ ಸಿ.ಟಿ.ರವಿ ಹೇಳಿದ್ದಿಷ್ಟು...
12:11 PM (IST) Dec 09
2018ರ ವಿಧಾನಸಭಾ ಚುನಾವಣೆ ನಂತರವೇ ಬಿಜೆಪಿಯತ್ತ ಒಲವು ತೋರಿದ್ದ ಆನಂದ್ ಸಿಂಗ್, ಕಾಂಗ್ರೆಸ್-ಜೆಡಿಎಸ್ ಸರಕಾರದ ವಿರುದ್ಧ ಬಂಡಾಯವೆದ್ದು ಮೊದಲೇ ರಾಜೀನಾಮೆ ನೀಡಿದವರು. ಆದರೂ ಅವರಿಗೆ ಅನರ್ಹ ಸಾಸಕ ಪಟ್ಟ ತಪ್ಪಿರಲಿಲ್ಲ. ಇದೀಗ ಬಿಜೆಪಿಯಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲವು ಸಾಧಿಸಿದ್ದಾರೆ. ಗೆಲುವಿನ ಖುಷಿಯಲ್ಲಿ ದೇವರನ್ನು ಸ್ಮರಿಸಿದ್ದು ಹೀಗೆ.
12:00 PM (IST) Dec 09
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವಿನ ನಗೆ ಬೀರುತ್ತಿದ್ದು, ಕಾಂಗ್ರೆಸ್ ಭದ್ರ ಕೋಟೆಯನ್ನು ಭೇದಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಬಿಜೆಪಿ ಅಭ್ಯರ್ಥಿ ಗೆಲುವನ್ನು ಕಾರ್ಯಕರ್ತರು ಸಂಭ್ರಮಿಸಿದ್ದು ಹೀಗೆ..
11:55 AM (IST) Dec 09
16ನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಜವರಾಯಿಗೌಡ - 88,924
ಎಸ್.ಟಿ.ಸೋಮಶೇಖರ್ - 1,5,694
ಪಿ.ನಾಗರಾಜ್ - 10,461
ನೋಟಾ - 2,010
16,770ಮತಗಳ ಅಂತರದಿಂದ ಸೋಮಶೇಖರ್ ಮುನ್ನಡೆ
11:53 AM (IST) Dec 09
ಉಪು ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ನಗೆಯ ಗೆಲವು ಬೀರುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ತಂದೆಯ ಆಶೀರ್ವಾದ ಪಡೆದಿದ್ದು ಹೀಗೆ..
11:51 AM (IST) Dec 09
ಕಳೆದ ಲೋಕಸಭಾ ಚುನಾವಣೆ ವೇಳೆ 'ನಿಖಿಲ್ ಎಲ್ಲಿದ್ದೀಯಪ್ಪಾ?' ಟ್ರೆಂಡ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಈ ಉಪ ಚುನಾವಣೆಯಲ್ಲಿ 'ಹೌದು ಹುಲಿಯಾ' ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಆದರೆ, ಉಪ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಸ್ಥಾನಗಳಲ್ಲಿ ಗಲವು ಸಾಧಿಸಿತುತ್ತಿದ್ದು, ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದು ಹೀಗೆ...
11:42 AM (IST) Dec 09
15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದು, ಡಿಕೆಶಿ ಹೇಳಿದ್ದಿಷ್ಟು...
11:38 AM (IST) Dec 09
ರಾಜ್ಯದಲ್ಲಿ ನಡೆದ 15 ವಿಧನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದ್ದು, 12 ಕ್ಷೇತ್ರಗಲ್ಲಿ ಬಿಜೆಪಿ, 1 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಹಾಗೂ ಮತ್ತೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
11:34 AM (IST) Dec 09
ಹೊಸಕೋಟೆಯಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲವಿನತ್ತ ದಾಪುಗಾಲು ಹಾಕುತ್ತಿದ್ದು, ಈ ಗೆಲವೂ ಬಿಜೆಪಿಯದ್ದೇ ಎಂದು ಟ್ವೀಟ್ ಮಾಡಿದ್ದಾರೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ
11:32 AM (IST) Dec 09
ಉಪಚುನಾವಣೆಯಲ್ಲಿ ಕೈ ನಾಯಕತ್ವ ವಹಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಕೇವಲ ಶಿವಾಜಿನಗರ ಹಾಗೂ ಹುಣಸೂರಿಗೆ ತೃಪ್ತಿ ಪಟ್ಟು ಕೊಳ್ಳಬೇಕಾಗಿದೆ ಕಾಂಗ್ರೆಸ್ ಪಾಳಯ. ಸೋಲಿಗೆ ತೀವ್ರ ನಿರಾಸೆ ವ್ಯಕ್ತಪಡಿಸಿದ ಸಿದ್ಧರಾಮಯ್ಯ. ಕಾಗವಾಡ, ರಾಣೆಬೆನ್ನೂರು ಸೋಲಿಗೆ ತೀವ್ರ ನಿರಾಸೆ ಪಟ್ಟ ಪ್ರತಿಪಕ್ಷ ನಾಯಕ. ಸಿದ್ಧರಾಮಯ್ಯ ನಿವಾಸಕ್ಕೆ ಆಗಮಿಸದ ಕಾಂಗ್ರೆಸ್ ನಾಯಕರು.
11:29 AM (IST) Dec 09
ಉಪ ಚುನಾವಣೆ ಫಲಿತಾಂಶಗಳು ಹೊರ ಬೀಳುತ್ತಿದ್ದು, ಬಹುತೇಕ ಅನರ್ಹ ಶಾಸಕರು ಗೆಲುವಿನ ನಗೆ ಬೀರುತ್ತಿದ್ದಾರೆ. ಈ ಬೆನ್ನಲ್ಲೇ ಸಂಪುಟ ಪುನರ್‌ರಚನೆ ಬಗ್ಗೆ ಚರ್ಚಿಸಲು ಸಿಎಂ ಯಡಿಯೂರಪ್ಪ ಡಿ.10ರಂದು ದಿಲ್ಲಿಗೆ ತೆರಳಲಿದ್ದಾರೆ.
11:26 AM (IST) Dec 09
ಕಳೆದ 20 ವರ್ಷಗಳಿಂದಲೂ ರಾಜು ಕಾಗೆ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು 2018ರ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ್ ಗೆದ್ದು ಕೊಂಡಿದ್ದರು. ಇದೀಗ ಕಾಂಗ್ರೆಸ್‌ನಲ್ಲಿದ್ದ ಶ್ರೀಮಂತ ಪಾಟೀಲ್ ಬಿಜೆಪಿಗೆ ಸೇರಿ, ಬಿಜೆಪಿಯಲ್ಲಿದ್ದ ರಾಜು ಕಾಗೆ ಕಾಂಗ್ರೆಸ್‌ಗೆ ಸೇರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮತ್ತೆ ಬಿಜೆಪಿ ಗೆಲ್ಲುವಂತಾಗಿದೆ.
11:22 AM (IST) Dec 09
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷಾದ್ ಲೀಡ್ ಹೆಚ್ಚಾಗುತ್ತಿದ್ದಂತೆ. ಕೌಂಟಿಂಗ್ ಸೆಂಟರ್ ಬಳಿ ಸೇರುತ್ತಿರುವ ಅಭಿಮಾನಿಗಳು. ಕಾಂಗ್ರೆಸ್. ರಿಜ್ವಾನ್ ಪರ ಘೋಷಣೆ ಕೂಗುತ್ತಿರುವ ಕಾರ್ಯಕರ್ತರು. ಕಾಂಗ್ರಸ್ ಬಾವುಟ ಹಿಡಿದು ಸಂಭ್ರಮಿಸುತ್ತಿರುವ ಕಾಂಗ್ರೆಸ್ಸಿಗರು.
11:19 AM (IST) Dec 09
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲವಿನ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಕಾಂಗ್ರೆಸ್‌ನಿಂದ ಗೆಲವು ಸಾಧಿಸಿ, ಅನರ್ಹತೆ ಪಟ್ಟ ಕೊಂಡಿದ್ದ ಸುಧಾಕರ್ ಅವರಿಗೆ ಜನರು ವಿಜಯಲಕ್ಷ್ಮಿ ಒಲಿಯುವಂತೆ ಮಾಡಿದ್ದಾರೆ.
11:17 AM (IST) Dec 09
ಬೆಳಗಾವಿ: 'ನಮ್ಮ ಮೇಲೆ ಅನರ್ಹತೆಯ ಕಳಂಕ ಇತ್ತು. ಮತದಾರನ ತೀರ್ಪಿನ ನಂತರ ಯಾರಿಗೂ ಮಾತನಾಡುವ ಅಧಿಕಾರವಿಲ್ಲ. ನಾವು ದುಡ್ಡಿಗಾಗಿ ಬಿಜೆಪಿಗೆ ಹೋಗಿಲ್ಲ. ವರ್ಷಕ್ಕೆ ಎರಡು-ಮೂರು ಕೋಟಿ ನಾನೇ ದಾನ ಮಾಡುತ್ತೇನೆ.
ಕ್ಚೇತ್ರದ ಅಭಿವೃದ್ಧಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ.ನಮ್ಮದು ಪಕ್ಷಾಂತರವಲ್ಲ ಹೋರಾಟ,' ಎಂದು ಸುವರ್ಣ ನ್ಯೂಸ್‌ಗೆ ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಹೇಳಿಕೆ ನೀಡಿದ್ದಾರೆ.
ನನಗೆ ಸಣ್ಣ ನೀರಾವರಿ, ಕೃಷಿ, ಸಹಕಾರ ಇಲಾಖೆಯಲ್ಲಿ ಆಸಕ್ತಿಯಿದೆ. ಈ ಕ್ಷೇತ್ರಗಳಲ್ಲಿ ನನಗೆ ಬಹಳ ಅನುಭವವಿದೆ. ಇದೇ ಇಲಾಖೆಗಳ ಸಚಿವ ಸ್ಥಾನ ಕೊಟ್ಟರೆ ಅಭಿವೃದ್ದಿ ಮಾಡಲು ಅನುಕೂಲ ಆಗುತ್ತೆ. ನಮ್ಮ ಕ್ಷೇತ್ರದ ಜನರೆಲ್ಲ ಒಂದೇ ಕುಟುಂಬದ ಮಕ್ಕಳಂತೆ ಇದ್ದೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ, ಯೋಚನೆಗಳಿವೆ, ಎಂದಿದ್ದಾರೆ.
11:13 AM (IST) Dec 09
ಮಹಾಲಕ್ಷ್ಮಿ ಲೇಔಟ್ ನಲ್ಲಿ ಗೋಪಾಲಯ್ಯ ಗೆಲುವು ಖಚಿತ. ಈ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಗೋಪಾಲಯ್ಯ. ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಿರುವುದು. ಈ ಕ್ಷೇತ್ರದಲ್ಲಿ ಇಲ್ಲೀವರೆಗೆ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳು ಮಾತ್ರ ಗೆಲವು ಕಂಡಿದ್ದರು.
ಈಗ ಬಿಜೆಪಿ ಅಭ್ಯರ್ಥಿ ಗೆಲುವಿನ ಮೂಲಕ ಹೊಸ ಇತಿಹಾಸ ಸೃಷ್ಟಿ. ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಿದ ಗೋಪಾಲಯ್ಯ. ತಾನೇ ಕಟ್ಟಿದ್ದ ಜೆಡಿ ಎಸ್ ಕೋಟೆಯನ್ನ ಕಡೆವಿದ ಗೋಪಾಲಯ್ಯ.
11:10 AM (IST) Dec 09
ಬೆಳಗಾವಿ: ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಗೆಲುವಿನ ದಡ ಸೇರುತ್ತಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಮನೆ ಮುಂಭಾಗದಲ್ಲಿ ವಿಜಯೋತ್ಸವ. ಬಿಜೆಪಿ ಹಾಗೂ ರಮೇಶ್ ಅಭಿಮಾನಿಗಳಿಂದ ಸಂಭ್ರಮ. ಬಿಜೆಪಿ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ ಅಭಿಮಾನಿಗಳು.ಮನೆಯಲ್ಲಿ ಪೂಜೆಗೆ ಕುಳಿತಿರುವ ರಮೇಶ್ ಜಾರಕಿಹೊಳಿ.
11:05 AM (IST) Dec 09
ಹುಬ್ಬಳ್ಳಿ: ಉಪಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನವರಿಗೆ ಭ್ರಮನಿರಸನವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುತ್ತೆ ಎಂದು ಹೇಳಿಕೊಂಡು ತಿರುಗುತ್ತಿದ್ರು.ಆದ್ರೆ ಜನರ ಒಲವು ಬಿಜೆಪಿ ಪರ ಇತ್ತು.ಹೀಗಾಗಿ ಬಿಜೆಪಿ ಎಲ್ಲ ಕ್ಷೇತ್ರಗಳು ಗೆಲ್ಲುವು ಖಚಿತವಾಗಿದೆ, ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹೊಸಕೋಟೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ಅವರಿಗೂ ಸ್ಥಾನಮಾನ ಕೊಡುವುದು ಖಚಿತ.ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದಕ್ಕೆ ನಮ್ಮ ಸರ್ಕಾರ ಬಂದಿದೆ, ಎಂದರು.
ಜೆಡಿಎಸ್ ಭದ್ರಕೋಟೆಯಲ್ಲಿ ಖಾತೆ ತೆರೆದ ಬಿಜೆಪಿ
11:01 AM (IST) Dec 09
ಕೆ.ಆರ್.ಪುರಂ ವಿಧಾನ ಸಭಾ ಕ್ಷೇತ್ರದ 7ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಮುನ್ನಡೆ ಕಾಯ್ದುಕೊಂಡಿದ್ದಾರೆ
ಬೆಜೆಪಿ: 4,901
ಕಾಂಗ್ರೆಸ್: 1823
ಬಿಜೆಪಿ ಅಭ್ಯರ್ಥಿ ಸುಮಾರು 22 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
10:58 AM (IST) Dec 09
ಶಿವಾಜಿನಗರ ಬೈ ಎಲೆಕ್ಷನ್.. 5 ನೇ ಸುತ್ತಿನ ಮತ ಎಣಿಕೆ ಮುಕ್ತಾಯ
ರಿಜ್ವಾನ್ ಅರ್ಷದ್ - 19537
ಸರವಣ - 11981
ನೋಟಾ - 325.
ಅಂತರ - 7550..
10:55 AM (IST) Dec 09
ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಮುನ್ನಡೆ ಸಾಧಿಸಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ.