ಇತಿಹಾಸದಲ್ಲೇ ಮೊದಲು ತುಳುನಾಡಿನ ಕಂಬಳ ಬೆಂಗಳೂರಿನಲ್ಲಿ... ರೈಲಲ್ಲಿ ಬರಲಿವೆ ಕೋಣಗಳು

By Sathish Kumar KH  |  First Published Aug 6, 2023, 8:03 PM IST

ಕಾಂತಾರ ಸಿನಿಮಾದ ಮೂಲಕ ಪ್ರಸಿದ್ಧಿಯಾದ ಕರಾವಳಿ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲು ತುಳುಕೂಟ ಮುಂದಾಗಿದ್ದು, ಅದರ ಸಿದ್ಧತೆಗಳು ಇಲ್ಲಿವೆ ನೋಡಿ..


ಬೆಂಗಳೂರು (ಆ.06): ರಾಜ್ಯದಲ್ಲಿ ಹಲವು ಪ್ರಾದೇಶಿಕ ಸೊಗಡುಗಳನ್ನು ಹೊಂದಿದ ಕರಾವಳಿ ತೀರದ ಯಕ್ಷಗಾನ ಬೆಂಗಳೂರಿಗೆ ಕಾಲಿಟ್ಟು ದಶಕಗಳೇ ಕಳೆದಿವೆ. ಈಗ ಕಾಂತಾರ ಸಿನಿಮಾದ ಮೂಲಕ ಜಗತ್ತಿಗೆ ಅತಿಹೆಚ್ಚು ಚಿರಪರಿಚಿತವಾದ ಕೆಸರಿನ ಗದ್ದೆಯಲ್ಲಿ ಶರವೇಗದಲ್ಲಿ ಓಡುವ ಕೋಣಗಳ ಕಂಬಳವನ್ನು ಈಗ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ. ಇದಕ್ಕೆ ದಿನಗಣನೆ ಆರಂಭವಾಗಿದ್ದು, ತುಳು ಕೂಟದಿಂದ ಭರ್ಜರಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. 

ಇನ್ನು ರಾಜ್ಯದಲ್ಲಿ ನಮಗೆ ಕಂಬಳ ಎಂದಾಕ್ಷಣ ಕರಾವಳಿಯ ಪ್ರದೇಶಗಳು ನೆನಪಿಗೆ ಬರುತ್ತವೆ. ಅದರಲ್ಲೂ ಜಾಗತಿಕವಾಗಿ ಭರ್ಜರಿ ಯಶಸ್ಸು ಕಂಡ "ಕಾಂತಾರ" ಸಿನಿಮಾ ಬಂದ ಮೇಲಂತೂ 'ಕಂಬಳ' ಪ್ರಸಿದ್ಧಿಯೂ ಮತ್ತಷ್ಟು ಹೆಚ್ಚಾಗಿತ್ತು. ಇನ್ನು ಕಂಬಳ ಎಂದಾಕ್ಷಣ ಕಾಂತಾರ ಸಿನಿಮಾದ ನೆನಪು ಬರುವಷ್ಟರ ಮಟ್ಟಿಗೆ ಜನಜನಿತವಾಯಿತು. ಕರಾವಳಿಯಲ್ಲಷ್ಟೇ ನಡೆಯುವ ಹಾಗೂ ಅಲ್ಲಿ ಮಾತ್ರ ನಡೆಸಬಹುದಾದ ಕಂಬಳ ಕ್ರೀಡೆಯನ್ನು ಅಥವಾ ಪ್ರಾದೇಶಿಕ ಸೊಗಡನನ್ನು ರಾಜಧಾನಿ ಬೆಂಗಳೂರಿನಲ್ಲಿ ನಡೆಸಲು ಮುಂದಾಗಿದ್ದಾರೆ. ಅದಕ್ಕೆ ಭರದ ಸಿದ್ಧತೆಯೀ ನಡೆಸಲಾಗಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

Tap to resize

Latest Videos

undefined

ಪಂಜುರ್ಲಿ ದೈವದ ರೂಪವಾಗಿ ಪೂಜಿಸುತ್ತಿದ್ದ ಕಾಡು ಹಂದಿಯನ್ನು, ಬಾಂಬ್‌ ಇಟ್ಟು ಹತ್ಯೆಗೈದ ದುಷ್ಕರ್ಮಿಗಳು

ಬೆಂಗಳೂರು ತುಳು ಕೂಟದ 50ನೇ ವರ್ಷಾಚರಣೆ: ಕರಾವಳಿಗೆ ಸೀಮಿತವಾಗಿರುವ ಕಂಬಳ ಬೆಂಗಳೂರಿನಲ್ಲಿ ನಡೆದರೆ ಹೇಗೆ? ಎಂಬ ಯೋಚನೆ ಕಳೆದ ಕೆಲವು ವರ್ಷದಿಂದ ಕರಾವಳಿಗರ ಅನೇಕರ ಮನಸ್ಸಲ್ಲಿದೆ. ಇದೀಗ ಅದಕ್ಕೂ ಕಾಲ ಕೂಡಿ ಬಂದಿದೆ. ಬೆಂಗಳೂರಿನಲ್ಲೇ ಕಂಬಳವನ್ನು ನಡೆಸಲು ಒಂದು ತಂಡವೇ ಸಿದ್ಧವಾಗಿದೆ. ಇದಕ್ಕಾಗಿ ಸೂಕ್ತ ಸ್ಥಳವನ್ನು ಸ್ಥಳವನ್ನು ಪರಿಶೀಲನೆ ಕೂಡ ನಡೆಸಲಾಗಿದೆ. ಅದನ್ನು ಆಯೋಜನೆ ಮಾಡುವುದಕ್ಕೂ ಈಗ ಸೂಕ್ತ ಮತ್ತು ಸಕಾಲವೂ ಒದಗಿಬಂದಿದೆ. ಅದೇನೆಂದರೆಮ ಬೆಂಗಳೂರಿನ ತುಳು ಕೂಟದ 50ನೇ ವರ್ಷದ ಸಂಭ್ರಮಾಚರಣೆ ಸಲುವಾಗಿ ಬೆಂಗಳೂರಿನಲ್ಲೇ ಕಂಬಳ ನಡೆಸಲು ನಿರ್ಧರಿಸಲಾಗಿದೆ. ಅದರಲ್ಲೂ ಬೆಂಗಳೂರಿನ ಅರಮನೆ ಮೈದಾನದಲ್ಲೇ ಈ ಕಂಬಳ ನಡೆಯಲಿದೆ ಎನ್ನುವುದು ಅತ್ಯಂತ ಸಂತಸದಾಯಕ ವಿಚಾರವಾಗಿದೆ. 

ಕಂಬಳ ನಡೆಸಲು ಸ್ಥಳ ಪರಿಶೀಲನೆಯೂ ಮುಕ್ತಾಯ:  ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವ ಕುರಿತು ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಕಂಬಳ ಯಾವತ್ತು ನಡೆಯಲಿದೆ ಎನ್ನುವ ಕುರಿತು ಇನ್ನೂ ದಿನಾಂಕವನ್ನು ಮಾತ್ರ ನಿಗದಿ ಮಾಡಿಲ್ಲ. ಜೊತೆಗೆ, ಯಾವ ಕೋಣಗಳನ್ನು ಇಲ್ಲಿನ ಕಂಬಳಕ್ಕೆ ಆಯ್ಕೆ ಮಾಡಬೇಕು, ಅವುಗಳನ್ನು ಊರಿನಿಂದ ಬೆಂಗಳೂರಿಗೆ ಹೇಗೆ ತರಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Davanagere: ರೈತನ ಮೇಲಿನ ದ್ವೇಷಕ್ಕೆ 780 ಅಡಿಕೆ ಗಿಡ ಕತ್ತರಿಸಿದ ದುಷ್ಕರ್ಮಿಗಳು

ಇನ್ನು ಶಾಸಕ ಅಶೋಕ್‌ ಕುಮಾರ್‌ ರೈ ಅವರೊಂದಿಗೆ ತುಳು ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕೆ., ತುಳುಕೂಟದ ಗೌರವಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಕೆ.ವಿ., ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ ಬಿ., ಜಯರಾಮ್ ಸೂಡ, ಚಂದ್ರಹಾಸ ರೈ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಂಪತ್ ಕುಮಾರ್, ಅಕ್ಷಯ್ ರೈ ದಂಬೆಕಾನ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಕಂಬಳ ನಡೆಯುವ ಅರಮನೆ ಮೈದಾನದ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ. 

click me!