ಪಂಜುರ್ಲಿ ದೈವದ ರೂಪವಾಗಿ ಪೂಜಿಸುತ್ತಿದ್ದ ಕಾಡು ಹಂದಿಯನ್ನು, ಬಾಂಬ್ ಇಟ್ಟು ಹತ್ಯೆಗೈದ ದುಷ್ಕರ್ಮಿಗಳು
ಕಾರವಾರದ ಜನತೆ ಪಂಜುರ್ಲಿ ದೈವದ ರೂಪವಾಗಿ ಪೂಜೆ ಮಾಡುತ್ತಿದ್ದ ಕಾಡು ಹಂದಿಯನ್ನು ದುಷ್ಕರ್ಮಿಗಳು ಬಾಂಬ್ ಇಟ್ಟು ಹತ್ಯೆ ಮಾಡಿದ್ದಾರೆ.
ಉತ್ತರಕನ್ನಡ (ಆ.06): ಕನ್ನಡದ ಕಾಂತಾರ ಸಿನಿಮಾ ರಾಜ್ಯ, ದೇಶ ಮಾತ್ರವಲ್ಲದೇ ಜಾಗತಿಕವಾಗಿ ಸದ್ದು ಮಾಡಿದ ಸಿನಿಮಾವಾಗಿದೆ. ಈ ಸಿನಿಮಾ ಬಂದ ನಂತರ ಪಂಜುರ್ಲಿ ದೈವದ ಪೂಜೆ ಹಾಗೂ ಕಾಡು ಹಂದಿಯ ಪೂಜೆ ಮಾಡುವ ಬಗ್ಗೆ ಹೆಚ್ಚಿನ ನಂಬಿಕೆ ಬಂದಿತ್ತು. ಇದೇ ರೀತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದಲ್ಲಿನ ಕುಟುಂಬವೊಂದು ಕಳೆದ 5 ವರ್ಷಗಳಿಂದ ಪಂಜುರ್ಲಿ ದೈವದ ರೀತಿ ಪೂಜೆ ಮಾಡುತ್ತಿದ್ದ ಕಾಡು ಹಂದಿಯನ್ನು ದುಷ್ಕರ್ಮಿಗಳು ಬಾಂಬ್ ಇಟ್ಟು ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.
ಕಳೆದ 5 ವರ್ಷಗಳಿಂದ ದೇವರ ರೂಪದಲ್ಲಿ ಪೂಜಿಸಲ್ಪಡುತ್ತಿದ್ದ ಕಾಡು ಹಂದಿಯ ಹತ್ಯೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯಾದ ಜನತಾ ಕಾಲೋನಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಕಾಡು ಹಂದಿಗೆ ಕೋಳಿ ಮಾಂಸದಲ್ಲಿ ನಾಡಬಾಂಬ್ (ಮೀಟ್ ಬಾಂಬ್) ಇಟ್ಟು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಚೆಂಡಿಯ ಜನತಾ ಕಾಲೋನಿಯ ಜನರ ಪ್ರೀತಿ ಸಂಪಾದಿಸಿ ಅವರಿಂದಲೇ ದೈವ ಎಂದು ಪೂಜೆಗೆ ಒಳಗಾಗುತ್ತಿದ್ದ ಕಾಡು ಹಂದಿ ಸಾವಿನಿಂದ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ. ಗ್ರಾಮಸ್ಥರು ಕಣ್ಣೀರಿಟ್ಟು ದುಷ್ಕರ್ಮಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸ್ಟೇಡಿಯಂಗೆ ಪಂಜುರ್ಲಿ ವೇಷ ಧರಿಸಿ ಬಂದ ಅಭಿಮಾನಿ, ಕರಾವಳಿ ಮಂದಿಯಿಂದ ಆಕ್ರೋಶ
ಊರಿನ ಜನರ ಪ್ರೀತಿ ಸಂಪಾದಿಸಿದ್ದ ಕಾಡುಹಂದಿ:
ಚೆಂಡಿಯಾ ಗ್ರಾಮದಲ್ಲಿ ಸುಮಾರು 5 ವರ್ಷಗಳಿಂದ ಕಾಡಿನಿಂದ ನಾಡಿಗೆ ಬರುತ್ತಿದ್ದ ಒಂದು ಕಾಡುಹಂದಿಗೆ ಜನರು ಪೂಜೆ ಮಾಡುತ್ತಿದ್ದರು. ಇನ್ನು ಗ್ರಾಮಸ್ಥರು ಬಂದರೂ ಯಾರಿಗೂ ತೊಂದರೆ ಕೊಡದೇ ಸಂಪನ್ನನಂತೆ ಗ್ರಾಮಸ್ಥರೊಂದಿಗೆ ಹೊಂದಿಕೊಂಡಿತ್ತು. ಹೀಗಾಗಿ, ಊರಿನ ಜನರ ಪ್ರೀತಿ ಸಂಪಾದಿಸಿ ಪೂಜಿಸಲ್ಪಡುತ್ತಿದ್ದ ಕಾಡು ಹಂದಿಗೆ, ಜನರು ಹಂದಿಗೆ ಆಹಾರವಾಗಿ ಕಾಳು, ಕಡಿ ಸೇರಿದಂತೆ ತಾವು ಊಟ ಮಾಡುವ ಆಹಾರವನ್ನೂ ಹಾಕುತ್ತಿದ್ದರು. ಆಹಾರ ಸೇವಿಸಿ ನಂತರ ಯಾರಿಗೂ ಉಪಟಳ ನೀಡದೇ ಕಾಡಿಗೆ ಮರಳುತಿತ್ತು.
ಕಾಂತಾರ ಸಿನಿಮಾ ಬಂದ ನಂತರ ದೈವಭಕ್ತಿ ಹೆಚ್ಚಳ:
ಇನ್ನು ಕಾಂತಾರ ಸಿನಿಮಾದ ಬಳಿಕವಂತೂ ಬಹಳಷ್ಟು ಜನರು ಇದನ್ನು ದೈವರೂಪ ಅಂದುಕೊಂಡು ಭಕ್ತಿಯಿಂದ ಆಹಾರ ನೀಡುತ್ತಿದ್ದರು. ಆದರೆ, ಮೊನ್ನೆ ಶನಿವಾರ ಬೆಳಗ್ಗೆ 11ಕ್ಕೆ ಬ್ಲಾಸ್ಟ್ ಶಬ್ದವಾಗಿದ್ದು, ಸ್ಥಳದಲ್ಲಿ ಜನರು ಪೂಜಿಸುತ್ತಿದ್ದ ಕಾಡು ಹಂದಿ ಸತ್ತು ಬಿದ್ದಿತ್ತು. ಜನರು ನೋಡಿದಾಗ ರಿಕ್ಷಾವೊಂದು ವೇಗದಲ್ಲಿ ಸಾಗಿದ್ದು, ಜನರು ಶಂಕಿತನ ಸುಳಿವು ನೀಡಿದ್ದರು. ಜನರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳಿಂದ ಆಮದಳ್ಳಿಯ ಸೀಫ್ರನ್ ಥಾಮಸ್ ಫೆರ್ನಾಂಡೀಸ್ ಎಂಬ ಶಂಕಿತನ ವಶಕ್ಕೆ ಪಡೆದಿದ್ದಾರೆ.
ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿ ಆರಂಭ: ನಾಲ್ಕು ದಿನ ಮಾತ್ರ ಅವಕಾಶ
ಆರೋಪಿಗಳನ್ನು ಜನರಿಗೆ ಒಪ್ಪಿಸುವಂತೆ ಆಗ್ರಹ:
ಈ ಘಟನಾ ಸ್ಥಳದಲ್ಲಿಯೇ ಇನ್ನೊಂದು ಮೀಟ್ ಬಾಂಬ್ ಪತ್ತೆಯಾಗಿದ್ದು, ಸ್ಥಳೀಯರು ನೀಡಿದ್ದ ದೂರಿನ ಧಾರದಲ್ಲಿ ಆರೋಪಿಯ ರಿಕ್ಷಾವನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಆರೋಪಿಯನ್ನು ತಮ್ಮ ವಶಕ್ಕೆ ನೀಡಿ, ನಾವೇ ಅವರಿಗೆ ಬುದ್ಧಿ ಕಲಿಸುತ್ತೇವೆ ಎಂದು ಅರಣ್ಯ ಇಲಾಖೆ ಕಚೇರಿಯ ಮುಂದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ದೈವವಾಗಿ ಪೂಜಿಸುತ್ತಿದ್ದ ಹಂದಿಯನ್ನು ಕಳೆದುಕೊಂಡು ಭಾವುಕರಾಗಿ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಅರಣ್ಯ ನಿಯಮಗಳನ್ನು ಉಲ್ಲಂಘಟನೆ ಮಾಡಿ ಕಾಡುಪ್ರಾಣಿ ಕೊಲೆಗೈದ ಆರೋಪದಡಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಅರಣ್ಯಾಧಿಕಾರಿಗಳು ಸ್ಥಳೀಯರಿಗೆ ತಿಳಿಸಿದ್ದಾರೆ.