12 ನಿಮಿಷ ಮೊದಲೇ ಬೆಂಗಳೂರು-ಮಂಗಳೂರು ವಿಮಾನ ಟೀಕ್ ಆಫ್, 6 ಪ್ರಯಾಣಿಕರು ನಿಲ್ದಾಣದಲ್ಲೇ ಬಾಕಿ!

By Suvarna News  |  First Published Aug 6, 2023, 5:12 PM IST

ಬೆಂಗಳೂರು-ಮಂಗಳೂರು ನಡುವಿನ ಇಂಡಿಗೋ ವಿಮಾನ ನಿಗದಿತ ಸಮಯಕ್ಕಿಂತ 12 ನಿಮಿಷ ಮೊದಲೇ ಹಾರಾಟ ಆರಂಭಿಸಿದೆ. ಇದರ ಪರಿಣಾಮ 6 ಪ್ರಯಾಣಿಕರು ನಿಲ್ದಾಣದಲ್ಲೇ ಬಾಕಿಯಾದ ಘಟನೆ ನಡೆದಿದೆ. ಈ ಪ್ರಯಾಣಿಕರು ಮುಂದಿನ ವಿಮಾನ ಪ್ರಯಾಣಕ್ಕೆ  6 ಗಂಟೆ ಕಾಯಬೇಕಾಯಿತು.
 


ಬೆಂಗಳೂರು(ಆ.06) ವಿಮಾನ ಪ್ರಯಾಣದಲ್ಲಿ ಸಮಯ ಅತ್ಯಂತ ಮುಖ್ಯ. ಒಂದು ಐದು ನಿಮಿಷ ತಡವಾದರೂ ವಿಮಾನ, ವಿಳಂಬ ಮಾಡಿದವರನ್ನು ಬಿಟ್ಟು ಟೇಕ್ ಆಫ್ ಆದ ಹಲವು ಉದಾಹರಣೆಗಳಿವೆ. ಇತ್ತೀಚೆಗೆ ಕರ್ನಾಟಕ ರಾಜ್ಯಪಾಲರನ್ನೇ ಬಿಟ್ಟು ವಿಮಾನ ಹಾರಾಟ ನಡೆಸಿತ್ತು. ಇದೀಗ ಇಂಡಿಗೋ ವಿಮಾನ 12 ನಿಮಿಷ ಮುಂಚಿತವಾಗಿ ಟೇಕ್ ಆಫ್ ಆದ ಕಾರಣ 6 ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ತಂಗುವ ಅನಿವಾರ್ಯತೆ ಎದುರಾಗಿತ್ತು. ಇಷ್ಟೇ ಅಲ್ಲ ಈ ಪ್ರಯಾಣಿಕರು ಬರೋಬ್ಬರಿ 6 ಗಂಟೆ ಕಾದು ತಮ್ಮ ಪ್ರಯಾಣ ಮುಂದುವರಿಸಿದ ಘಟನೆ ನಡೆದಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ಇಂಡಿಗೋ 6ಇ 6162 ವಿಮಾನ ಮಧ್ಯಾಹ್ನ 2.55 ನಿಮಿಷಕ್ಕೆ ಬೆಂಗಳೂರು ಕೆಂಂಪೇಗೌಡ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿತ್ತು. ಆದರೆ ಇಂಡಿಗೋ ಏರ್‌ಲೈನ್ಸ್ ಈ ಸಮಯನ್ನು ಅಂತಿಮ ಹಂತದಲ್ಲಿ ಬದಲಾವಣೆ ಮಾಡಿದೆ. 2.55ರ ಬದಲು 2.42ಕ್ಕೆ ವಿಮಾನ ಟೇಕ್ ಆಫ್ ಆಗಿದೆ. ಕೆಲ ಪ್ರಯಾಣಿಕರು ವಿಮಾನ ಟೇಕ್ ಆಫ್ ಆಗಲು ಇನ್ನೂ 3 ರಿಂದ 5 ನಿಮಿಷಗಳಿರುವಾಗ ಎಲ್ಲಾ ತಪಾಸಣೆ ಮುಗಿಸಿ ಹಾಜರಾಗಿದ್ದಾರೆ. ಅಷ್ಟರೊಳಗೆ ವಿಮಾನ ಆಗಸದಲ್ಲಿ ಪ್ರಯಾಣ ಮುಂದವರಿಸಿತ್ತು. ಹೀಗಾಗಿ 6 ಪ್ರಯಾಣಿಕರು ನಿಲ್ದಾಣದಲ್ಲೇ ಬಾಕಿಯಾದ ಘಟನೆ ನಡೆದಿದೆ.

Tap to resize

Latest Videos

ಧೋನಿ ಕೇವಲ ಹೆಸರಲ್ಲ, ಎಮೋಷನ್‌..! ಮಹಿ ವಿಮಾನದಲ್ಲಿ ನಿದ್ರಿಸುವಾಗ ವಿಡಿಯೋ ಮಾಡಿದ ಗಗನ ಸಖಿ..! ವಿಡಿಯೋ ವೈರಲ್

ಇಂಡಿಗೋ ವಿಮಾನ ಅಧಿಕಾರಿಗಳ ವಿರುದ್ಧ 6 ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ವಿಮಾನದ ಸಮಯವನ್ನು ಅಂತಿಮ ಹಂತದಲ್ಲಿ ಬದಲಾವಣೆ ಮಾಡಿದ್ದಾರೆ. ಈ ಕುರಿತು ಯಾವುದೇ ಸಂದೇಶ ಬಂದಿಲ್ಲ. ವೆಬ್‌ಸೈಟ್‌ನಲ್ಲಿ ಸಮಯ ಬದಲಾವಣೆ ಮಾಡಿದ್ದಾರೆ. ಟಿಕೆಟ್ ಬುಕ್ ಮಾಡಿ, ವೆಬ್‌ಚೆಕಿನ್ ಕೂಡ ಮಾಡಲಾಗಿದೆ. ಹೀಗಿರುವಾಗ ಪದೇ ಪದೇ ವೆಬ್‌ಸೈಟ್ ಕ್ಲಿಕ್ ಮಾಡಿ ವಿಮಾನ ಪರಿಶೀಲಿಸುವ ಅಗತ್ಯವಿಲ್ಲ. ಇದು ಅದಿಕಾರಿಗಳ ಬೇಜವಾಬ್ದಾರಿ ತನ ಎಂದು ಪ್ರಯಾಣಿಕರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

ಮಧ್ಯಾಹ್ನ 2.55ರ ವಿಮಾನ ಮಿಸ್ ಮಾಡಿಕೊಂಡ 6 ಪ್ರಯಾಣಿಕರು ಬರೋಬ್ಬರಿ 6 ಗಂಟೆ ಕಾದಿದ್ದಾರೆ. ಬಳಿಕ ರಾತ್ರಿ 8.20ರ ವಿಮಾನದ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಎಲ್ಲಾ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

 

ಫ್ಲೈಟ್‌ನಲ್ಲಿ ಎಸಿ ಇಲ್ದಿದ್ರೆ ಕಥೆ ಏನಾಗುತ್ತೆ ನೋಡಿ: ಪ್ರಯಾಣಿಕ ಹಂಚಿಕೊಂಡ ಭಯಾನಕ ವೀಡಿಯೋ

ವಿಮಾನ ನಿಲ್ದಾಣಕ್ಕೆ ತುಸು ತಡವಾಗಿ ಆಗಮಿಸಿದರು ಎಂಬ ಕಾರಣಕ್ಕೆ ಹೈದರಾಬಾದ್‌ಗೆ ಪ್ರಯಾಣಿಸಬೇಕಿದ್ದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಬಿಟ್ಟು ಏರ್‌ ಏಷ್ಯಾ ವಿಮಾನವು ಪ್ರಯಾಣ ಬೆಳೆಸಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ ಆಗಸ್ಟ್ 3 ರಂದು ನಡೆದಿತ್ತು. ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಹೈದರಾಬಾದ್‌ಗೆ ತೆರಳಲು ಗುರುವಾರ ಮಧ್ಯಾಹ್ನ 2 ಗಂಟೆಗೆ ಹೊರಡುವ ಏರ್‌ ಏಷ್ಯಾ ವಿಮಾನದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರಿಗೆ ಟಿಕೆಟ್‌ ಬುಕ್‌ ಆಗಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರು ತಲುಪುವಷ್ಟರಲ್ಲಿ 10 ನಿಮಿಷ ತಡವಾಗಿದೆ. ಅಷ್ಟರಲ್ಲಿ ರಾಜ್ಯಪಾಲರು ಪ್ರಯಾಣಿಸಬೇಕಿದ್ದ ಏರ್‌ ಏಷ್ಯಾ ವಿಮಾನವು ಗಗನಕ್ಕೆ ಹಾರಿದೆ.
 

click me!