Bengaluru: ಟ್ರಾಫಿಕ್‌ ಹೆಡ್‌ ಕಾನ್ಸ್‌ಸ್ಟೇಬಲ್‌ ಸಾವಿಗೆ ರೋಚಕ ಟ್ವಿಸ್ಟ್‌: ಆ.26ಕ್ಕೆ ಮದುವೆ ನಿಶ್ಚಯ ಆಗಿತ್ತು

By Sathish Kumar KH  |  First Published Aug 6, 2023, 4:15 PM IST

ಬೆಂಗಳೂರಿನ ವಿಜಯನಗರ ಸಂಚಾರಿ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ನವೀನ್‌ ಕುಮಾರ್‌ ಸಾವಿನ ಹಿಂದೆ ರೋಚಕ ಟ್ವಿಸ್ಟ್‌ ಕಂಡುಬಂದಿದೆ. 


ಬೆಂಗಳೂರು (ಆ.06): ಬೆಂಗಳೂರಿನ ವಿಜಯನಗರ ಸಂಚಾರಿ ಪೊಲೀಸ್‌ ಠಾಣೆಯ ಹೆಡ್‌ ಕಾನ್ಸ್‌ಟೇಬಲ್‌ ನವೀನ್‌ ಕುಮಾರ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಇದು ಹೃದಯಾಘಾತದಿಂದ ಸಂಭವಿಸಿದ ಸಾವಲ್ಲ ಎಂದು ವರದಿ ಬಂದಿದೆ.

ಹೌದು, ವಿಜಯನಗರ ಸಂಚಾರಿ ಪೊಲೀಸ್‌ ಠಾಣೆಯ ನವೀನ್‌ ಕುಮಾರ್‌ ಅವರು ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ಹೋಗಿ ಮಲಗಿದ್ದರು. ಆದರೆ, ಶನಿವಾರ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ನೇಹಿತರು ಹಾಗೂ ಮನೆಯವರು ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಮನೆಗೆ ಹೋಗಿ ನೋಡಿದಾಗ ಸಾವನ್ನಪ್ಪಿ ಬಿದ್ದಿರುವುದು ಪತ್ತೆಯಾಗಿತ್ತು. ಇನ್ನು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ರಾತ್ರಿ ವೇಳೆಯೇ ಹಾಸಿಗೆ ಮೇಲೆ ಯಾವುದೂ ಗಾಯದ ಗುರುತುಗಳಿಲ್ಲದೇ ಸಾವನ್ನಪ್ಪಿದ್ದರಿಂದ ಹೃದಯಾಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿತ್ತು.

Tap to resize

Latest Videos

Bengaluru: ವಿಜಯನಗರ ಸಂಚಾರಿ ಪೊಲೀಸ್ ಹೃದಯಾಘಾತಕ್ಕೆ ಬಲಿ: ಇಲ್ಲಿದೆ ನೋವಿನ ನುಡಿ..

ಮರಣೋತ್ತರ ಪರೀಕ್ಷಾ ವರದಿಯಲ್ಲಿ ಟ್ವಿಸ್ಟ್: ಇನ್ನು ಮೃತ ನವೀನ್‌ ಕುಮಾರ್‌ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಇನ್ನು ಮರಣೋತ್ತರ ಪರೀಕ್ಷಾ ವರದಿ ಭಾನುವಾರ ಲಭ್ಯವಾಗಿದ್ದು, ಇದು ಹೃದಯಾಘಾತದಿಂದ ಸಂಭವಿಸಿದ ಸಾವಲ್ಲ, ವಿಷ ಸೇವನೆಯಿಂದ ಸಂಭವಿಸಿದ ಸಾವು ಎಂದು ತಿಳಿದುಬಂದಿದೆ. ಇನ್ನು ಆಸ್ಪತ್ರೆಯಿಂದ ವಿಭಿನ್ನ ವರದಿ ಬರುತ್ತಿದ್ದಂತೆಯೇ ಮೃತ ನವೀನ್‌ ಕುಮಾರ್‌ ವಾಸವಿದ್ದ ಮನೆಗೆ ತೆರಳಿ ಪರಿಶೀಲನೆ ಮಾಡಿದಾಗ, ಮದ್ಯದ ಬಾಟಲಿ ಹಾಗೂ ವಿಷದ ಬಾಟಲಿ ಪತ್ತೆಯಾಗಿರುವುದು ಕಂಡುಬಂದಿದೆ.

ಆಗಸ್ಟ್‌ 26ಕ್ಕೆ ಮದುವೆ ನಿಶ್ಚಯ ಆಗಿತ್ತು: ಬೆಂಗಳೂರಿನ ಅತ್ತಿಗುಪ್ಪೆ ಮನೆಯಲ್ಲಿ ವಾಸವಾಗಿದ್ದ ವಿಜಯನಗರ ಸಂಚಾರಿ ಠಾಣೆ ಸಿಬ್ಬಂದಿ ನವೀನ್‌ಕುಮಾರ್‌, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮದ್ಯ ಮತ್ತು ಕೂಲ್ ಡ್ರಿಂಕ್ ನಲ್ಲಿ ವಿಷ ಸೇವಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತ ನವೀನ್‌ ಕುಮಾರ್‌ಗೆ ಇದೇ ತಿಂಗಳ 26ಕ್ಕೆ ಎರಡನೇ ಮದುವೆ ನಿಗದಿಯಾಗಿತ್ತು. ಈ ವಿಚಾರವಾಗಿ ಏನೋ ಕೌಟುಂಬಿಕ ಕಲಹ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಕರೆ ಸ್ವೀಕರಿಸದೇ ಇದ್ದಾಗ ಮನೆಗೆ ಹೋಗಿ ಚೆಕ್ ಮಾಡಿದ್ದಾರೆ. ಈ ವೇಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು.

ಚಂದ್ರ ಲೇಔಟ್‌ ಪೊಲೀಸರಿಂದ ತನಿಖೆ: ಇನ್ನು ಎರಡನೇ ಮದುವೆ ನಿಶ್ಚಯವಾಗಿದ್ದರೂ ನವೀನ್‌ ಕುಮಾರ್‌ ಆತ್ಮಹತ್ಯೆಗೆ ಬಲವಾದ ಕಾರಣ ಏನಿದೆ ಎಂಬುದರ ಜಾಡು ಹಿಡಿದು ಪೊಲೀಸರು ತನಿಖೆ ಆರಂಭಿಸಿದ್ದಾರೆ, ಚಂದ್ರಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ವಿಷ ಸೇವಿಸಿರೋದು ಪತ್ತೆಯಾಗಿದ್ದು, ಇದಕ್ಕೆ ಏನೆಲ್ಲಾ ಕಾರಣ ಇರಬಹುದು ಎಂದು ವ್ಯಾಪಕ ತನಿಖೆ ಕೈಗೊಂಡಿದ್ದಾರೆ. 

40 ಸಾವಿರ ರೂ. ಭೋಗ್ಯದ ಜಮೀನಿನಲ್ಲಿ ಟೊಮೆಟೊ ಬೆಳೆದು 1 ಕೋಟಿ ರೂ. ಸಂಪಾದಿಸಿದ ರೈತ

ಸಾವಿನ ಬೆನ್ನಲ್ಲೇ ಮತ್ತೊಬ್ಬ ಪೊಲೀಸ್‌ ಸ್ನೇಹಿತನಿಂದ ಭಾವುಕ ನುಡಿ: 
" ಸುರಿವ ಮಳೆಯಲ್ಲಿ ರಸ್ತೆಯಲ್ಲಿ ನಿಂತಾಗ ಸೈಡಿಗೆ ಬಾ ಎನ್ನಲಿಲ್ಲ... ಗುಡುಗು ಮಿಂಚಿನ ನಡುವೆ ಬೆದರಿ ನಡುಗುವಾಗ ಬೆಂಬಲಕ್ಕೂ ಬಾರಲಿಲ್ಲ... ಎಲ್ಲಾ ಮುಗಿದ ಮೇಲೆ Rip..ಅಂತೆ. 
ಆರೋಗ್ಯ ಕೈ ಕೊಟ್ಟಾಗ ಆಸ್ಪತ್ರೆಯಲ್ಲಿ ಆರೋಗ್ಯ ಭಾಗ್ಯ ಯೋಜನೆಯೇ ಇರಲಿಲ್ಲ, ಕುಟುಂಬದವರಿಗೆ ಕಷ್ಟವೆಂದಾಗ ಕಣ್ಣೊರೆಸಲು ಕರ್ತವ್ಯದಿಂದ ಬಿಡುಗಡೆಯೇ ಸಿಗಲಿಲ್ಲ. ಎಲ್ಲಾ ಮುಗಿದ ಮೇಲೆ Rip..ಅಂತೆ.
ವಾರಕ್ಕೊಮ್ಮೆ ಸಾರ್ವಜನಿಕ ಸಂಪರ್ಕ ಸಭೆ ನಡೆಸುವಾಗ ಪೊಲೀಸರ ಸಭೆಗೆ ಸಮಯವೇ ಇರಲಿಲ್ಲ, ಸಾರ್ವಜನಿಕವಾಗಿ ಪೊಲೀಸರ ಪರವಾಗಿ ಎಂದೂ ಧ್ವನಿ ಎತ್ತಲಿಲ್ಲ, ಎಲ್ಲಾ ಮುಗಿದ ಮೇಲೆ Rip..ಅಂತೆ.
ಹೃದಯಾಘಾತವಾತವಾಗುತ್ತದೆ ಎಂದು ಸಾರಿ ಸಾರಿ ಹೇಳಿದರೂ ಕ್ಯಾಮರಾ ಧರಿಸಬೇಕಂತೆ, ಕ್ಯಾಮರಾ ಮೇಲೆ ಇಟ್ಟಿರುವ ನಂಬಿಕೆ ಪೊಲೀಸರ ಮೇಲೆ ಇಲ್ಲವಂತೆ, ಎಲ್ಲಾ ಮುಗಿದ ಮೇಲೆ Rip..ಅಂತೆ" ಎಂದು ಪೊಲೀಸರ ಸ್ನೇಹಿತನೊಬ್ಬ ಬರೆದುಕೊಂಡಿದ್ದು, ಈಗ ವೈರಲ್‌ ಆಗುತ್ತಿದೆ. 

click me!