ಬೆಂಗಳೂರು ಏರ್ಪೋರ್ಟ್ ಜೊತೆ ಕೈಜೋಡಿಸಿದ ಕನ್ನಡ ಸಾಹಿತ್ಯ ಪರಿಷತ್: ಬಿಎಐಎಲ್‌ನಲ್ಲಿ ಮಂಡ್ಯ ಸಮ್ಮೇಳನದ ಮಾಹಿತಿ!

By Sathish Kumar KHFirst Published Sep 19, 2024, 11:24 AM IST
Highlights

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಬಗ್ಗೆ ಚರ್ಚಿಸಿದರು. ಬಿಎಐಎಲ್ ವಿಮಾನ ನಿಲ್ದಾಣವು ಸಮ್ಮೇಳನದ ಪ್ರಚಾರ ಮತ್ತು ಪ್ರತಿನಿಧಿಗಳ ಸ್ವಾಗತಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಿದೆ.

ಬೆಂಗಳೂರು (ಸೆ.19): ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಬಗ್ಗೆ ಚರ್ಚಿಸಿದರು. ಬಿಎಐಎಲ್ ವಿಮಾನ ನಿಲ್ದಾಣವು ಸಮ್ಮೇಳನದ ಪ್ರಚಾರ ಮತ್ತು ಪ್ರತಿನಿಧಿಗಳ ಸ್ವಾಗತಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಿದೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರು , ಬಿಎಐಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ  ಹರಿ ಮಾರರ್ ಮತ್ತು ಕಂಪನಿ ವ್ಯವಹಾರಗಳ ಮುಖ್ಯಸ್ಥರಾದ ಎಚ್. ಆರ್. ವೆಂಕಟ್ ರಾಮನ್  ಅವರನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ಕನ್ನಡ ಭಾಷೆ, ಕಲೆ, ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು  ಕೈಗೊಳ್ಳಬೇಕಾದ ಉಪಕ್ರಮಗಳ ಬಗ್ಗೆ ಚರ್ಚಿಸಲು ಸಭೆ ನಡೆಸಿದರು. 

Latest Videos

ಮಂಡ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಭರ್ಜರಿ ಲಾಬಿ: ಸಾಹಿತ್ಯೇತರ ಸಾಧಕರ ಪರಿಗಣಿಸಲು ಕೂಗು

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಂಬಲ ನೀಡಲು ಬಿಎಲ್ ಆರ್ ವಿಮಾನ ನಿಲ್ದಾಣವು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ವಿಮಾನ ನಿಲ್ದಾಣದಲ್ಲಿ ಪ್ರತಿನಿಧಿಗಳನ್ನು ಬರಮಾಡಿಕೊಳ್ಳಲು ಸ್ವಾಗತ ಡೆಸ್ಕ್ ಮತ್ತು ಫೋಟೋ ಬೂತ್ ಗಳನ್ನು ಒದಗಿಸಲಿದೆ. ಇದಲ್ಲದೆ, ಬಿಎಲ್ಆರ್ ವಿಮಾನ ನಿಲ್ದಾಣವು  ಈ ಸಮ್ಮೇಳನದ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಲು ಡಿಜಿಟಲ್ ಮಾಧ್ಯಮವನ್ನು ಬಳಸುತ್ತದಲ್ಲದೆ ಹಲವಾರು ಮನರಂಜನಾ ಚಟುವಟಿಕೆಗಳ ಮೂಲಕ ಪ್ರಯಾಣಿಕರನ್ನು ತೊಡಗಿಸಿಕೊಂಡು ಕನ್ನಡ ಭಾಷೆಯ ಪ್ರಚಾರ ಮಾಡಲಿದೆ.

ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯ ನಿರ್ವಾಹಕಾಧಿಕಾರಿ  ಹರಿ ಮರಾರ್ ಮಾತನಾಡಿ, ಕರ್ನಾಟಕದ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸಲು ಮತ್ತು ಪ್ರೋತ್ಸಾಹಿಸಲು  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆಯು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

click me!