ನಾಗಮಂಗಲ ಗಲಾಟೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಕೆಲವರು ತಪ್ಪು ಹೇಳಿಕೆ ನೀಡಿದ್ದಾರೆ ಎಂದು ನಮ ಅಧಿಕಾರಿಗಳು ಹೇಳುತ್ತಿದ್ದಾರೆ - ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ
ಬೆಂಗಳೂರು (ಸೆ.19): ನಾಗಮಂಗಲ ಗಲಾಟೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಕೆಲವರು ತಪ್ಪು ಹೇಳಿಕೆ ನೀಡಿದ್ದಾರೆ ಎಂದು ನಮ್ಮ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನು ಪುನರ್ ಪರಿಶೀಲಿಸಲಾಗುತ್ತಿದೆ ಎಂದರು.
ಒನ್ ನೇಷನ್ ಒನ್ ಎಲೆಕ್ಷನ್ ವಿಚಾರ ಸಂಬಂಧ ಮಾತನಾಡಿದ ಸಚಿವರು, ಇನ್ನೂ ಬಹಳಷ್ಟು ವಿವರಣೆ ಅದರಿಂದ ಬರಬೇಕಾಗುತ್ತದೆ. ಕನಿಷ್ಠ 2/3 ಸ್ಟೇಟ್ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಈಗ ತಾನೇ ರಾಷ್ಟ್ರಪತಿ ಕೋವಿಂದ್ ಅವರು ವರದಿ ಸಲ್ಲಿಸಿದ್ದಾರೆ. ಮುಂದೆ ಏನು ಡೆವಲಪ್ಮೆಂಟ್ ಆಗುತ್ತದೆ ನೋಡೋಣ. ರಾಜ್ಯಕ್ಕೆ ಬಂದ ಮೇಲೆ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ನಾಗಮಂಗಲ ಕೋಮುಗಲಭೆ ಪ್ರಕರಣ; ರಾಜ್ಯದ ಗೃಹಮಂತ್ರಿಯ ಉಡಾಫೆ ಹೇಳಿಕೆಗೆ ಸಂಸದ ಕೋಟ ಕಿಡಿ
ಇನ್ನು ಅಧಿಕಾರಿಗಳ ವಿರುದ್ಧ ಗೌವರ್ನರ್ ವರದಿ ಏನು ಅನ್ನೋದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ದಿನನಿತ್ಯ ಒಂದಲ್ಲ ಒಂದು ರೀತಿ ಕಂಪ್ಲೈಂಟ್ಸ್ ಬಂದಾಗ ಸರ್ಕಾರ ಕೇಳುತ್ತಾರೆ. ಅದು ಸ್ವಾಭಾವಿಕವಾಗಿ ಮಾಹಿತಿ ಕೇಳುತ್ತಾರೆ, ಸರ್ಕಾರ ಉತ್ತರ ಕೊಡುತ್ತದೆ ಎಂದರು. ಇದೇ ವೇಳೆ ಸರ್ಕಾರವೇ ಕುಲಪತಿಗಳ ನೇಮಕ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ರಾಜ್ಯಪಾಲರ ರೋಲ್ ಏನು ಅಂತಾ ಮಾಡಿದ್ದಾರೆ.
ಮುಸ್ಲಿಂರ ಕೈಯಿಂದ ಪೆಟ್ರೋಲ್ ಬಾಂಬ್, ತಲ್ವಾರ್ ಕಿತ್ತುಕೊಳ್ಳಿ; ಇಲ್ಲದಿದ್ರೆ ನಾವೂ ಹಿಡಿಯುತ್ತೇವೆ: ಪ್ರತಾಪ್ ಸಿಂಹ
ನಾನು ಹೈಯರ್ ಎಜುಕೇಷನ್ ಮಿನಿಸ್ಟರ್ ಇದ್ದೆ. ಆಗ ವಿಸಿ ಗಳನ್ನು ನೇಮಕ ಮಾಡೋದನ್ನು ಗವರ್ನರ್ ಅವರಿಂದ ಮೊಟಕುಗೊಳಿಸಿದ್ದೆ. ಸರ್ಕಾರದ ತೀರ್ಮಾನ ಆಗುವ ರೀತಿಯಲ್ಲಿ ನಾನು ಮಾಡಿದ್ದೆ. ಗುಜರಾತಿನಲ್ಲಿ ಆಡಳಿತಕ್ಕೆ ಅವರು ಒಳಗಾಗುವುದಿಲ್ಲ. ಅಡಳಿತದ ದೃಷ್ಟಿಯಿಂದ ಯಾವುದು ಸುಲಭ ಅಂತ ಮಾಡಿರುತ್ತಾರೆ. ನಾವು ಒಬ್ಬರೇ ಮಾಡಿಲ್ಲ, ಬೇರೆ ಬೇರೆ ರಾಜ್ಯದಲ್ಲಿಯೂ ಮಾಡಿದ್ದಾರೆ. ಇದು ಹೊಸದೇನಲ್ಲ, 2000 ಬಿಲ್ ಪಾಸ್ ಮಾಡಿದ್ದೇವು. ಅದರ ಬಗ್ಗೆ ಚರ್ಚೆ ನಡೆಯುತ್ತಿರುತ್ತವೆ.