
ಬೆಂಗಳೂರು, (ನ.26): ನಾದಬ್ರಹ್ಮ ಹಂಸಲೇಖ (Hamsalekha) ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿರುವ ಹೇಳಿಕೆ ಭಾರೀ ಪರ-ವಿರೋಧಕ್ಕೆ ಕಾರಣವಾಗಿದೆ.
ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಪೇಜಾವರ ಶ್ರೀಗಳ (Pejawar Shree) ವಿರುದ್ಧ ಜ್ಞಾನಪ್ರಕಾಶ ಸ್ವಾಮೀಜಿ (Jnanaprakasha Swamiji) ಗಂಭೀರ ಆರೋಪ ಮಾಡಿದ್ದಾರೆ.
Remark Against Pejawara Shri : ವಿಚಾರಣೆಗೆ ಹಾಜರಾದ ಹಂಸಲೇಖ - ಪರ, ವಿರೋಧಿ ಪ್ರತಿಭಟನೆ
ಹಂಸಲೇಖ ಹೇಳಿಕೆ ಬೆಂಬಲಿಸಿ ಬೆಂಗಳೂರಿನಲ್ಲಿ ಇಂದು (ನ.26) ಸಂವಿಧಾನ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಜ್ಞಾನಪ್ರಕಾಶ ಸ್ವಾಮೀಜಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಂದಾಗ ಪೇಜಾವರರು ನಿರಾಕರಿಸಿದ್ರು. ಅವರು ಈ ನೆಲದ ಕಾನೂನಿಗೆ ಅವಮಾನ ಮಾಡಿಲ್ವಾ ಎಂದು ಪ್ರಶ್ನಿಸಿದರು.
ನಮ್ಮ ದಲಿತರ ಕಾಲನಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದ್ರೆ ಬೇಡ ಅಂದಿದ್ರು. ಒಂದು ಲೋಟ ಮಜ್ಜಿಗೆ ಕುಡಿಯದೇ, ದಲಿತ ಕಾಲನಿಗೆ ಪಾದಯಾತ್ರೆ ಮಾಡೋದು ಬುಟಾಟಿಕೆಯಲ್ವಾ. ಹಂಸಲೇಖರ ಮಾತಿನಲ್ಲಿ ಯಾವುದು ತಪ್ಪಿದೆ ಎಂದು ಎಂದರು.
ನಾದಬ್ರಹ್ಮ ಹಂಸಲೇಖ ಹೇಳಿಕೆ ಬೆಂಬಲಿಸಿ ಬೆಂಗಳೂರಿನಲ್ಲಿ ಸಂವಿಧಾನ ಹಿತರಕ್ಷಣಾ ಸಮಿತಿ ಮೆಜೆಸ್ಟಿಕ್ನಿಂದ ಫ್ರೀಡಂಪಾರ್ಕ್ವರೆಗೆ ಕಾಲ್ನಡಿಗೆ ಜಾಥಾ ನಡೆಸಿ. ಮೆರವಣಿಗೆ ಬಳಿಕ ಫ್ರೀಡಂಪಾರ್ಕ್ನಲ್ಲಿ ಬಹಿರಂಗ ಸಭೆ ನಡೆಸಿತು. ಈ ಪ್ರತಿಭಟನಾ ಜಾಥಾಗೆ ಕನ್ನಡಪರ, ದಲಿತಪರ ಸಂಘಟನೆ, ಹಿಂದುಳಿದ ವರ್ಗಗಳ ಸಂಘಟನೆಗಳು ಸಾಥ್ ನೀಡಿವೆ.
ಪ್ರತಿಭಟನಾ ಸ್ಥಳ ಫ್ರೀಡಂಪಾರ್ಕ್‌ಗೆ ಸಚಿವ ಎಸ್. ಅಂಗಾರ ಭೇಟಿ ನೀಡಿ, ಪ್ರತಿಭಟನೆಕಾರರ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಹಕ್ಕೊತ್ತಾಯದ ಮನವಿಯನ್ನು ಸರ್ಕಾರದ ಪರ ಪಡೆದಿದ್ದೇನೆ. ಸಿಎಂ, ಅಧಿಕಾರಿಗಳ ಜೊತೆ ಚರ್ಚಿಸಿ ಬೇಡಿಕೆ ಈಡೇರಿಸ್ತೇವೆ ಎಂದು ಹೇಳಿದರು.
ಹಂಸಲೇಖ ಹೇಳಿದ್ದೇನು?
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ, ದಲಿತರ ಮನೆಗೆ ಪೇಜಾವರ ಶ್ರೀಗಳು ಹೋಗಬಹುದು. ಆದರೆ, ಅವರ ಮನೆಯಲ್ಲಿ ಕೋಳಿ ಕೊಟ್ಟರೆ ತಿನ್ನಲು ಸಾಧ್ಯವಾ ಎಂದಿದ್ದರು. ದಲಿತರ ಮನೆಗೆ ಬಲಿತರ ಹೋಗೋದಲ್ಲ, ದಲಿತರನ್ನು ಬಲಿತರು ಮನೆಗೆ ಕರೆಸಿಕೊಳ್ಳುಬೇಕು ಎಂದಿದ್ದರು. ಅವರ ಈ ಹೇಳಿಕೆ ಕುರಿತು ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದಾದ ಬಳಿಕ ಹಂಸಲೇಖ ಅವರು ತಾವು ಆಡಿದ ಮಾತಿಗೆ ಕ್ಷಮೆ ಕೋರಿದ್ದರು. ಈ ಸಂಬಂಧ ಬಸವನ ಗುಡಿ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈ ದೂರಿನ ವಿಚಾರಣೆಗೆ ಈ ಹಿಂದೆ ಅನಾರೋಗ್ಯದ ಕಾರಣ ನೀಡಿ ಹಂಸಲೇಖ ಅವರು ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಪೊಲೀಸರು ನ. 25ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಆ ನೋಟಿಸ್ನಂತೆ ಇಂದು ಹಂಸಲೇಖ ಅವರು ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಾಗೂ ಸಿನಿಮಾ ಸಾಹಿತಿ ಹಂಸಲೇಖ ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಪೇಜಾವರಶ್ರೀಗಳ ಕುರಿತಾಗಿ ಆಡಿದ ಮಾತುಗಳು ವಿವಾದಕ್ಕೆ ಕಾರಣ ಆಗಿದ್ದವು. ಈ ಹಿನ್ನೆಲೆಯಲ್ಲಿ ವಾದ, ವಿವಾದಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿತ್ತು. ಬಳಿಕ ಘಟನೆ ಸಂಬಂಧ ಪ್ರತಿಭಟನೆಗಳು ನಡೆದಿದ್ದವು. ಹಂಸಲೇಖ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ