ಮೈಸೂರು (ನ.26): ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್ (IRCTC) ರೈಲ್ವೆ ಸಚಿವಾಲಯ (Railway Ministry) ಅಡಿಯಲ್ಲಿನ ಒಂದು ಸಾರ್ವಜನಿಕ ಉದ್ಯಮವಾಗಿದ್ದು, ಈ ಬಾರಿ ಸಾರ್ವಜನಿಕರು ಮತ್ತು ಯಾತ್ರಾರ್ಥಿಗಳಿಗಾಗಿ ವಿವಿಧ ಯಾತ್ರಾ ಯೋಜನೆ ಆರಂಭಿಸಿದೆ. ಈ ಬಾರಿ ಹರಿಹರ ದರ್ಶನ ಯಾತ್ರಾ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಪ್ರತಿಮೆ ವೀಕ್ಷಣೆ ಎಂಬ 10 ರಾತ್ರಿ, 11 ಹಗಲುಗಳ ಒಂದು ವಿಶೇಷ ಪ್ರವಾಸಿ ರೈಲು ಪ್ರವಾಸವನ್ನು (Tailway Tour) ಆಯೋಜಿಸಿದೆ. ಈ ವಿಶೇಷ ಪ್ರವಾಸಿ ರೈಲು ಡಿ. 10 ರಂದು ಮಧುರೈ ರೈಲು ನಿಲ್ದಾಣದಿಂದ ಹೊರಟು ಅಹಮದಾಬಾದ್ ಅಕ್ಷರ್ ಧಾಮ್ ಮಂದಿರ್- ನಿಶ್ಕಳಂಕ ಮಹಾದೇವ -ದ್ವಾರಕಾ-ಬೆಟ್ ದ್ವಾರಕಾ-ನಾಗೇಶ್ವರ್ (ಜ್ಯೋತಿರ್ಲಿಂಗ್)-ಸೋಮನಾಥ (ಜ್ಯೋತಿರ್ಲಿಂಗ)-ಉಜ್ಜಯಿನಿ ಮಹಾಕಾಳೇಶ್ವರ (ಜ್ಯೋತಿರ್ಲಿಂಗ)- ಓಂಕಾರೇಶ್ವರ (ಜ್ಯೋತಿರ್ಲಿಂಗ) ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆ ವೀಕ್ಷಣೆ ಮಾಡಬಹುದು.
ಕರ್ನಾಟಕದ (Karnataka) ಭಕ್ತರು ಹಾಗೆ ಪ್ರವಾಸಿಗರ ಅನುಕೂಲವಾಗುವಂತೆ ಈ ಪ್ರವಾಸಿ ರೈಲು (Bengaluru), ತುಮಕೂರು (Tumakuru), ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ (Hubli) ಮತ್ತು ಬೆಳಗಾವಿ ಮಾರ್ಗವಾಗಿ ಹೋಗಲಿದೆ.
undefined
ಸ್ಲಿಪರ್ ಕ್ಲಾಸ್ (Sleeper class) ರೈಲು ಪ್ರಯಾಣದಲ್ಲಿ ರಾತ್ರಿ ಉಳಿಯಲು ಅಥವಾ ಫ್ರೆಶ್ ಆಗಲು ಧರ್ಮಶಾಲಾ, ಹಾಲ್, ಡಾರ್ಮಿಟರಿ ವ್ಯವಸ್ಥೆ ಬಹು ಹಂಚಿಕೆ ಆಧಾರದ ಮೇಲೆ ನೀಡಲಾಗುವುದು. ಬೆಳಗಿನ ಟೀ, ಕಾಫಿ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ, ಜೊತೆಗೆ ದಿನಕ್ಕೆ ಒಂದು ಲೀಟರ್ ಕುಡಿವ ನೀರಿನ ಬಾಟಲ್ ನೀಡಲಾಗುವದು. ಸಾಮಾನ್ಯ ಬಸ್ಸುಗಳಲ್ಲಿ ಸ್ಥಳೀಯ ಸ್ಥಳಗಳ ವೀಕ್ಷಣೆ, ಪ್ರವಾಸಿ ವ್ಯವಸ್ಥಾಪಕರು ಮತ್ತು ಭದ್ರತೆ ಸಿಬ್ಬಂದಿ ಇರಲಿದ್ದು, ಪ್ರಯಾಣ ವಿಮೆ ಮಾಡಿಸಲಾಗುವುದು. ಈ ಪ್ರವಾಸಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಿ ನೌಕರರು, ಎಲ್ಟಿಸಿ ಸೌಲಭ್ಯ ಕೂಡ ಪಡೆಯಬಹುದು. ಈ ಪ್ರವಾಸಕ್ಕೆ ಐಆರ್‌ಸಿಟಿಸಿ ಕೌಂಟರ್‌ಗಳಲ್ಲಿ ಮತ್ತು ಆನ್‌ಲೈನ್ ಮೂಲಕ ಬುಕ್ಕಿಂಗ್ ಆರಂಭಿಸಲಾಗಿದೆ.
ಬುಕಿಂಗ್ ಅಥವಾ ವಿವರಗಳಿಗೆ ಮೈಸೂರು (Mysuru) ರೈಲು ನಿಲ್ದಾಣ ಮೊ. 85959 31294 ಸಂಪರ್ಕಿಸಬಹುದು.
ಸೆಂಟ್ರಲ್ ರೈಲ್ವೆಯಲ್ಲಿ ಉದ್ಯೋಗಾವಕಾಶ : ಕೇಂದ್ರ ರೇಲ್ವೆ (Central Railway)ವಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಟ್ರೈನ್ಡ್ ಗ್ರಾಜುಯೇಟ್ ಟೀಚರ್(Trained Graduate Teacher), ಪೋಸ್ಟ್ ಗ್ರಾಜುಯೇಟ್ ಟೀಚರ್(Post Graduate Teacher), ಪ್ರೈಮರಿ ಟೀಚರ್(Primary Teacher) ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ. ಸೆಂಟ್ರಲ್ ರೇಲ್ವೆಯು (Central Railway)ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ, ಬಿ.ಎಡ್, ಬಿಎಸ್ಸಿ, ಬಿಎ, ಎಂಸ್ಸಿ, ಎಂಎ, ಎಂ.ಕಾಂ, CTET, D. Ed ಪೂರ್ಣಗೊಳಿಸಿಬೇಕು. ನೇರ ಸಂದರ್ಶನದ(Walk-in-Interview) ಮೂಲಕ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದೇ ನವೆಂಬರ್ 25, 26 ಮತ್ತು 27ರಂದು ಮೂರು ದಿನ ನಿರಂತರವಾಗಿ ನೇರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಹುದ್ದೆಗಳ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಸಂದರ್ಶನ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿಯಲು ಅಧಿಸೂಚನೆಯನ್ನು ಪರಿಶೀಲಿಸಬಹುದು. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸೆಂಟ್ರಲ್ ರೇಲ್ವೆಯು ಪೋಸ್ಟ್ ಗ್ರಾಜುಯೇಟ್ ಟೀಚರ್ ಫಾರ್ ಇಂಗ್ಲಿಷ್ -1 ಹುದ್ದೆ, ಪೋಸ್ಟ್ ಗ್ರಾಜುಯೇಟ್ ಟೀಚರ್ ಎಕಾನಾಮಿಕ್ಸ್ - 01 ಹುದ್ದೆ, ಪೋಸ್ಟ್ ಗ್ರಾಜುಯೇಟ್ ಟೀಚರ್ ಫಾರ್ ಬ್ಯುಸಿನೆಸ್ ಸ್ಟಡೀಸ್ -1 ಹುದ್ದೆ, ಟ್ರೈನ್ಡ್ ಗ್ರಾಜುಯೇಟ್ ಟೀಚರ್ ಫಾರ್ ಸೈನ್ಸ್ -1 ಹುದ್ದೆ, ಟ್ರೈನ್ಡ್ ಗ್ರಾಜುಯೇಟ್ ಟೀಚರ್ ಫಾರ್ ಕಂಪ್ಯೂಟರ್ ಸೈನ್ಸ್ - 01 ಹುದ್ದೆ, ಟ್ರೈನ್ಡ್ ಗ್ರಾಜುಯೇಟ್ ಟೀಚರ್ ಫಾರ್ ಸೋಷಿಯಲ್ ಸೈನ್ಸ್ -1 ಹುದ್ದೆ, ಟ್ರೈನ್ಡ್ ಗ್ರಾಜುಯೇಟ್ ಟೀಚರ್ ಫಾರ್ ಇಂಗ್ಲೀಷ್ (T.G Teacher for English)-2 ಹುದ್ದೆ, ಪ್ರೈಮರಿ ಟೀಚರ್ (Primary Teacher)-2 ಹುದ್ದೆ ಸೇರಿ ಒಟ್ಟು 10 ಹುದ್ದೆಗಳನ್ನು ಭರ್ತಿ ಕೊಳ್ಳಲಾಗುತ್ತಿದೆ.
P.G ಟೀಚರ್ (ಇಂಗ್ಲಿಷ್)ಹುದ್ದೆಗೆ ಅಭ್ಯರ್ಥಿಯು MA (ಇಂಗ್ಲಿಷ್ ಸಾಹಿತ್ಯ, ಮುಖ್ಯ ವಿಷಯವಾಗಿ)/ B.Ed ನಲ್ಲಿ ಮಾಡಿರಬೇಕು. P.G ಟೀಚರ್ (ಅರ್ಥಶಾಸ್ತ್ರ) ಹುದ್ದೆಗೆ ಅಭ್ಯರ್ಥಿಯು (ಅರ್ಥಶಾಸ್ತ್ರ)/B.Ed ನಲ್ಲಿ MA ಮಾಡಿರಬೇಕು. P.G ಟೀಚರ್ (ವ್ಯಾಪಾರ ಅಧ್ಯಯನ) ಹುದ್ದೆಗೆ ಅಭ್ಯರ್ಥಿಯು M.Com/B.Ed ಮಾಡಿರಬೇಕು. T.G ಟೀಚರ್ (ವಿಜ್ಞಾನ) ಹುದ್ದೆಗೆ ಅಭ್ಯರ್ಥಿಯು B.Sc/B.Ed/CTET ಮಾಡಿರಬೇಕು. ಟಿ.ಜಿ ಟೀಚರ್ (ಕಂಪ್ಯೂಟರ್ ಸೈನ್ಸ್) ಹುದ್ದೆಗೆ ಅಭ್ಯರ್ಥಿಯು ಬಿಎಸ್ಸಿ (ಕಂಪ್ಯೂಟರ್ ಸೈನ್ಸ್ ಐಟಿ) ಮತ್ತು ಎಂಸಿಎ ಮಾಡಿರಬೇಕು. ಟಿ.ಜಿ ಟೀಚರ್ (ಸಮಾಜ ವಿಜ್ಞಾನ) ಹುದ್ದೆಗೆ ಅಭ್ಯರ್ಥಿಯು ಬಿಎ (ಇತಿಹಾಸ/ಭೂಗೋಳ ಅಥವಾ ರಾಜಕೀಯ ವಿಜ್ಞಾನ), ಬಿಎಡ್ ಮಾಡಿರಬೇಕು. T.G ಟೀಚರ್ (ಇಂಗ್ಲಿಷ್) ಹುದ್ದೆಗೆ ಅಭ್ಯರ್ಥಿಯು (ಇಂಗ್ಲಿಷ್) B.Ed/CTET ನಲ್ಲಿ BA ಮಾಡಿರಬೇಕು. ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಅಭ್ಯರ್ಥಿಯು ಕನಿಷ್ಠ 50% ಅಂಕಗಳೊಂದಿಗೆ 12 ನೇ ತರಗತಿ ಹಾಗೂ 2 ವರ್ಷಗಳೊಂದಿಗೆ D.Ed.ಪೂರ್ಣಗೊಳಿಸಿರಬೇಕು.
ಟ್ರೈನ್ಡ್ ಗ್ರಾಜುಯೇಟ್ ಟೀಚರ್, ಪೋಸ್ಟ್ ಗ್ರಾಜುಯೇಟ್ ಟೀಚರ್, ಪ್ರೈಮರಿ ಟೀಚರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-65 ವರ್ಷದೊಳಗಿರಬೇಕು. ಟ್ರೈನ್ಡ್ ಗ್ರಾಜುಯೇಟ್ ಟೀಚರ್, ಪೋಸ್ಟ್ ಗ್ರಾಜುಯೇಟ್ ಟೀಚರ್, ಪ್ರೈಮರಿ ಟೀಚರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಹಾರಾಷ್ಟ್ರದ ಮುಂಬೈನಲ್ಲಿ ಉದ್ಯೋಗ ನೀಡಲಾಗುತ್ತದೆ. ಟ್ರೈನ್ಡ್ ಗ್ರಾಜುಯೇಟ್ ಟೀಚರ್, ಪೋಸ್ಟ್ ಗ್ರಾಜುಯೇಟ್ ಟೀಚರ್, ಪ್ರೈಮರಿ ಟೀಚರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 21,250 ರಿಂದ ₹27,500 ವೇತನ ನೀಡಲಾಗುತ್ತದೆ.
ಮೊದಲು ದಾಖಲಾತಿಗಳ ಪರಿಶೀಲನೆ ನಡೆಸಿದ ಬಳಿಕ ವೈಯಕ್ತಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಪ್ರಿನ್ಸಿಪಾಲ್ ಚೇಂಬರ್, ಸೆಂಟ್ರಲ್ ರೈಲ್ವೆ ಸೆಕ್ಷನ್ & ಸ್ಕೂಲ್ ಜೂನಿಯರ್ ಕಾಲೇಜು, ಕಲ್ಯಾಣ್ -ಇಲ್ಲಿ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ಮೂಲ ಮತ್ತು ಸ್ವಯಂ-ದೃಢೀಕರಿಸಿದ ಎಲ್ಲಾ ಸಂಬಂಧಿತ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.