
ಶೃಂಗೇರಿ(ಜ.25)ಸನಾತನದ ಧರ್ಮದ ಪುನರುಜ್ಜೀವನದಲ್ಲಿ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಕೊಡುಗೆ ಅಪಾರ. 12ನೇ ಶತಮಾನದಲ್ಲಿ ಸ್ಥಾಪಿಸಿದ ನಾಲ್ಕು ಪೀಠಗಳ ಪೈಕಿ ಪ್ರಮುಖ ಹಾಗೂ ಅಗ್ರಪೀಠ ಶೃಂಗೇರಿಯ ಶಾರಾದಾ ಪೀಠದಲ್ಲಿ ಇದೀಗ ನೂತನ ಮುಖ್ಯ ಆಡಳಿತಾಧಿಕಾರಿ ನೇಮಕವಾಗಿದೆ. ಶೃಂಗೇರಿ ಹಿರಿಯ ಜಗದ್ಗುರು ಭಾರತೀ ತೀರ್ಥ ಶ್ರೀಗಳು, ಮಠದ ಮುಖ್ಯ ಆಡಳಿತಾಧಿಕಾರಿಯಾಗಿ ಪಿಎ ಮುರಳಿ ಅವರನ್ನು ನೇಮಕ ಮಾಡಿದ್ದಾರೆ.
1986ರಿಂದ ಇದುವರೆಗೂ ಶೃಂಗೇರಿ ಮಠದ ಮುಖ್ಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಗೌರಿ ಶಂಕರ್ ಅವರಿಗೆ ಮುಖ್ಯ ಸಲಹೆಗಾರರನ್ನಾಗಿ ಬಡ್ತಿ ನೀಡಲಾಗಿದೆ. ಹೀಗಾಗಿ ತೆರವಾದ ಮುಖ್ಯ ಆಡಳಿತಾಧಿಕಾರಿ ಸ್ಥಾನಕ್ಕೆ ಪಿಎ ಮುರುಳಿಯನ್ನು ನೇಮಕ ಮಾಡಲಾಗಿದೆ.ಫೆಬ್ರವರಿ 12ಕ್ಕೆ ಕಿರಿಯ ಶ್ರೀ ವಿಧುಶೇಖರ ಶ್ರೀಗಳು ಸನ್ಯಾಸ ಸ್ವೀಕರಿಸಿ 9 ವರ್ಷಗಳಾಗಲಿವೆ. ಇದೇ ಶುಭ ಸಂದರ್ಭದಲ್ಲಿ ಗೌರಿ ಶಂಕರ್‌ಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುದೀರ್ಘ ವರ್ಷಗಳ ಕಾಲ ಶೃಂಗೇರಿಯಾ ಶಾರಾದಾಂಬ ಪೀಠಕ್ಕೆ ನೀಡಿದ ಸಮರ್ಪಿತ ಸೇವೆಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ಅಯೋಧ್ಯಾ ರಾಮಲಲ್ಲಾ ಪ್ರತಿಷ್ಠಾಪನೆ ವಿರೋಧವೆಂಬ ಅಪಪ್ರಚಾರಕ್ಕೆ ಶೃಂಗೇರಿ ಜಗದ್ಗರು ಬೇಸರ
ಸುಮಾರು ನಾಲ್ಕು ದಶಕಗಳಿಂದ ಶೃಂಗೇರಿ ಮಠವನ್ನು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ನಿರ್ವಹಿಸಿದ ಹೆಗ್ಗಳಿಕೆಗೆ ಗೌರಿಶಂಕರ್ ಪಾತ್ರರಾಗಿದ್ದಾರೆ. ಮಠದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮುತುವರ್ಜಿ ವಹಿಸಿ ಮಾಡಿದ್ದಾರೆ. ಈ ಮೂಲಕ ಗೌರಿ ಶಂಕರ್ ಶೃಂಗೇರಿ ಮಠದ ವಿವಿಧ ಶಾಖೆಗಳು ಮತ್ತು ಅಂಗ ಸಂಸ್ಥೆಗಳ ಮುಖ್ಯಸ್ಥರು, ಮಠದ ಅಸಂಖ್ಯಾತ ಭಕ್ತರ ಗೌರವಕ್ಕೆ ಪಾತ್ರರಾಗಿದ್ದಾರೆ.ಹೀಗಾಗಿ ಗೌರಿ ಶಂಕರ್ ಮುಖ್ಯ ಸಲಹೆಗಾರರಾಗಿ ಮುಂದುವರಿಯುತ್ತಿದ್ದರೂ ಗೌರವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶೃಂಗೇರಿ ಪೀಠ ಹೇಳಿದೆ.
ಶೃಂಗೇರಿ ಮಠ ಮತ್ತು, ಮಠದ ಶಾಖೆಗಳು ಹಾಗೂ ಸಂಯೋಜಿತ ಸಂಸ್ಥೆಗಳ ವಿವಿಧ ವ್ಯವಹಾರಗಳನ್ನು ನಿರ್ವಹಿಸುವ ಮಹತ್ತರ ಜವಾಬ್ದಾರಿ ಇದೀಗ ನೂತನವಾಗಿ ನೇಮಕಗೊಂಡಿರುವ ಮುಖ್ಯ ಆಡಳಿತಾಧಿಕಾರಿ ಪಿಎ ಮುರಳಿ ಹೇಗಲೇರಿದೆ.
ಅಯೋಧ್ಯೆ ರಾಮಮಂದಿರ ಪುನರ್ ಪ್ರತಿಷ್ಠಾಪನೆಗೆ 4 ಶಂಕರಪೀಠ ದೂರ ವಿಚಾರ: ಗೌರಿಶಂಕರ್ ಹೇಳಿದ್ದೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ