ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಉಳಿಯಲ್ಲ, ಇದನ್ನರಿತೇ ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದಿದ್ದಾರೆ: ಬೊಮ್ಮಾಯಿ

By Sathish Kumar KHFirst Published Jan 25, 2024, 6:59 PM IST
Highlights

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ಗೆ ಉಳಿಗಾಲವಿಲ್ಲವೆಂಬುದನ್ನು ತಿಳಿದಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದಿರಬಹುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು (ಜ.25): ದೇಶದಲ್ಲಿ ಲೋಕಸಭಾ ಚುನಾವಣೆ 2024ರ ಬಳಿಕೆ ಕಾಂಗ್ರೆಸ್‌ಗೆ ಉಳಿಗಾಲ ಇರುವುದಿಲ್ಲವೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಒಳ್ಳೆಯ ಸಮಯದಲ್ಲಿಯೇ ಬಿಜೆಪಿಗೆ ಬಂದಿರಬರಹುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ನಲ್ಲಿ ಇರೋಕೆ ಆಗಲ್ಲ. ಅವರಿಗೆ ಉಸಿರುಗಟ್ಟಿಸುವ ವಾತಾವರಣ ಇತ್ತು. ಆದ್ದರಿಂದ ಅವರು ಬರೋದು ನಿರೀಕ್ಷೆ ಇತ್ತು. ಒಬ್ಬ ರಾಜಕಾರಣಿ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ  ಮಾಡ್ತಾರೆ. ಈಗ ಮೋದಿ ಅಲೆ ಇದೆ. ಬಿಜೆಪಿ ಗೆಲ್ಲೋದು ಖಚಿತ ಇದೆ. ಇದೇ ಸಮಯದಲ್ಲಿ ಶೆಟ್ಟರ್ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.

ವಿಧಾನಸಭಾ ಚುನಾವಣೆಯ ವೇಳೆ ಜಗದೀಶ್ ಶೆಟ್ಟರ್ ಅವರು ಟಿಕೆಟ್ ಸಿಕ್ಕಿಲ್ಲವೆಂದು ಆವೇಶ ಮಾಡಿಕೊಂಡು ಕಾಂಗ್ರೆಸ್ ಸೇರಿದರು. ದೇಶದಲ್ಲಿ ಅನೇಕ ಹಿರಿಯರಿಗೆ ಟಿಕೆಟ್ ಇಲ್ಲ ಎಂಬ ನಿರ್ಧಾರವನ್ನು ಪಕ್ಷವೇ ಮಾಡಿತ್ತು. ಇನ್ನು ಅನೇಕರಿಗೆ ಕೂಡ ಟಿಕೆಟ್ ಸಿಗ್ತಾ ಇರಲಿಲ್ಲ. ಆದರೆ, ನಾವು ಹೈಕಮಾಂಡ್‌ನೊಂದಿಗೆ ಮಾತಾಡಿ  ಟಿಕೆಟ್ ತಪ್ಪದಂತೆ ಮಾಡಿದ್ದೇವೆ. ಹಿರಿಯರಿಗೆ ಟಿಕೆಟ್ ಇಲ್ಲ ಎಂದಾಗ ಅದರಲ್ಲಿ ಶೆಟ್ಟರ್ ಗೂ ಟಿಕೆಟ್ ಸಿಕ್ಕಿರಲಿಲ್ಲ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಇರೋದಿಲ್ಲ ಎನ್ನುವ ಕಾರಣಕ್ಕೂ ಶೆಟ್ಟರ್ ಬಿಜೆಪಿ ಸೇರಿರಬಹುದು. ಇದು ನನ್ನ ವಾದ ಎಂದು ಬಸವರಾಜ ಬೊಮ್ಮಾಯಿ‌ ಹೇಳಿದರು.

ರಾಜಕೀಯದಲ್ಲಿ ಎಲ್ಲವನ್ನೂ ಒಳಗೊಂಡಿರೋದೆ ಸಿದ್ಧಾಂತ. ರಾಜಕಾರಣವೇ ಒಂದು ಸಿದ್ದಾಂತ. ಅಭಿವೃದ್ಧಿ ರಾಜಕೀಯ, ಎಲ್ಲಾರನ್ನೂ ಒಳಗೊಂಡ ರಾಜಕೀಯ, ಅದೇ ಒಂದು ಸಿದ್ದಾಂತವಾಗಿದೆ. ಅದನ್ನ ಮೋದಿ ಮಾಡಿ ತೋರಿಸಿದ್ದಾರೆ. ಈಗ ಲಿಫ್ಟಿಸಂ ಎಲ್ಲಿದೆ? ಶೆಟ್ಟರ್ ಅವರಿಗೆ ಲೋಕಸಭಾ ಟಿಕೆಟ್ ಬಗ್ಗೆ ಕೇಂದ್ರ ನಿರ್ಧಾರ ಮಾಡುತ್ತದೆ. ನಾನು ಹಾವೇರಿಯಿಂದ ಅಪೇಕ್ಷಿತ ಅಲ್ಲ ಎನ್ನೋದನ್ನ ಈಗಾಗಲೇ ಹೇಳಿದ್ದೇನೆ. ಶೆಟ್ಟರ್ ಅವರು ಬಿಜೆಪಿ ಸೇರುವ ಬಗ್ಗೆ ಮೊದಲೇ ಸುಳಿವು ನೀಡಿದ್ದ ಸುವರ್ಣ ನ್ಯೂಸ್ ಗೆ ನಾನು ಅಭಿನಂದನೆ ಹೇಳುತ್ತೇನೆ. ನಿಮ್ಮಿಂದದ ಇನ್ನು ನಿರೀಕ್ಷೆ ಮಾಡುತ್ತೇನೆ. ನಿಮ್ಮ ಸುವರ್ಣ ನ್ಯೂಸ್ ಮೂಲಕವೇ ಇನ್ನಷ್ಟು ಸುದ್ದಿ ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಕಾಂಗ್ರೆಸ್ ಮೇಲಿನ ಪ್ರೀತಿಯಿಂದ ಹೋಗಿರಲಿಲ್ಲ. ಬಿಜೆಪಿಯಲ್ಲಿ ಆಗಿರುವ ಬೇಸರದಿಂದ ಕಾಂಗ್ರೆಸ್ ಗೆ ಹೋಗಿದ್ದರು. ಅವರನ್ನು ನಾನು ಜನಸಂಘದಿಂದ ಬಹಳ ಹತ್ತಿರದಿಂದ ನೋಡಿದ್ದೇನೆ. ಅವರಿಗೆ ಕಾಂಗ್ರೆಸ್ ಡಿಎನ್ ಎ ಒಗ್ಗುವುದಿಲ್ಲ. ಶೆಟ್ಟರ್ ಅವರ ದೇಹ ಮಾತ್ರ ಕಾಂಗ್ರೆಸ್ ಗೆ ಹೋಗಿತ್ತು. ಅವರ ಮನಸ್ಸು ಬಿಜೆಪಿಯಲ್ಲಿಯೇ ಇತ್ತು. ಅವರಿಗೆ ಕಾಂಗ್ರೆಸ್ ಸೇರಿದ ಮೇಲೆ ಅಲ್ಲಿನ ಮನಸ್ಥಿತಿ ಅರ್ಥವಾಗಿದೆ‌. ಇದು ಬಿಜೆಪಿ ಮತ್ತು ಜಗದೀಶ್ ಶೆಟ್ಟರ್ ಅವರಿಗೂ ಅನಕೂಲವಾಗಲಿದೆ ಎಂದು ಹೇಳಿದರು. 

click me!