ಮಂಡ್ಯ ಲೋಕಸಭಾ ಕ್ಷೇತ್ರವನ್ನು ಅಂಬರೀಶ್ ಅವರ ಪತ್ನಿ ಸುಮಲತಾ ಅವರಿಗೆ ಬಿಟ್ಟುಕೊಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಮನವಿ ಮಾಡುತ್ತೇವೆ ಎಂದು ಕೆ.ಸಿ. ನಾರಾಯಣಗೌಡ ಹೇಳಿದರು.
ಬೆಂಗಳೂರು (ಜ.25): ಮಂಡ್ಯ ಲೋಕಸಭಾ ಕ್ಷೇತ್ರವು ಮಾಜಿ ಸಚಿವ ಅಂಬರೀಶ್ ಹುಟ್ಟೂರು ಹಾಗೂ ತವರು ಕ್ಷೇತ್ರವಾಗಿದೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ರಾಮನಗರ ಜಿಲ್ಲೆ ಲಕ್ಕಿ ಕ್ಷೇತ್ರವಾಗಿದೆ. ಆದ್ದರಿಂದ ನೀವು ಸಿಟ್ಟಿಂಗ್ ಎಂಪಿ ಹಾಗೂ ಅಂಬರೀಶ್ ಅವರ ಪತ್ನಿ ಸುಮಲತಾ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಮೈತ್ರಿ ಪಕ್ಷದ ಮುಖ್ಯಸ್ಥರಾದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ಮನವಿ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರತಿ ಚುನಾವಣೆಯಲ್ಲಿಯೂ ರಾಜಕೀಯದಲ್ಲಿ ಭಾರಿ ಸದ್ದು ಮಾಡುವಂತಹ ಕ್ಷೇತ್ರವಾದ ಮಂಡ್ಯದಲ್ಲಿ ಈಗ ಲೋಕಸಭಾ ಚುನಾವಣೆಗೂ ಮುನ್ನವೇ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ನಾಯಕರ ರಾಜಕಾರಣ ಜೋರಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಸಿಎಂ ಆಗಿದ್ದ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದರೂ ಸುಮಲತಾ ಅಂಬರೀಶ್ ಅವರ ವಿರುದ್ಧ ಸೋಲನುಭವಿಸಿದರು. ಆದರೆ, ಈಗ ಬದಲಾದ ರಾಜಕಾರಣದ ಸನ್ನಿವೇಶದಲ್ಲಿ ಸುಮಲತಾ ಅವರು ಬಿಜೆಪಿ ಬೆಂಬಲಿಸಿದರೆ, ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದ್ದರಿಂದ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಯಾರಿಗೆ ಹಂಚಿಕೆ ಮಾಡಬೇಕೆಂಬ ಗೊಂದಲ ಶುರುವಾಗಿದೆ.
undefined
ಬಿಜೆಪಿ ನೀಡಿದ್ದ 'ಘರ್ ವಾಪ್ಸಿ ಜಗದೀಶ್ ಶೆಟ್ಟರ್' ಸೀಕ್ರೆಟ್ ಟಾಸ್ಕ್ ಕಂಪ್ಲೀಟ್ ಮಾಡಿದ್ರಾ ಹೆಚ್.ಡಿ.ಕುಮಾರಸ್ವಾಮಿ!
ಆದ್ದರಿಂದ ಸಂಸದೆ ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ಮಂಡ್ಯ ಜಿಲ್ಲಾ ನಾಯಕರ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ಸುಮಲತಾ ಅಂಬರೀಶ್ ಜೊತೆ ಮಾತಾಡಿದ್ದೇವೆ. ನಾನು ಮಂಡ್ಯದಲ್ಲೆ ಸ್ಪರ್ಧೆ ಮಾಡ್ತೀನಿ ಅಂತ ಹೇಳಿದ್ದಾರೆ. ಬೇರೆ ಕಡೆ ಸ್ಪರ್ಧೆ ಮಾಡೊಲ್ಲ ಅಂತ ಹೇಳಿದ್ದಾರೆ. ಅಂಬರೀಶ್ ಹುಟ್ಟಿ ಬೆಳೆದ ಜಿಲ್ಲೆ ಮಂಡ್ಯ ಆಗಿದೆ. ಅವರ ಹೆಸರು ಉಳಿಸೋ ಕೆಲಸ ಮಾಡುತ್ತೇನೆಂದು ಅವರು ಹೇಳಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಂಡ್ಯದಲ್ಲಿ ಹುಟ್ಟಿ ಬೆಳೆದಿಲ್ಲ. ಜೊತೆಗೆ, ಕುಮಾರಸ್ವಾಮಿಗೆ ಅವರಿಗೆ ಲಕ್ಕಿ ಪ್ಲೇಸ್ ರಾಮನಗರವಾಗಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದು ಕೂಡ ರಾಮನಗರದಿಂದಲೇ. ಹೀಗಾಗಿ, ಅವರು ರಾಮನಗರದಲ್ಲಿಯೇ ಸ್ಪರ್ಧೆ ಮಾಡುತ್ತಾ, ನಮಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ.
ಅಂಬರೀಶ್ ಅವರ ಹುಟ್ಟು ಊರು ಮಂಡ್ಯ ಆಗಿದೆ. ಸುಮಲತಾ ಕೂಡಾ ಸ್ವಾತಂತ್ರ್ಯವಾಗಿ ಗೆದ್ದಿದ್ದರೂ ತ್ಯಾಗ ಮಾಡಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸುಮಲತಾಗೆ ಟಿಕೆಟ್ ಕೊಟ್ರೆ ಮಂಡ್ಯ ಕ್ಷೇತ್ರ ಮಾತ್ರವಲ್ಲದೇ ಕರ್ನಾಟಕ ರಾಜ್ಯ ಹಾಗೂ ಬೇರೆ ರಾಜ್ಯದಲ್ಲೂ ಬಿಜೆಪಿಗೆ ಅನುಕೂಲ ಆಗುತ್ತದೆ. ಹೈಕಮಾಂಡ್ ನಾಯಕರ ಜೊತೆ ಈ ಬಗ್ಗೆ ಮಾತನಾಡುವುದಾಗಿ ಸಂಸದೆ ಸುಮಲತಾ ಹೇಳಿದ್ದಾರೆ. ನಾವು ಕೂಡಾ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಹೈಕಮಾಂಡ್ ಜೊತೆ ಮಾತಾಡಿ ಮನವಿ ಮಾಡುತ್ತೇವೆ. ನಾವು ಎಲ್ಲರೂ ಒಗ್ಗಟ್ಟಾಗಿ ಕೇಳ್ತಿದ್ದೇವೆ. ಇಲ್ಲಿ ಅಂಬರೀಶ್ ಅವರ ಹೆಸರು ಉಳಿಸಬೇಕು. ನಮ್ಮ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಘರ್ ವಾಪ್ಸಿ ಯಶಸ್ವಿ: ಅಮಿತ್ ಶಾ ಜೊತೆಗೆ ಮಾತುಕತೆ ಬಳಿಕ ಬಿಜೆಪಿ ಬುಟ್ಟಿಗೆ ಬಿದ್ದ ಜಗದೀಶ್ ಶೆಟ್ಟರ್
ಮಂಡ್ಯದಲ್ಲಿ ಸುಮಲತಾ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಶೇ.100% ಗೆಲ್ತಾರೆ. ಮೋದಿ ಅವರ ಅಲೆ, ರಾಮಮಂದರಿ ನಿರ್ಮಾಣ ಸೇರಿ ಅನೇಕ ಅಭಿವೃದ್ಧಿ ಕೆಲಸ ಬಿಜೆಪಿ ಮಾಡಿದೆ. ಹೀಗಾಗಿ ಸುಮಲತಾ ದೊಡ್ಡ ಮತ ಪಡೆದು ಗೆಲ್ತಾರೆ. ಸುಮಲತಾ ಬಂದ ಮೇಲೆ ಮಂಡ್ಯದಲ್ಲಿ ಬಿಜೆಪಿಗೆ ಶಕ್ತಿ ಬಂದಿದೆ. ಖಂಡಿತ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಸಿಗುತ್ತದೆ. ಕುಮಾರಸ್ವಾಮಿ, ದೇವೇಗೌಡರಿಗೆ ಮನವಿ ಮಾಡ್ತೀವಿ. ಮಂಡ್ಯ ಒಂದು ಸೀಟು ಬಿಜೆಪಿಗೆ ಬಿಟ್ಟುಕೊಡಬೇಕು. ,ಮಂಡ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಬಗ್ಗೆ ಅಮಿತ್ ಶಾ, ಮೋದಿ ಅವರು, ಸಂತೋಷ್ ಜೀ ಅನೇಕ ಬಾರಿ ಮಾತಾಡಿದ್ದಾರೆ. ಅವರು ಕೂಡಾ ತ್ಯಾಗ ಮಾಡಿದ್ದಾರೆ. ಈಗ ಸುಮಲತಾ ಅವರು ಕೂಡಾ ನಾನು ಸ್ಪರ್ಧೆ ಮಾಡೇ ಮಾಡ್ತೀನಿ ಅಂತ ಹೇಳಿದ್ದಾರೆ. ಸುಮಲತಾ ಅವರಿಗೆ ಟಿಕೆಟ್ ಸಿಗಲಿದೆ ಎಂದು ನಾರಾಯಣಗೌಡ ಹೇಳಿದರು.