ADITYA-L1: ಚಂದ್ರಯಾನದ ಬಳಿಕ ಇಸ್ರೋದ ‘ಸೂರ‍್ಯಯಾನ!

By Kannadaprabha News  |  First Published Jul 23, 2023, 11:10 AM IST

ಆದಿತ್ಯ-ಎಲ್‌1 ಉಪಗ್ರಹ ಸೂರ್ಯನ ಹೊರಮೈಯ ವಾತಾವರಣ ಮತ್ತು ಭೂಮಿಯ ಮೇಲೆ ಅದರ ಪರಿಣಾಮಗಳನ್ನು ಅಧ್ಯಯನ ನಡೆಸುವ ಗುರಿ ಹೊಂದಿದೆ. ಸೂರ್ಯನ ಕುರಿತು ಮಾಹಿತಿ ಕಲೆಹಾಕಲು ಇದು ಆರು ವಿವಿಧ ಉಪಕರಣಗಳನ್ನು ಕೊಂಡೊಯ್ಯಲಿದ್ದು, ಸೂರ್ಯನ ಕಾಂತಕ್ಷೇತ್ರ ಮತ್ತು ಅದು ಹೊರಕಳುಹಿಸುವ ವಸ್ತುಗಳ ಅಧ್ಯಯನ ನಡೆಸಲಿದೆ.


ಗಿರೀಶ್‌ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Tap to resize

Latest Videos

ಆದಿತ್ಯ ಎನ್ನುವುದು ಸಂಸ್ಕೃತದಲ್ಲಿ ‘ಸೂರ್ಯ’ ಅಥವಾ ‘ಸೂರ್ಯ ದೇವ’ನಿಗಿರುವ ಹೆಸರು. ಆದಿತ್ಯ-ಎಲ…1 ಎನ್ನುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆಗೊಳಿಸಲಿರುವ, ವಿಶೇಷ ಸೂರ್ಯ ವೀಕ್ಷಣಾ ಉಪಗ್ರಹವಾಗಿರಲಿದೆ. ಈ ಯೋಜನೆ ಸೂರ್ಯನನ್ನು ಇನ್ನಷ್ಟುಹೆಚ್ಚು ಅರ್ಥ ಮಾಡಿಕೊಳ್ಳಲಿರುವ ದೊಡ್ಡ ವೈಜ್ಞಾನಿಕ ಪ್ರಯೋಗದ ರೀತಿ ಕಾರ್ಯಾಚರಿಸಲಿದೆ.

ಆರಂಭದಲ್ಲಿ, ಈ ಯೋಜನೆ ಭೂಮಿಗೆ ಸನಿಹದಲ್ಲಿದ್ದುಕೊಂಡು ಸುತ್ತುವ ಸಣ್ಣ ಉಪಗ್ರಹವನ್ನು ಹೊಂದುವುದಾಗಿ ಆಲೋಚಿಸಲಾಗಿತ್ತು. ಆದರೆ, ಬಳಿಕ ಇಸ್ರೋ ಇದನ್ನು ದೊಡ್ಡದಾಗಿ ಕೈಗೊಳ್ಳುವ ಯೋಜನೆ ರೂಪಿಸಿ, ಯೋಜನೆಗೆ ಆದಿತ್ಯ-ಎಲ…1 ಎಂದು ಮರುನಾಮಕರಣ ಮಾಡಿತು. ಈ ಯೋಜನೆಯಡಿ ಉಪಗ್ರಹವನ್ನು ಬಾಹ್ಯಾಕಾಶದಲ್ಲಿ ಒಂದು ವಿಶೇಷ ಸ್ಥಳದಲ್ಲಿ ಅಳವಡಿಸುವ ಉದ್ದೇಶ ಹೊಂದಿದೆ. ಅಂದರೆ, ಆ ಸ್ಥಳದಲ್ಲಿ ಭೂಮಿ ಮತ್ತು ಸೂರ್ಯನ ಗುರುತ್ವಾಕರ್ಷಣಾ ಬಲ ಒಂದಕ್ಕೊಂದು ಸಮಾನವಾಗಿರುತ್ತದೆ. ಈ ಸ್ಥಳ ನಮ್ಮಿಂದ 1.5 ಮಿಲಿಯನ್‌ ಕಿಲೋಮೀಟರ್‌ ದೂರದಲ್ಲಿರಲಿದೆ. ಅಲ್ಲಿಂದ ಉಪಗ್ರಹ ಅಡಚಣೆಯಿಲ್ಲದೆ ಸೂರ್ಯನನ್ನು ವೀಕ್ಷಿಸಲಿದೆ.

Mysterious Metal Dome: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತು, ಇಸ್ರೋದಿಂದ

ಈ ಯೋಜನೆಯನ್ನು ಆಗಸ್ಟ್‌ 26, 2023ರಂದು ಉಡಾವಣೆಗೊಳಿಸಲು ಉದ್ದೇಶಿಸಲಾಗಿದ್ದು, ಇದು ಸೂರ್ಯನ ಹೊರಮೈಯ ವಾತಾವರಣ ಮತ್ತು ಭೂಮಿಯ ಮೇಲೆ ಅದರ ಪರಿಣಾಮಗಳನ್ನು ಅಧ್ಯಯನ ನಡೆಸುವ ಗುರಿ ಹೊಂದಿದೆ. ಸೂರ್ಯನ ಕುರಿತು ಮಾಹಿತಿ ಕಲೆಹಾಕಲು ಆದಿತ್ಯ-ಎಲ…1 ಆರು ವಿವಿಧ ಉಪಕರಣಗಳನ್ನು ಕೊಂಡೊಯ್ಯಲಿದ್ದು, ಸೂರ್ಯನ ಕಾಂತಕ್ಷೇತ್ರ ಮತ್ತು ಅದು ಹೊರಕಳುಹಿಸುವ ವಸ್ತುಗಳನ್ನು ಅಧ್ಯಯನ ನಡೆಸಲಿದೆ.

ಸೂರ್ಯನ ರಹಸ್ಯ ಪತ್ತೆಗೆ 6 ಉಪಕರಣ

ಆದಿತ್ಯ-ಎಲ…1 ತನ್ನೊಡನೆ ಆರು ವೈಜ್ಞಾನಿಕ ಉಪಕರಣಗಳನ್ನು ಕೊಂಡೊಯ್ಯಲಿದೆ. ಪ್ರತಿಯೊಂದು ಉಪಕರಣವೂ ಪ್ರತ್ಯೇಕ, ವಿಶಿಷ್ಟಗುರಿಯನ್ನು ಹೊಂದಿರಲಿದೆ.

1. ವಿಸಿಬಲ… ಎಮಿಷನ್‌ ಲೈನ್‌ ಕರೋನಾಗ್ರಾಫ್‌ (ವಿಇಎಲ್‌ಸಿ)

ಇದು ಕರೋನಾ ಎಂದು ಕರೆಯಲಾಗುವ, ಸೂರ್ಯನ ಹೊರಮೈ ವಾತಾವರಣದ ಛಾಯಾಚಿತ್ರಗಳನ್ನು ತೆಗೆಯುವ ಕ್ಯಾಮರಾ ಆಗಿದೆ. ಕರೋನಾ ಎನ್ನುವುದು ಅತ್ಯಂತ ಬಿಸಿಯಾದ, ಹೊಳೆಯುವ ಅನಿಲದ ಪದರವಾಗಿದೆ. ಸೂರ್ಯ ಅತ್ಯಂತ ಪ್ರಕಾಶಮಾನವಾಗಿರುವ ಕಾರಣ ಈ ಪದರವನ್ನು ಭೂಮಿಯಿಂದ ಕಾಣಲು ಸಾಧ್ಯವಿಲ್ಲ.

2. ಸೋಲಾರ್‌ ಅಲ್ಟಾ್ರವಯೊಲೆಟ್‌ ಇಮೇಜ್‌ ಟೆಲಿಸ್ಕೋಪ್‌ (ಎಸ್‌ಯುಐಟಿ)

ಇದು ಸೂರ್ಯನ ಛಾಯಾಚಿತ್ರಗಳನ್ನು ತೆಗೆಯುವ ಇನ್ನೊಂದು ಕ್ಯಾಮರಾವಾಗಿದೆ. ಆದರೆ ಇದು ನೇರಳಾತೀತ ಕಿರಣಗಳಲ್ಲಿ ಸೂರ್ಯನ ಛಾಯಾಚಿತ್ರಗಳನ್ನು ತೆಗೆಯುತ್ತದೆ. ಈ ರೀತಿಯ ಬೆಳಕು ನಮಗೆ ಬರಿಗಣ್ಣಿಗೆ ಕಾಣಲು ಸಾಧ್ಯವಿಲ್ಲ. ಆದರೆ, ಇದು ಕರೋನಾಗಿಂತ ಕಡಿಮೆ ಉಷ್ಣತೆ ಹೊಂದಿರುವ, ಸೂರ್ಯನ ವಾತಾವರಣದ ಅಂಶಗಳ ಕುರಿತಾದ ಮಾಹಿತಿಗಳನ್ನು ಹೊಂದಿರುತ್ತದೆ.

3. ಆದಿತ್ಯ ಸೋಲಾರ್‌ ವಿಂಡ್‌ ಪಾರ್ಟಿಕಲ… ಎಕ್ಸ್‌ಪರಿಮೆಂಟ್‌ (ಎಎಸ್‌ಪಿಇಎಕ್ಸ್‌)

ಸರಳವಾಗಿ ಹೇಳುವುದಾದರೆ ಇದು ಕಣಗಳನ್ನು ಗ್ರಹಿಸುವ ಉಪಕರಣವಾಗಿದೆ. ಇದು ಸೂರ್ಯ ಬಾಹ್ಯಾಕಾಶಕ್ಕೆ ಬಿಡುಗಡೆಗೊಳಿಸುವ, ಭೂಮಿಯನ್ನೂ ದಾಟಿ ಮುಂದಕ್ಕೆ ಚಲಿಸುವ, ಸೋಲಾರ್‌ ವಿಂಡ್‌ ಕಣಗಳನ್ನು ಅಧ್ಯಯನ ನಡೆಸುತ್ತದೆ.

4. ಪ್ಲಾಸ್ಮಾ ಅನಲೈಸರ್‌ ಪ್ಯಾಕೇಜ್‌ ಫಾರ್‌ ಆದಿತ್ಯ (ಪಿಎಪಿಎ)

ಈ ಉಪಕರಣ ಬಾಹ್ಯಾಕಾಶದಲ್ಲಿ ಹವಾಮಾನ ಕೇಂದ್ರದ ರೀತಿಯಲ್ಲಿ ಕಾರ್ಯಾಚರಿಸಲಿದೆ. ಇದು ಸೂರ್ಯನಿಂದ ಸೋಲಾರ್‌ ವಿಂಡ್‌ ರೂಪದಲ್ಲಿ ಹೊರಬರುವ ವಿದ್ಯುದೀಕೃತ ಅನಿಲ ಅಥವಾ ‘ಪ್ಲಾಸ್ಮಾ’ವನ್ನು ಅಳೆಯಲಿದೆ.

5. ಸೋಲಾರ್‌ ಲೋ ಎನರ್ಜಿ ಎಕ್ಸ್‌-ರೇ ಸ್ಪೆಕ್ಟ್ರೋಮೀಟರ್‌ (ಎಸ್‌ಒಎಲ…ಇಎಕ್ಸ್‌ಎಎಸ್‌)

ಈ ಉಪಕರಣ ಸೂರ್ಯನನ್ನು ಹೈ ಎನರ್ಜಿ ಎಕ್ಸ್‌ ರೇ ಬೆಳಕಿನಲ್ಲಿ ವೀಕ್ಷಿಸಲಿದೆ. ಆ ಮೂಲಕ ಸೂರ್ಯನ ಕೆಲವು ಭಾಗಗಳು ಎಷ್ಟರಮಟ್ಟಿಗೆ ಬಿಸಿಯಾಗಿರುತ್ತವೆ ಎಂದು ತಿಳಿಯಲಾಗುತ್ತದೆ.

6. ಹೈ ಎನರ್ಜಿ ಎಲ…1 ಆರ್ಬಿಟಿಂಗ್‌ ಎಕ್ಸ್‌-ರೇ ಸ್ಪೆಕ್ಟ್ರೋಮೀಟರ್‌ (ಎಚ್‌ಇಎಲ…1ಒಎಸ್‌)

ಇದು ಇನ್ನೊಂದು ಎಕ್ಸ್‌ ರೇ ಬೆಳಕಿನ ಉಪಕರಣವಾಗಿದ್ದು, ಸೂರ್ಯನಿಂದ ಬರುವ ಇನ್ನಷ್ಟುಶಕ್ತಿಶಾಲಿ ಕ್ಷ-ಕಿರಣಗಳನ್ನು ಗಮನಿಸಲಿದೆ. ಇದು ಸೋಲಾರ್‌ ಫ್ಲೇರ್ಸ್‌ ಎಂಬ ಸೂರ್ಯನ ಮೇಲ್ಮೈಯ ಬೃಹತ್‌ ಸ್ಫೋಟಗಳನ್ನು ವೀಕ್ಷಿಸಲಿದೆ.

ಸೂರ್ಯನಲ್ಲಿ, ಸುತ್ತ ಏನಾಗುತ್ತಿದೆ?

ಆದಿತ್ಯ-ಎಲ…1 ಬಾಹ್ಯಾಕಾಶದಲ್ಲಿರುವ ವೈಜ್ಞಾನಿಕ ವೀಕ್ಷಕ ಉಪಕರಣವಾಗಿದ್ದು, ಈ ಆರು ವೈಜ್ಞಾನಿಕ ಉಪಕರಣಗಳನ್ನು ಬಳಸಿ ಸೂರ್ಯನ ರಹಸ್ಯಗಳನ್ನು ತಿಳಿಯಲು ನೆರವಾಗುತ್ತದೆ. ಪ್ರತಿಯೊಂದು ಉಪಕರಣವೂ ಸೂರ್ಯನ ಕುರಿತು ಬೇರೆ ಬೇರೆ ಆಯಾಮದ ಮಾಹಿತಿಗಳನ್ನು ಒದಗಿಸಲಿದ್ದು, ಅವೆಲ್ಲವೂ ಸೇರಿ, ಸೂರ್ಯನ ಒಳಗೆ ಮತ್ತು ಸುತ್ತಮುತ್ತ ಏನಾಗುತ್ತದೆ ಎಂಬುದರ ಕುರಿತು ಸಂಪೂರ್ಣ ಚಿತ್ರಣ ಒದಗಿಸುತ್ತವೆ.

ಆದಿತ್ಯ-ಎಲ…1 ಯೋಜನೆಗೆ, ಸ್ಪೇಸ್‌ಕ್ರಾಫ್‌್ಟಅನ್ನು ವಿಶೇಷ ಸ್ಥಾನದಲ್ಲಿ ಅಳವಡಿಸಲು ಇಸ್ರೋ ತನ್ನ ನಂಬಿಕಾರ್ಹವಾದ ಪಿಎಸ್‌ಎಲ್‌ವಿ ರಾಕೆಟ್‌ ಅನ್ನು ಬಳಸಲು ಉದ್ದೇಶಿಸಿದೆ. ಈ ಸ್ಥಳವನ್ನು ‘ಹ್ಯಾಲೋ ಆರ್ಬಿಟ್‌’ ಎಂದು ಕರೆಯಲಾಗುತ್ತದೆ. ಇದು ಲ್ಯಾಗ್ರೇಂಜಿಯನ್‌ ಪಾಯಿಂಟ್‌ 1 (ಅಥವಾ ಸರಳವಾಗಿ ಎಲ…1) ಸುತ್ತಲಿದೆ. ಉದಾಹರಣೆಗೆ, ನೀವು ಎರಡೂ ಕೈಗಳಲ್ಲಿ ಒಂದೊಂದು ಅಯಸ್ಕಾಂತಗಳನ್ನು ಹಿಡಿದಿದ್ದೀರಿ ಎಂದುಕೊಳ್ಳಿ. ಅವೆರಡನ್ನೂ ಒಂದರಿಂದ ಒಂದು ದೂರಕ್ಕೆ ಕೊಂಡೊಯ್ದ ಹಾಗೇ, ಒಂದು ಸ್ಥಳದಲ್ಲಿ ಅವುಗಳ ಕಾಂತೀಯ ಬಲ ಒಂದಕ್ಕೊಂದು ಸಮನಾಗಿ, ಅಳಿಸಿಹೋಗುತ್ತವೆ. ಈ ಎಲ…1 ಬಿಂದುವೂ ಅದೇ ರೀತಿಯದಾಗಿದೆ. ಇಲ್ಲಿ ಕಾಂತಗಳ ಬದಲಿಗೆ ಸೂರ್ಯ ಮತ್ತು ಭೂಮಿ ಇರುತ್ತವೆ. ಎಲ…1 ಬಿಂದು ಭೂಮಿಯಿಂದ ಬಹುತೇಕ 1.5 ಮಿಲಿಯನ್‌ ಕಿಲೋಮೀಟರ್‌ ದೂರದಲ್ಲಿದೆ. ಆ ಸ್ಥಳದ ವೈಶಿಷ್ಟ್ಯವೆಂದರೆ, ಅಲ್ಲಿಂದ ಸ್ಪೇಸ್‌ಕ್ರಾಫ್‌್ಟಸದಾಕಾಲವೂ, ಯಾವುದೇ ಅಡೆತಡೆಯಿಲ್ಲದೆ ಸೂರ್ಯನನ್ನು ನೋಡುತ್ತಾ ಇರಬಹುದು. ಸದಾ ಸೂರ್ಯನನ್ನು ಅಧ್ಯಯನ ನಡೆಸುವ ಆದಿತ್ಯ-ಎಲ…1ಗೆ ಇದು ಅತ್ಯಂತ ಸೂಕ್ತ ಸ್ಥಳವಾಗಿದೆ.

ಆದಿತ್ಯ-ಎಲ…1 ಯೋಜನೆಗೆ ಉಡಾವಣೆಯ ನಂತರ ‘ಹ್ಯಾಲೋ ಆರ್ಬಿಟ್‌’ ತಲುಪಲು ಅಂದಾಜು 109 ಭೂಮಿಯ ದಿನಗಳ ಕಾಲಾವಧಿ ಬೇಕಾಗುತ್ತದೆ.

ಸೂರ್ಯ ಸಾಮ್ರಾಜ್ಯದ ಅನ್ವೇಷಣೆ

ಸೋಲಾರ್‌ ಆರ್ಬಿಟರ್‌ (ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಮತ್ತು ನಾಸಾ): ಫೆಬ್ರವರಿ 2020ರಲ್ಲಿ ಉಡಾವಣೆಗೊಂಡ ಈ ಯೋಜನೆ ಸನಿಹದಿಂದ ಹೀಲಿಯೋಸ್ಫಿಯರ್‌ (ಸೂರ್ಯನ ಪ್ರಾಬಲ್ಯ ಹೆಚ್ಚಿರುವ, ಬಾಹ್ಯಾಕಾಶದಲ್ಲಿರುವ ಗುಳ್ಳೆಯಂತಹ ಪ್ರದೇಶ) ಅನ್ನು ವಿಶದವಾಗಿ ಪರಿಶೀಲಿಸುವ ಉದ್ದೇಶ ಹೊಂದಿದೆ.

ಪಾರ್ಕರ್‌ ಸೋಲಾರ್‌ ಪ್ರೋಬ್‌ (ಅಮೆರಿಕಾ, ನಾಸಾ):

2010ರಲ್ಲಿ ಉಡಾವಣೆಗೊಂಡ ಈ ಯೋಜನೆ ಸೂರ್ಯನ ವಾತಾವರಣ ಹಾಗೂ ಕಾಂತಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ಹರಿಸುತ್ತದೆ. ಆ ಮೂಲಕ ಸೌರಶಕ್ತಿಯ ಬದಲಾವಣೆ ಮತ್ತು ಭೂಮಿಯ ಮೇಲೆ ಅದರ ಪರಿಣಾಮಗಳನ್ನು ತಿಳಿಯಲು ಸಾಧ್ಯವಾಗುತ್ತದೆ.

ಹಿನೋಡೆ (ಜಪಾನ್‌ ಏರೋಸ್ಪೇಸ್‌ ಎಕ್ಸ್‌ಪ್ಲೋರೇಶನ್‌ ಏಜೆನ್ಸಿ - ಜಾಕ್ಸಾ, ನಾಸಾ ಮತ್ತು ಯುಕೆಯ ಪಾರ್ಟಿಕಲ… ಫಿಸಿಕ್ಸ್‌ ಆ್ಯಂಡ್‌ ಆ್ಯಸ್ಟೊ್ರೕನಮಿ ರಿಸಚ್‌ರ್‍ ಕೌನ್ಸಿಲ…):

2006ರಲ್ಲಿ ಉಡಾವಣೆಗೊಂಡ ಈ ಯೋಜನೆ ಸೂರ್ಯನ ಕಾಂತಕ್ಷೇತ್ರದ ಕುರಿತು ಅಧ್ಯಯನ ನಡೆಸುತ್ತದೆ. ಆ ಮೂಲಕ ಸೌರಶಕ್ತಿಯಲ್ಲಿನ ಬದಲಾವಣೆ ಮತ್ತು ಭೂಮಿಯ ಮೇಲೆ ಅದರ ಪರಿಣಾಮಗಳನ್ನು ತಿಳಿಯಲು ಸಾಧ್ಯವಾಗುತ್ತದೆ.

ಸ್ಟೀರಿಯೋ (ಅಮೆರಿಕಾ, ನಾಸಾ): 2006ಲ್ಲಿ ಉಡಾವಣೆಗೊಂಡ ಈ ಯೋಜನೆ ಸೂರ್ಯ ಮತ್ತು ಸೂರ್ಯನ ತಾಪ ಉಗುಳುವಿಕೆಯ 3ಡಿ ಮಾದರಿಯ ನೋಟವನ್ನು ಪಡೆಯಲು ಎರಡು ಒಂದೇ ರೀತಿಯ ಸ್ಪೇಸ್‌ಕ್ರಾಫ್‌್ಟಗಳನ್ನು ಹೊಂದಿದೆ.

ಯುಲಿಸ್ಸೆಸ್‌ (ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಮತ್ತು ನಾಸಾ):

1990ರಲ್ಲಿ ಉಡಾವಣೆಗೊಂಡ ಈ ಯೋಜನೆ ಸೂರ್ಯನ ಧ್ರುವಗಳ ಅಧ್ಯಯನ ನಡೆಸುವ ಮೊತ್ತಮೊದಲ ಯೋಜನೆಯಾಗಿತ್ತು.

ಸೋಲಾರ್‌ ಆ್ಯಂಡ್‌ ಹೀಲಿಯೋಸ್ಫಿಯರಿಕ್‌ ಅಬ್ಸರ್ವೇಟರಿ (ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಮತ್ತು ನಾಸಾ): 1995ರಲ್ಲಿ ಉಡಾವಣೆಗೊಂಡ ಈ ಯೋಜನೆ, ಸೂರ್ಯನ ರಚನೆ ಮತ್ತು ಪರಿಚಲನೆ, ಕರೋನಾದ ಬಿಸಿಯಾಗುವಿಕೆ, ಸೋಲಾರ್‌ ಸ್ಟಾಮ್‌ರ್‍ ಉಂಟಾಗಲು ಕಾರಣವಾದ ಸೋಲಾರ್‌ ವಿಂಡ್‌ ನಿರ್ಮಾಣ ಮತ್ತು ಸೋಲಾರ್‌ ಅಸ್ಥಿರತೆಗಳ ಕುರಿತು ಮಾಹಿತಿ ನೀಡುತ್ತದೆ.

ಚಂದ್ರಯಾನದ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ವಿಜ್ಞಾನಿಗಳು

ಈ ಎಲ್ಲ ಯೋಜನೆಗಳು ಸೂರ್ಯನ ಕುರಿತು ಅಪಾರ ಮಾಹಿತಿ ಒದಗಿಸಿ, ಸೂರ್ಯನನ್ನು ಉತ್ತಮವಾಗಿ ಅರ್ಥೈಸಿಕೊಳ್ಳಲು, ಸೌರಮಂಡಲದ ಮೇಲೆ ಸೂರ್ಯನ ಪ್ರಭಾವವನ್ನು ತಿಳಿಯಲು ನೆರವಾಗುತ್ತವೆ.

click me!